ಏನ್ ಸುದ್ದಿ?

ಬಿಗ್‌ಬಾಸ್ 5, 17 ಜನ ,ಯಾರು? ಏನು? ಯಾಕೆ?

ಕನ್ನಡದ ಟಿವಿ ಶೋಗಳ ರಾಜ ಬಿಗ್‌ಬಾಸ್ ಮತ್ತೆ ಆರಂಭವಾಗಿದೆ. ಇದು ಸೀಸನ್ 5. ಈ ಸಲ ವಿಶೇಷ ಏನಪ್ಪಾ ಅಂದ್ರೆ ಸೆಲೆಬ್ರಿಟಿಗಳ ಜೊತೆ ಜನ ಸಾಮಾನ್ಯರೂ ಎಂಟ್ರಿ ಕೊಟ್ಟಿರೋದು. ಮೊದಲ ದಿನವೇ ಕೆಲವು ಸ್ಪರ್ಧಿಗಳು ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದ್ದಾರೆ. ಟ್ರಾಲ್ ಪೇಜ್ ಅಡ್ಮಿನ್‌ಗಳಿಗೆ ಫುಲ್ ಮೀಲ್ಸ್ ಆಗಿದ್ದಾರೆ. ಅಂದಹಾಗೆ ಯಾರ್‌ ಯಾರು ಹೋಗಿದ್ದಾರೆ ಅಂತ ನಿಮ್ಗೆ ಗೊತ್ತಾಗಿರಬೇಕು.


ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಖ್ಯಾತ ಸಂಖ್ಯಾಶಾಸ್ತ್ರಜ್ಞ ಜಯ ಶ್ರೀನಿವಾಸನ್, ನಿರ್ದೇಶಕ ದಯಾಳ್ ಪದ್ಮನಾಭನ್, ಖ್ಯಾತ ನಟ ಸಿಹಿಕಹಿ ಚಂದ್ರು, ಗಾಯಕಿ ಶ್ರುತಿ ಪ್ರಕಾಶ್, ಅಕ್ಕ ಧಾರಾವಾಹಿಯ ಅನುಪಮಾ, ಅಶ್ವಿನಿ ನಕ್ಷತ್ರದ ಜೆಕೆ, ನಟಿ ಆಶಿತಾ ಚಂದ್ರಪ್ಪ, ನಾಯಕಿ ತೇಜಸ್ವಿನಿ, ಕನ್ನಡದ ರ್ಯಾಪ್ ಕಿಂಗ್ ಚಂದನ್ ಶೆಟ್ಟಿ, ಗಾಂಧಾರಿಯ ಜಗನ್, ಹಾಗೂ ಅಕಿರ ಸಿನಿಮಾದ ನಾಯಕಿ ಕೃಷಿ ತಾಪಂಡ ಎಂಟ್ರಿ ಕೊಟ್ಟಿದ್ದಾರೆ.


ಸಾಮಾನ್ಯರ ಸಾಲಿನಲ್ಲಿ ಕೊಡಗಿನ ಮೇಘ, ರಿಯಾಜ್ ಭಾಷಾ, ಡಬ್ ಸ್ಮ್ಯಾಶ್ ನಿವೇದಿತಾ, ಜ್ಯೋತಿಷಿ ಪಂಡಿತ್ ಸಮೀರಾಚಾರ್ಯ, ಹಾಗೂ ಸೇಲ್ಸ್‌ಮ್ಯಾನ್ ದಿವಾಕರ್ ಹಾಗೂ ಮೈಸೂರಿನ ಗೃಹಿಣಿ ಸುಮಿತ್ರಾ ದೇವಿ ಎಂಟ್ರಿ ಕೊಟ್ಟಿದ್ದಾರೆ.
ಸೆಲೆಬ್ರಿಟಿಗಳು ಸೈಲೆಂಟಾಗಿ ಎಂಟ್ರಿ ಕೊಟ್ರೆ, ಕೆಲವರು ಮಾತ್ರ ಸಖತ್ ಸದ್ದು ಮಾಡಿದ್ದಾರೆ. ಎರಡನೇ ಎಂಟ್ರಿ ಕೊಟ್ಟ ಮೇಘ, ಪಕ್ಕಾ ಲೋಕಲ್ ಅನ್ನೋ ಹಾಗಾಡ್ತಿದ್ದಾರೆ. ಡೆವಿಲ್ ಈಸ್ ಹಿಯರ್ ಅಂತ ಎಂಟ್ರಿ ಕೊಟ್ಟು ಒಂಥರಾ ಇಂಟರೆಸ್ಟಿಂಗ್ ಅನ್ಸಿದ್ದಾರೆ. ರಿಯಾಜ್ ಭಾಷಾ ಸ್ವಲ್ಪ ಸೀರಿಯಸ್ ಅನ್ಸಿದ್ರೂ ವಿಚಾರ ಇದೆ ಅನ್ಸುತ್ತೆ. ನಿವೇದಿತಾ ಗೌಡ ಈ ಸಲ ಟ್ರೋಲ್ ಪೇಜುಗಳಿಗೆ ಫುಲ್ ಮೀಲ್ಸ್. ಅವಳು ಮಾತಾಡೋ ಕನ್ನಡದಷ್ಟು ಹಿಂಸೆ ಮತ್ಯಾವುದೂ ಇರಲಿಕ್ಕಿಲ್ಲ. ಮುದ್ದಾಗಿ ಸಾಕಿದ ಗೊಂಬೆ, ಒಳಗೆ ಒದ್ದಾಡೋದು ಸಾಕಷ್ಟಿದೆ. ಪಂಡಿತ್ ಸಮೀರಾಚಾರ್ಯ ಹುಬ್ಬಳ್ಳಿ ಮೂಲದವರಾಗಿದ್ದು ಸಾಕಷ್ಟು ಜ್ಞಾನಿ ಅನ್ನಿಸಿದ್ದಾರೆ. ಸಾಮಾಜಿಕ ಕಾಳಜಿಯೂ ಎದ್ದು ಕಾಣ್ತಿದೆ. ದಿವಾಕರ್ ಒಬ್ಬ ಆಯುರ್ವೇದಿಕ್ ಔಷಧಿ ಮಾರೋ ಸಾಮಾನ್ಯ ಸೇಲ್ಸ್‌ಮ್ಯಾನ್. ಪಟಪಟನೇ ಆಡೋ ಮಾತು ಅವರ ಪ್ಲಸ್ ಪಾಯಿಂಟ್. ಇನ್ನು ಗೃಹಿಣಿ ಸುಮಿತ್ರಾ ದೇವಿ ಮನೆಗೊಬ್ಬರು ಅಮ್ಮನ ಹಾಗೆ ಎಲ್ಲವನ್ನೂ ನಿಭಾಯಿಸುವ ಹಾಗೆ ಕಾಣ್ತಿದೆ.

