ಐತ್ ಲಗಾ

ಈ ನೀರಿನ ಬಾಟಲ್ ಬೆಲೆ 65 ಲಕ್ಷ ರೂಪಾಯಿ..!

ದೇವ್ರಾಣೆ ನಿಜ… ಈ ನೀರಿನ ಬಾಟಲಿಯ ಬೆಲೆ ಬರೋಬ್ಬರಿ 65 ಲಕ್ಷ ರೂಪಾಯಿ…!!! ಏನ್ ಗುರೂ, ಹೇಳೋಕೆ ಒಂದು ಇತಿಮಿತಿ ಬೇಡ್ವಾ, ಯಾವನಾದ್ರೂ ಅಷ್ಟು ದುಡ್ಡು ಕೊಟ್ಟು ನೀರಿನ ಬಾಟಲಿ ತಗೋತಾನಾ ಅಂತ ನೀವು ಕೇಳ್ಬೋದು. ಆದ್ರೆ ನಿಜವಾಗ್ಲೂ ಕೆಲವರು ಇದನ್ನ ತಗೊಂಡಿದಾರೆ. ಒಂದು ಲೀಟರ್ ನೀರಿನ ಬಾಟಲಿಗೆ ಒಂದು ಲಕ್ಷ ಡಾಲರ್ ಕೊಟ್ಟಿದ್ದಾರೆ. ಅಂದ್ರೆ ಭಾರತದ ರೂಪಾಯಿ ಲೆಕ್ಕಾಚಾರದಲ್ಲಿ 65 ಲಕ್ಷ ರೂಪಾಯಿ..!!!


ಬೆವರ್ಲಿ ಹಿಲ್ಸ್ 90H2O ಅನ್ನೋ ಕಂಪನಿಯ ನೀರಿನ ಬಾಟಲ್ವಿದೆ. ಇದು ಸ್ಪೆಷಲ್ ಎಡಿಷನ್ ಅಂತೆ. ಮತ್ತೆ ಇದರ ಹೆಸರು ‘ಡೈಮಂಡ್ ಎಡಿಷನ್’. ಈ ಪ್ರಪಂಚದ ಎಲ್ಲಾ ನೀರಿಗಿಂತ ಉತ್ಕ್ರಷ್ಟ ಅಂತೆ, ಇದು ಸಿಕ್ಕಾಪಟ್ಟೆ ಹಳೆಯ ಬೆಸ್ಟ್ ಮದ್ಯಕ್ಕಿಂತ ಒಂದು ಲೆವೆಲ್ ಜಾಸ್ತಿ ಅಂತೆ. ಇದನ್ನು ಕುಡಿಯೋದು ನಿಮ್ಮ ಸ್ಟೇಟಸ್ ಹೆಚ್ಚಿಸುತ್ತಂತೆ..! ಅದೇನೇ ಆಗ್ಲಿ, ನೀರಿನ ಬಾಟ್ಲಿಗೆ ಇಷ್ಟು ರೇಟು ಅಂದ್ರೆ ಆ ದೇವ್ರೂ ಮೆಚ್ಚಲ್ಲ ಅನ್ನೋದಾದ್ರೆ ವಿಷಯ ಬೇರೇನೇ ಇದೆ…

ಈ ಕಂಪನಿಯ ಮಾಮೂಲಿ ನೀರಿನ ಬಾಟಲಿ ಅರ್ಧ ಲೀಟರಿಗೆ 100 ರೂಪಾಯಿಗೆ ಸಿಗುತ್ತೆ. ಆದ್ರೆ ಈ ಒಂದು ಲೀಟರ್ ಬಾಟಲಿಗೆ ಮಾತ್ರ ಇಷ್ಟು ಬೇಲೆ. ಕಾರಣ, ಇದು ಬರಿಯ ನೀರಿನ ಬಾಟಲ್ ಅಲ್ಲ, ಚಿನ್ನ ಮತ್ತು ವಜ್ರದ ನೀರಿನ ಬಾಟಲ್..! ಇದರ ಕ್ಯಾಪ್ ಚಿನ್ನದ್ದು, ಮತ್ತು ಅದರಲ್ಲಿ ಬಿಳಿಯ ವಜ್ರದ ಜೊತೆಗೆ 250ಕ್ಕೂ ಹೆಚ್ಚು ಬ್ಲ್ಯಾಕ್ ಡೈಮಂಡ್ ಇದೆಯಂತೆ. ಏನಿಲ್ಲ ಅಂದ್ರೂ 14ಕ್ಯಾರಟ್ ವಜ್ರದ ಮುಚ್ಚಳ ಅಂತೆ ಈ ನೀರಿನ ಬಾಟಲೀದು… ಇದು ವಿಷ್ಯ…!

ಇವ್ರು ಇದಕ್ಕೆ ನೀರಿನ ಹೆಸರಿಟ್ಟು ವಜ್ರ ಮಾರೋ ಬದಲು, ನೇರವಾಗಿ ವಜ್ರಾನೇ ಮಾರಬಹುದಿತ್ತೇನೋ… ಪ್ರಸ್ತುತ ಈ ಬಾಟಲಿ ಭಾರತದಲ್ಲೂ ಬಿಡುಗಡೆ ಮಾಡ್ತಿದ್ದಾರೆ. ಯಾರಾದ್ರೂ ತಗೊಂಡ್ರೆ ನೀರು ನೀವು ಕುಡೀರಿ, ಬಾಟಲಿ ನೀವೇ ಇಟ್ಕೊಳಿ. ಮುಚ್ಚಳ ನಮಗೆ ಕೊಟ್ಬಿಡ್ರಪ್ಪ.. ಹಹ್ಹಹ್ಹ…

Source : https://www.facebook.com/beverlywater

Tags
Show More

Related Articles

Leave a Reply

Your email address will not be published. Required fields are marked *

Close