ಏನ್ ಸುದ್ದಿ?

ಬೆಂಗಳೂರು ಏರ್ ಪೋರ್ಟಲ್ಲಿ ಕನ್ನಡ ಮಾತಾಡಿದ್ಕೆ ಬೋರ್ಡಿಂಗ್ ಪಾಸ್ ಕೊಡ್ಲಿಲ್ಲ..!

ಹೌದು… ಈ ತರಹದ್ದೊಂದು ಘಟನೆ ನಿನ್ನೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ. ಈ ಕುರಿತು ಬಾಲಾಜಿ ನಾರಾಯಣ ಮೂರ್ತಿ ಅನ್ನೋರು ‘ಗೋ ಏರ್’ ಸಂಸ್ಥೆಯ ವಿರುದ್ಧ ಆರೋಪಿಸಿದ್ದಾರೆ..!

ನಿನ್ನೆ ಬೆಳಗ್ಗೆ 5.45ಕ್ಕೆ ಬಾಲಾಜಿ ಅವರು ಬೆಂಗಳೂರಿನಿಂದ ಮುಂಬೈಗೆ ಟಿಕೆಟ್ ಬುಕ್ ಮಾಡಿದ್ರು. ಹಿಂದಿನ ರಾತ್ರಿ ಬೆಂಗಳೂರಿನಲ್ಲಿ ಭಯಂಕರ ಮಳೆ ಬಂದಿದ್ದರಿಂದ ಕಾರಣಾಂತರಗಳಿಂದ ಮೂರು ನಿಮಿಷ ತಡವಾಗಿ ಚೆಕ್ ಇನ್ ಕೌಂಟರ್ ತಲುಪಿದ್ದಾರೆ. ಅಷ್ಟು ಹೊತ್ತಿಗಾಗಲೇ ಚೆಕ್ ಇನ್ ಮುಗಿದಿದ್ದರಿಂದ ಬಾಲಾಜಿ ಅವರ ಹಾಗೆಯೇ ಹದಿನಾಲ್ಕು ಜನರಿಗೆ ವಿಮಾನ ಮಿಸ್ ಆಗಿದೆ. ಈ ಸಂದರ್ಭದಲ್ಲಿ ಅಲ್ಲಿದ್ದ ‘ಗೋ ಏರ್’ ಸಿಬ್ಬಂದಿ ಜೊತೆ ಮಾತನಾಡುವಾಗ ಬಾಲಾಜಿ‌ ಕನ್ನಡದಲ್ಲಿ ಮಾತನಾಡಿದ್ದಾರೆ. ಆ ಅಧಿಕಾರಿ ‘ಇಂಗ್ಲಿಷ್ ಬರಲ್ವಾ’ ಅಂತ ರೇಗಿದ್ದಾನೆ. ಬಾಲಾಜಿ ಅವರು ‘ಕನ್ನಡ ಮಾತಾಡಬಾರದಾ?’ ಅಂದಿದ್ದಕ್ಕೆ, ವಿಮಾನ ನಿಲ್ದಾಣದಲ್ಲಿ ಕನ್ನಡ ಮಾತನಾಡಬಾರದು ಅಂತ ಏರುಧ್ವನಿಯಲ್ಲಿ ಉತ್ತರಿಸಿದ್ದಾನೆ.

