ಏನ್ ಸುದ್ದಿ?

ಈ ವಾರದ ಟಿ.ಆರ್.ಪಿ ಇಲ್ಲಿದೆ ನೋಡಿ…

ಬಾರ್ಕ್‌ನ 39ನೇ ವಾರದ ಟಿವಿ ರೇಟಿಂಗ್ ಬಿಡುಗಡೆಯಾಗಿದೆ.ಅಕ್ಟೋಬರ್ 2ರಂದು ಗಾಂಧಿ ಜಯಂತಿಗೆ ರಜೆ ಇದ್ದಿದ್ದರಿಂದ TRP ಒಂದು ದಿನ ತಡವಾಗಿ ಬಂದಿದೆ.. ಈ ವಾರ ಯಾವ್ಯಾವ ನ್ಯೂಸ್ ವಾಹಿನಿಗಳು ಯಾವ ಯಾವ ಸ್ಥಾನದಲ್ಲಿದೆ ಅಂತ ತಿಳ್ಕೊಳೋ ಸಮಯ ಇದು…

   
ಎಂದಿನಂತೆ ಟಿವಿ9 ಈ ವಾರವೂ ನಂಬರ್ 1. ಈ ಬಾರಿ ಕರ್ನಾಟಕದಲ್ಲಿ 105 ಪಾಯಿಂಟ್ ಗಳಿಸಿರೋ ಟಿವಿ9 ಕಳೆದ ವಾರದ 105ನ್ನು ಹಾಗೆಯೇ ಉಳಿಸಿಕೊಂಡಿದೆ.
ಎರಡನೇ ಸ್ಥಾನದಲ್ಲಿ ಪಬ್ಲಿಕ್ ಟಿವಿ ಮತ್ತು ಮೂರನೇ ಸ್ಥಾನದಲ್ಲಿ ಸುವರ್ಣ ನ್ಯೂಸ್ ಈ ವಾರವೂ ಮುಂದುವರೆದಿದೆ. ಕಳೆದ ವಾರ ಪಬ್ಲಿಕ್ ಟಿವಿ ೬೬ ಪಾಯಿಂಟ್ ಪಡೆದರೆ, ಈ ವಾರ 6೪ ಪಾಯಿಂಟ್ ಪಡೆದು 2 ಪಾಯಿಂಟ್ ಕಳೆದುಕೊಂಡಿದೆ. ಸುವರ್ಣ ನ್ಯೂಸ್ 3೮ನೇ ವಾರದಲ್ಲಿ 44 ಪಾಯಿಂಟ್ ಗಳಿಸಿತ್ತು. ಈ ವಾರ 39 ಪಾಯಿಂಟ್‌ನಿಂದಾಗಿ ೪ ಪಾಯಿಂಟ್ ಕಳೆದುಕೊಂಡಿದೆ.


ನಾಲ್ಕನೇ ಸ್ಥಾನದಲ್ಲಿ ಈ ವಾರ ಈಟಿವಿ ನ್ಯೂಸ್ ಕಳೆದವಾರದಷ್ಟೆ, ಅಂದ್ರೆ 29 ಪಾಯಿಂಟ್‌ ಪಡೆದ್ರೆ, ಐದನೇ ಸ್ಥಾನದಲ್ಲಿ ಬಿಟಿವಿ 23 ಪಾಯಿಂಟ್ ಪಡೆದಿದೆ.
ಇನ್ನುಳಿದಂತೆ ಉದಯ ನ್ಯೂಸ್ 18, ದಿಗ್ವಿಜಯ 17, ಪ್ರಜಾ ಟಿವಿ 13, ಕಸ್ತೂರಿ‌ ನ್ಯೂಸ್ 10, ಸುದ್ಧಿ 9, ಸಮಯ ನ್ಯೂಸ್ ಹಾಗೂ ರಾಜ್ ನ್ಯೂಸ್  6,  ಜನಶ್ರೀ 4 ಪಾಯಿಂಟ್ ಪಡೆದಿವೆ..
ಇದು ಈ ವಾರದ ಕರ್ನಾಟಕದ ನ್ಯೂಸ್ ವಾಹಿನಿಗಳ ಟಿ.ಆರ್.ಪಿ ಮಾಹಿತಿ…

Source : BARC Ratings Week 39. 15+ all adults

Show More

Related Articles

Leave a Reply

Your email address will not be published. Required fields are marked *

Close