ಐತ್ ಲಗಾ

ಅವನು ಪೆಟ್ರೋಲ್ ಬಂಕಲ್ಲಿ ಸಿಗರೇಟ್ ಸೇದ್ತಿದ್ದ. ಬಂಕ್ ನೌಕರ ಏನ್ ಮಾಡ್ದ ಗೊತ್ತಾ?

ಪೆಟ್ರೋಲ್ ಬಂಕಲ್ಲಿ ಯಾವನೋ ಒಬ್ಬ ಪೆಟ್ರೋಲ್ ಹಾಕಿಸ್ಕೊಳ್ಳೋಕೆ ಬರ್ತಾನೆ ಅಂತ ಇಟ್ಕೊಳಿ, ಅದನ್ನು ನೀವು ನೋಡಿದ್ರೆ ಏನ್ ಮಾಡ್ತೀರ..? ಯಾಕಪ್ಪಾ ನಿಂಗೆ ತಲೆ ನೆಟ್ಟಗಿಲ್ವಾ ಅಂತ ಪ್ರಶ್ನೆ ಮಾಡ್ತೀರ. ಅವನಿಗೊಂದು ಅವಾಜ್ ಹಾಕಿ ಸಿಗರೇಟ್ ಆರಿಸೋಕೆ ಹೇಳ್ತೀರ. ಆದ್ರೆ ಅದೆಲ್ಲಾ ಇಲ್ಲಿನ ಸ್ಟೋರಿ… ಆದ್ರೆ ವಿದೇಶದಲ್ಲಿ ಹಿಂಗೆಲ್ಲಾ ಆದ್ರೆ ಹೇಳೋದು ಕೇಳೋದೆಲ್ಲಾ ಇಲ್ಲ…

ಇದೇ ತರಹದ ಒಂದು ಘಟನೆ ಯಾವುದೋ ದೇಶದ ಬಂಕೊಂದರಲ್ಲಿ ನಡೆದಿದೆ. ಕಾರಲ್ಲಿ ಸ್ಟೈಲಾಗಿ ಬಂದ ಯುವಕನೊಬ್ಬ ಪೆಟ್ರೋಲ್ ಪಂಪ್ ಬಳಿ ಗಾಡಿ ನಿಲ್ಲಿಸಿದ್ದಾನೆ. ಕಾರಿನಿಂದ ಕೆಳಗಿಳಿದವನು ಅಷ್ಟೇ ಸ್ಟೈಲಾಗಿ ಸಿಗರೇಟ್ ಹೊದೀತಾ ನಿಂತಿದ್ದಾನೆ. ಅದೇ ಪೆಟ್ರೋಲ್ ಬಂಕಲ್ಲಿ ಕೆಲಸ ಮಾಡ್ತಿದ್ದ ಇನ್ನೂಬ್ಬ ಮತ್ತೊಂದು ಗಾಡಿಗೆ ಪೆಟ್ರೋಲ್ ಹಾಕುತ್ತ ಇವನ ಆಟ ನೋಡ್ತಿದ್ದ. ಆದ್ರೆ ಅದೇ ಬಂಕಲ್ಲಿ ಕೆಲಸ ಮಾಡೋ ಮತ್ತೊಬ್ಬ ವ್ಯಕ್ತಿ ಇದನ್ನು ನೋಡಿದ ಕೂಡ್ಲೇ ಪಿತ್ತ ನೆತ್ತಿಗೇರಿಸಿಕೊಂಡಿದ್ದಾನೆ. `ಯಲಾ ಇವನಾ’ ಅನ್ಕೊಂಡು ಅಲ್ಲಿದ್ದ ಫೈರ್ ಡಿಸ್ಟಿಂಗಿಶರ್ (ಬೆಂಕಿ ಆರಿಸುವ ಪುಡಿ ಇರುವ ವಸ್ತು) ಕೈಗೆತ್ತಿಕೊಂಡು ಅದನ್ನು ಓಪನ್ ಮಾಡಿ ಅವನ ಸಿಗರೇಟ್ ಕಡೆಗೆ ಬಿಟ್ಟಿದ್ದಾನೆ. ಸಿಗರೇಟ್ ಸೇದುತ್ತಿದ್ದ ಯುವಕ ಒಂದು ಕ್ಷಣ ಕಂಗಾಲಾಗಿ ಹೋಗಿದ್ದಾನೆ. ಅದಾದ ಮೇಲೆ ಸ್ವಲ್ಪ ಮಾತಿನ ಚಕಮಕಿ ನಡೆದಿದೆ. ಅದಕ್ಕೆಾ ನೌಕರನೂ ಏರುಧ್ವನಿಯಲ್ಲೇ ಉತ್ತರ ಕೊಟ್ಟಿದ್ದಾನೆ. ಅಲ್ಲಿದ್ದವರೆಲ್ಲಾ ಮೂಕ ಪ್ರೇಕಕರಾಗಿದ್ದಾರೆ. ಆದ್ರೆ ಸಿಗರೇಟಿನಿಂದ ಇಡೀ ಬಂಕ್ ಬೆಂಕಿಗೆ ಆಹುತಿಯಾಗೋದಕ್ಕಿಂತ ಅವರು ಮಾಡಿದ ಕೆಲಸ ಸರಿಯಾಗೇ ಇದೆ… ಅಲ್ವಾ..?

 

Show More

Related Articles

Leave a Reply

Your email address will not be published. Required fields are marked *

Close