ಒಳ್ಳೆ ವಿಷ್ಯ

ಏನೂ ಇಲ್ಲದ ಮನುಷ್ಯ 194625000000 ರೂಪಾಯಿ ದುಡಿದದ್ದು ಹೇಗೆ..?

-ಕಿರಿಕ್ ಕೀರ್ತಿ 

ಮನುಷ್ಯ ಒಂಥರಾ ವಿಚಿತ್ರ ಪ್ರಾಣಿ. ತಾನು ಏನಾದ್ರೂ ಮಾಡಬೇಕು ಅಂತ ನಿರ್ಧಾರ ಮಾಡಿಬಿಟ್ರೆ ಅದೆಷ್ಟೇ ಕಷ್ಟ ಆದ್ರೂ ಮಾಡೇಮಾಡ್ತಾನೆ.. ಹಾಗೆಯೇ ಕಷ್ಟಗಳು ಶನಿಯಂತೆ ಹೆಗಲೇರಿದಾಗ ನಾನಾ ನೀನಾ ನೋಡೋಣ ಅಂತ ಹಠಕ್ಕೆ ಬಿದ್ರೆ ಯಶಸ್ಸು ಮಾತ್ರ ಕಟ್ಟಿಟಠ ಬುತ್ತಿ…! ಅದಕ್ಕೊಂದು ಸ್ಪಷ್ಟ ಉದಾಹರಣೆ ಬವಗುತ ರಘುರಾಮ್ ಶೆಟ್ಟಿ, ಎಲ್ಲರ ಪ್ರೀತಿಯ ದುಬೈ ಶೆಟ್ರು…

ಹೌದು.. ಏನೇನೂ ಇಲ್ಲದ ಮನುಷ್ಯ ನೆತ್ತಿಸುಡೋ ಮರುಳುಗಾಡಿನ ದೇಶಕ್ಕೆ ಹೋಗಿ ಕೋಟಿಕೋಟಿ ದುಡಿದರು ಅಂದ್ರೆ ನೀವು ನಂಬಲೇಬೇಕು..! ಮೂಲತಃ ಕರ್ನಾಟಕದ ಕಾಪುವಿನವರಾದ ಇವರ ಬಾಲ್ಯದಿಂದ ದುಬೈಗೆ ಹೋಗುವ ದಿನಗಳವರೆಗೆ ಏರಿಳಿತಗಳ ಸರಮಾಲೆ… ಒಂದು ಸರಿಹೋಯ್ತು ಅಂದ್ರೆ ಮತ್ತೊಂದು ಕಷ್ಟ,ಅದು ಸರಿ ಮಾಡ್ಕೊಳ್ತಿದ್ದ ಹಾಗೆ ಇನ್ನೊಂದು ಕಷ್ಟ… ಒಟ್ನಲ್ಲಿ ಬದುಕು ಕಷ್ಟ ಕಷ್ಟ ಕಷ್ಟ…! ಆದ್ರೆ ಶೆಟ್ರು ಅದಕ್ಕೆಲ್ಲಾ ಬಗ್ಗೋ ಮನುಷ್ಯ ಆಗಿರಲಿಲ್ಲ. ಒಂದು ಕಡೆ ಸಹೋದರಿಯ ಮದುವೆಗೆ ವರದಕ್ಷಿಣೆಗೆ ದುಡ್ಡು ಕೊಡೋಕೂ ಪರದಾಡಿದ್ರು..! ಸಾಲ ಬೇರೆ ಶೂಲದ ಹಾಗೆ ಚುಚ್ತಾ ಇತ್ತು… ಅಮ್ಮ ಎಲ್ಲಾ ಜವಾಬ್ದಾರಿಯನ್ನು ಇವರ ಮೇಲೆ ಹಾಕಿದ್ರು. ‘ಎಯ್ನ ಮಲ್ಪುನಿ ಅಂದೇ ತೋಜುಜಿ’ ಅಂತಿದ್ದವರಿಗೆ ಹೊಳೆದ ಐಡಿಯ ದುಬೈ..! ಊರಲ್ಲಿ ಒಬ್ಬ ಸಾಮಾನ್ಯ ಮೆಡಿಕಲ್ ರೆಪ್ ಆಗಿದ್ದ ಶೆಟ್ರು ಅದೇ ಕಿಟ್ ಹಿಡಿದು ದುಬೈ ವಿಮಾನ ಹತ್ತೇ ಬಿಟ್ರು…!