ಇನ್ನು ಸೆಲೆಬ್ರಿಟಿಗಳ ಲೀಸ್ಟಲ್ಲಿ ಜಗನ್, ಜೆಕೆ, ಚಂದನ್ ಶೆಟ್ಟಿ ಹುಡ್ಗೀರ ಹಾಟ್ ಫೇವರೇಟ್ ಆಗಲಿದ್ದಾರೆ. ಸಿಂಗರ್ ಶ್ರುತಿ ಈಗಾಗ್ಲೇ ಹುಡುಗರ ಹಾರ್ಟಲ್ಲಿ ಕಚಗುಳಿ ಇಟ್ಟಿದ್ದಾರೆ. ಸಿಹಿಕಹಿ ಚಂದ್ರು ಹಾಗೂ ಜಯ ಶ್ರೀನಿವಾಸನ್ ಒಂದಷ್ಟು ಮಜಾ ಕೊಡೋದು ನಿಶ್ಚಿತ. ಸಾಕಷ್ಟು ಜನ ಶೋಗೋಸ್ಕರ, ಯಾರ್ ಏನ್ ಮಾಡ್ತಾರೆ ಅಂತ ನೊಡೋಕೆ ಶೋ ಫಾಲೋ ಮಾಡಿದ್ರೆ. ಬಹಳ ದೊಡ್ಡ ಪ್ರಮಾಣದ ಜನ ಕಿಚ್ಚ ಸುದೀಪ್ ಅವರಿಗೋಸ್ಕರ ಬಿಗ್ ಬಾಸ್ ನೋಡ್ತಾರೆ ಅನ್ನೋದು ಸತ್ಯ.


ಸೀಸನ್ 5 ಸದ್ದು ಮಾಡೋಕೆ ಶುರುವಾಗಿದೆ. ಈ ಸಲ ಬಿಗ್‌ಬಾಸ್ ಕಲರ್ಸ್ ಸೂಪರ್‌ನಲ್ಲಿ ಪ್ರಸಾರವಾಗ್ತಿದೆ. ಇಂದಿನಿಂದ ಪ್ರತಿದಿನ ರಾತ್ರಿ 8 ಗಂಟೆಗೆ ಬಿಗ್‌ಬಾಸ್ ಮನೆಗೆ ಬರಲಿದ್ದಾರೆ. ಯಾರಿಗೆ ಯಾರಿಷ್ಟ, ಯಾರು ಕಷ್ಟ, ಯಾರು ಹಾವಳಿ ಇಡ್ತಾರೆ, ಯಾರು ಹೃದಯ ಮುಟ್ತಾರೆ ಅನ್ನೋದು ಹೋಗ್ತಾ ಹೋಗ್ತಾ ಗೊತ್ತಾಗುತ್ತೆ. ಅಂದ ಹಾಗೆ ನಿಮ್ಮ ಫೇವರೇಟ್ ಯಾರು..?

Show More

Related Articles

Leave a Reply

Your email address will not be published. Required fields are marked *

Close