Uncategorized

ಏನ್ ಗುರೂ ಇದು KarnAAtaka.com

 

ಕರ್ನಾಟಕ.com(KarnAAtaka.com) ನಿಮ್ಮ ಮುಂದೆ. ಸುದ್ದಿಗೆ ಸಾವಿರ ಮೂಲ, ಟ್ವಿಟರ್‌ನಿಂದ ಹಿಡಿದು ಟಿವಿ ತನಕ ನೀವು ಪ್ರತಿದಿನ ನೂರಾರು ಸುದ್ದಿಗಳನ್ನು ನೋಡಿರ್ತೀರಿ. ಆದ್ರೆ ಇತ್ತೀಚಿನ ದಿನಗಳಲ್ಲಿ ಹೆಚ್ವು ಜನರನ್ನು ತಲುಪಿತ್ತಿರೋದು ಇಂಟರ್ನೆಟ್ ಸುದ್ದಿ ಪೋರ್ಟಲ್‌ಗಳು. ಕನ್ನಡದಲ್ಲಿ ಹತ್ತಾರು ಸುದ್ದಿ ಪೋರ್ಟಲ್‌ಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಅದಕ್ಕೊಂದು ಹೊಸ ಸೇರ್ಪಡೆ ಈ KarnAAtaka.com.

ಇವತ್ತು ಸಾಕಷ್ಟು ಸುದ್ದಿ ಸಂಸ್ಥೆಗಳು ತನ್ನದೇ ಆದಂತಹ ಅಜೆಂಡಾ ಸೆಟ್ ಮಾಡಿಕೊಂಡಿರ್ತವೆ. ಕೆಲವಂತೂ ಪ್ರಭಾವಿಗಳ ಹಿಡಿತದಲ್ಲಿವೆ. ಹೀಗಿರುವಾಗ ನಿಷ್ಠುರ ವರದಿಗಳನ್ನು ನಿರೀಕ್ಷೆ ಮಾಡೋದೇ ಮೂರ್ಖತನವಾದೀತು. ಆದ್ರೆ ನಮ್ಮ KarnAAtaka.comಗೆ ಅದ್ಯಾವ ಹಂಗಿಲ್ಲ, ಯಾರ ಭಯವೂ ಇಲ್ಲ. ಲೆಫ್ಟು ರೈಟು ನಮಗರಿವಿಲ್ಲ..! ಸುದ್ದಿ ನೇರವಾಗಿರುತ್ತದೆ, ಪ್ರಖರವಾಗಿರುತ್ತದೆ.

ಬರಿಯ ಸುದ್ದಿಗೆ ಮಾತ್ರ ಸೀಮಿತವಾಗದೇ ಸುದ್ದಿ ಸಂಬಂಧೀ ಹಾಗೂ ಜೀವನ ಪಾಟದ ಲೇಖನಗಳಿಗೆ ಹೆಚ್ಚು ಒತ್ತು ಕೊಡಲಾಗುತ್ತೆ. ರಾಜಕೀಯವಾಗಿ ನಮಗೆ ಯಾವ ಪಕ್ಷವೂ ಇಲ್ಲ, ಧರ್ಮದ ವಿಚಾರದಲ್ಲಿ ಬೆಂಕಿ ಹಚ್ಚೋ ಕೆಲಸ ನಮಗೆ ಗೊತ್ತಿಲ್ಲ. ಕರ್ನಾಟಕ, ನಾಡು, ನುಡಿ, ಸಂಸ್ಕೃತಿ ಎತ್ತಿ ಹಿಡಿಯುವ ಧೃಡ ನಿರ್ಧಾರ ಮಾಡಿದ್ದೇವೆ. ದೇಶ, ಯೋಧನ ಜೊತೆಗೆ ಶಕ್ತಿಯಾಗಬೇಕು ಎಂಬ ಮಹದಾಸೆಯೂ ಇದೆ. ಈಗ ನಾವು ನಿಮ್ಮ ಕೈಬೆರಳ ತುದಿ ತಲುಪಿದ್ದೇವೆ. ಓದಿ, ತಿದ್ದಿ, ಗುದ್ದಿ… ನಿಮ್ಮ ಹಾರೈಕೆಗಳು ನಮ್ಮ ತಂಡದ ಜೊತೆಗಿರಲಿ…

#TeamKarnaaTaka

Show More

Leave a Reply

Your email address will not be published. Required fields are marked *

Close