ಅಯ್ಯೋ ದೇವ್ರೇ ಆ ಬಿಸಿಲನ್ನು ಯಾರೂ ತಡೆಯೋಕೆ ಸಾಧ್ಯವಿಲ್ಲ. ಅದು 1973ರ ಸಮಯ… ಎಲ್ಲೆಲ್ಲೂ ಮರಳುಗಾಡು. ಇವತ್ತಿನ ದುಬೈಗೂ ಅವತ್ತಿನ ಬರಡು ದುಬೈಗೂ ಅಜಗಜಾಂತರವಿದೆ… ಅಂತಹ ದುಬೈನ ಮೊದಲ ಮೆಡಿಕಲ್ ರೆಪ್ ಆಗಿ ಕೆಲಸ ಶುರು ಮಾಡಿದವರು ಬಿ.ಆರ್.ಶೆಟ್ಟಿ..! ಮನೆಮನೆಗೆ ಹೋಗಿ ಔಷಧಿ ಮಾತ್ರೆ ಡೆಲಿವರಿ ಕೊಟ್ರು. ಡಾಕ್ಟರ್‌ಗಳನ್ನ ಕಾಡಿಬೇಡಿ ಇವರು ತರೋ ಪ್ರಾಡಕ್ಟ್ ಓಕೆ ಮಾಡಿಸಿಕೊಂಡ್ರು… ಒಂದು ಲೆವೆಲ್ಲಿಗೆ ಇದು ಬೆಳೀತಿದೆ ಅನಿಸಿದಾಗ  ಊರಲ್ಲಿ ವೈದ್ಯೆಯೊಬ್ಬರನ್ನು ಮದುವೆಯಾಗಿ ಅವರಿಗೂ ದುಬೈ ವಿಮಾನ ಹತ್ತಿಸಿದ್ರು…! ಆಗಲೇ ಆರಂಭವಾಗಿದ್ದು ಎನ್.ಎಂ.ಸಿ ಹೆಲ್ತ್ ಕೇರ್..! ಅವತ್ತು ಆ ಪುಟ್ಟ ಕ್ಲಿನಿಕ್‌ಗೆ ಶೆಟ್ಟರ ಹೆಂಡತಿ ಚಂದ್ರ ಕುಮಾರಿ ಒಬ್ಬರೇ ವೈದ್ಯರು. ಆದ್ರೆ ಇವತ್ತು ಎಂಟು ರಾಷ್ಟ್ರಗಳ 12 ನಗರಗಳಲ್ಲಿ ಎನ್.ಎಮ್.ಸಿಯ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳಿವೆ..! ಗಂಡ ಹೆಂಡತಿ ‘ದುಡಿಮೇನೇ ಆ ದ್ಯಾವ್ರು ತಂದ ಆಸ್ತಿ ನಮ್ಮ‌ಪಾಲಿಗೆ’ ಅಂತ ಹಠಕ್ಕೆ ಬಿದ್ದು ದುಡಿದ್ರು… 1980ರಲ್ಲಿ ಫೈನಾನ್ಸ್ ಕ್ಷೇತ್ರಕ್ಕೂ ಕಾಲಿಟ್ಟ ಬಿ.ಆರ್.ಶೆಟ್ರು UAE Exchange ಆರಂಭಿಸಿದ್ರು. ಅದೂ ಅದ್ಭುತವಾಗಿ ಕೈಹಿಡೀತು. ಇವತ್ತು ಅದರ ಕಾರ್ಯವ್ಯಾಪ್ತಿ 34 ರಾಷ್ಟ್ರಗಳಲ್ಲಿದೆ..!

ಅವತ್ತು ಇಲ್ಲಿನ ಕಷ್ಟಗಳಿಗೆ ಹೆದರಿ ಹೋಗಿದ್ರೆ ಇವತ್ತವರ ಬಗ್ಗೆ ಈ ಲೇಖನ ಬರೆಯೊಕೆ ಸಾಧ್ಯಾನೇ ಇರ್ತಿರಲಿಲ್ಲ… ಎಂಥಹ ಸಂದರ್ಭದಲ್ಲೂ ಹಠಕ್ಕೆ ಬಿದ್ದರೆ ಮನುಷ್ಯ ಎಂತಹ ಗುರಿ ಬೇಕಾದ್ರೂ ಮುಟ್ಟಬಹುದು ಅನ್ನೋಕೆ ಸಾಕ್ಷಿ ಪದ್ಮಶ್ರೀ ಬಿ.ಆರ್.ಶೆಟ್ಟಿ…

ಏನೂ ಇಲ್ಲದೇ ದುಬೈಗೆ ಹೋದವರು ಇಂದು ಫೋರ್ಬ್ಸ್ ಲೀಸ್ಟಲ್ಲಿ ಸ್ಥಾನ ಪಡೆದಿದ್ದಾರೆ.. ವಿಕಿಪೀಡಿಯಾ ಪ್ರಕಾರ ಬರೋಬ್ಬರಿ 194625000000 ರೂಪಾಯಿಯ ಒಡೆಯರಾಗಿದ್ದಾರೆ… ಯುವಕ ಯುವತಿಯರಿಗೆ ಇವರು ಮಾದರಿ.. ದುರ್ಗಮ ಹಾದಿಯನ್ನು ಯಶಸ್ಸಿನ ಮೆಟ್ಟಿಲಾಗಿಸಿಕೊಳ್ಳಲು ಒಂದು ಬಲ, ಛಲ, ಶಕ್ತಿ ಹಾಗೂ ಶ್ರದ್ಧೆ ಬೇಕು… ಅವೆಲ್ಲವೂ ನಿಮಗೂ ಆ ಭಗವಂತ ಕರುಣಿಸಲಿ… ಶುಭವಾಗಲಿ…

Show More

Related Articles

1 thought on “ಏನೂ ಇಲ್ಲದ ಮನುಷ್ಯ 194625000000 ರೂಪಾಯಿ ದುಡಿದದ್ದು ಹೇಗೆ..?”

Leave a Reply

Your email address will not be published. Required fields are marked *

Close