ಇದರಿಂದಾಗಿ ಸ್ವಲ್ಪ ಹೊತ್ತು ಮಾತಿನ ಚಕಮಕಿಯೂ ಆಗಿದೆ. ಮಿಸ್ ಆದ ವಿಮಾನ ಹೋದರೆ ಹೋಯ್ತು ಮುಂದಿನ ವಿಮಾನಕ್ಕಾದ್ರೂ ಟಿಕೆಟ್ ವ್ಯವಸ್ಥೆ ಮಾಡಿ ಅಂತ ಎಲ್ಲರೂ ಕೇಲಳಿಕೊಂಡಿದ್ದಾರೆ. ಅಷ್ಟರಲ್ಲಿ ಅಲ್ಲಿಗೆ ಬಂದ ಹಿರಿಯ ಅಧಿಕಾರಿಯೊಬ್ಬರು ಎಲ್ಲರಿಗು ಟಿಕೆಟ್ ವ್ಯವಸ್ತೆ ಮಾಡುವಂತೆ ಈ ಹಿಂದೆ ಜಗಳವಾಡಿದ್ದ ಸಿಬ್ಬಂದಿಗೆ ಹೇಳಿಹೋಗಿದ್ದಾರೆ.
ಅವರ ಮಾತಿನಂತೆ ಆ ಸಿಬ್ಬಂದಿ ಎಲ್ಲರಿಗೂ ಬೋರ್ಡಿಂಗ್ ಪಾಸ್ ವ್ಯವಸ್ಥೆ ಮಾಡಿ, ಕೊನೆಯಲ್ಲಿದ್ದ ಬಾಲಾಜಿಯವರಿಗೆ ‘ಇಂಗ್ಲೀಷಲ್ಲಿ ಮಾತಾಡಿದ್ರೆ ಮಾತ್ರ ಟಿಕೆಟ್ ಕೊಡ್ತೀನಿ’ ಅಂದಿದ್ದಾರೆ. ಇದನ್ನು ಕೇಳಿದ ಬಾಲಾಜಿಯವರು ಯಾವುದೇ ಕಾರಣಕ್ಕೂ ಇಂಗ್ಲಿಷಲ್ಲಿ ಮಾತಾಡಲ್ಲ ಅಂದಿದ್ದಾರೆ. ಹಾಗಾದ್ರೆ ನಿಮಗೆ ಟಿಕೆಟ್ ಕೊಡಲ್ಲ ಅಂತ ಅ ಸಿಬ್ಬಂದಿ ಹೊರಟುಹೋಗಿದ್ದಾರೆ..!


ನಂತರ ಬೆರೆ ವಿಮಾನಯಾನ ಸಂಸ್ಥೆಯಿಂದ ಟಿಕೆಟ್ ಪಡೆದು ಬಾಲಾಜಿ ಮುಂಬೈಗೆ ಪ್ರಯಾಣ ಬಳಸಿದ್ದಾರೆ. ಈ ಬಗ್ಗೆ ತಮ್ಮ ಫೇಸ್‌ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ. ಕೆಲವು ಪತ್ರಿಕೆಗಳೂ ಈ ಕುರಿತು ವರದಿ ಮಾಡಿವೆ. ‘ಗೋ ಏರ್’ ಸಂಸ್ಥೆ ಈ ಆರೋಪವನ್ನು ಅಲ್ಲಗಳೆದಿದೆ. ವಿಮಾನ ಮಿಸ್ ಮಾಡಿಕೊಂಡವರು ಹೀಗೆ ಇಲ್ಲಸಲ್ಲದ ಆರೋಪ ಮಾಡೋದು ಹೊಸತೇನಲ್ಲ, ಆದ್ರೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ನಮ್ಮ ಸಿಬ್ಬಂದಿಯ ತಪ್ಪಿದ್ದಲ್ಲಿ ಕ್ರಮತೆಗೆದುಕೊಳ್ಳುತ್ತೇವೆಂದು ಗೋ ಎರ್ ಸಂಸ್ಥೆಯ ವೈಭವ್ ತಿವಾರಿ ತಿಳಿಸಿದ್ದಾರೆ.
ಏನ್ ಕಾಲ ಬಂತು..? ಬೆಂಗಳೂರಿನಲ್ಲಿ, ಅದ್ರಲ್ಲೂ ಕೆಂಪೇಗೌಡರ ಹೆಸರಿರೋ ವಿಮಾನ ನಿಲ್ದಾಣದಲ್ಲಿ ಕನ್ನಡಕ್ಕೆ ಹೀಗೆ ಅವಮಾನ ಮಾಡಿದ್ರೆ ಹೇಗೆ..? ಗೋ ಏರ್ ಸಂಸ್ಥೆ ಇದನ್ನು ಸೀರಿಯಸ್ ಆಗಿ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಮತ್ತು ಅವಶ್ಯಕತೆ ಇದೆ..

Show More

Related Articles

Leave a Reply

Your email address will not be published. Required fields are marked *

Close