ಏನ್ ಸುದ್ದಿ?

ಚಂದನ್ ಶರ್ಮ ಇನ್ಮುಂದೆ ಬಿಟಿವಿಯಲ್ಲಿ ಕಾಣಲ್ಲ..! ಆದ್ರೆ…

ಚಂದನ್ ಶರ್ಮ… ನಿಮಗೆಲ್ಲರಿಗೂ ಗೊತ್ತಿರೋ ಹೆಸರೇ. ಬಿಟಿವಿಯ ವೀಕ್ಷಕಿರಿಗಂತೂ ಇವರು ಚಿರಪರಿಚಿತ. ಹಿರಿಯ ನಿರೂಪಕನಾಗಿ ಸಾಕಷ್ಟು ಸಂದರ್ಶನಗಳಲ್ಲಿ ಚಂದನ್ ಕಾಣಿಸಿಕೊಳ್ತಿದ್ರು. ತುಂಬಾ ಜನರಿಗೆ ಇವರ ನಿರೂಪಣಾ ಶೈಲಿ ಇಷ್ಟವಾಗ್ತಿತ್ತು. ಮತ್ತೆ ಕೆಲವರು ಇದರ ಬಗ್ಗೆ ಚಕಾರ ಎತ್ತಿದ್ದೂ ಇದೆ. ಅದೇನೇ ಇರಲಿ. ಈಗ ಚಂದನ್ ಬಿಟಿವಿಯಿಂದ ಹೊರಬಿದ್ದಿದ್ದಾರೆ ಆನ್ನೋದು ಸುದ್ದಿ.

ಈ ಸಂಬಂಧ ಸಾಕಶ್ಟು ಚರ್ಚೆಗಳು ಬೆಳಗ್ಗೆಯಿಂದ ಫೇಸ್ಬುಕ್ಕಲ್ಲಿ ನಡೀತಾ ಇತ್ತು. ಕೆಲವರು ಚಂದನ್ ವಿರುದ್ದ ಆರೋಪಗಳನ್ನೂ ಮಾಡಿದ್ದರು. ಅದು ಎಷ್ಟರ ಮಟ್ಟಿಗೆ ನಿಜ ಅಥವಾ ಸುಳ್ಳು ಎಂಬುದರ ಅರಿವಿಲ್ಲದಶಲವರು ಇಲ್ಲಸಲ್ಲದ ಕಮೆಂಟ್ ಸಹ ಮಾಡಿದ್ದರು. ಇತ್ತೀಚೆಗೆ ಚಂದನ್ ಅವರು ` ಬದಲಾವಣೆ ಜಗದ ನಿಯಮ’ ಅಂತ ಸ್ಟೇಟಸ್ ಹಾಕಿದ್ದು ಇದಕ್ಕೆ ಪುಷ್ಟಿ ಕೊಟ್ಟಿತ್ತು. ಆದ್ರೆ ಈಗ ಅದೆಲ್ಲವಕ್ಕೂ ಸ್ವತಃ ಚಂದನ್ ಶರ್ಮ ತೆರೆ ಎಳೆದಿದ್ದಾರೆ. ಅವರು ಈಗ ತಾನೇ ಅವರ ಫೇಸ್ ಬುಕ್ ಖಾತೆಯಲ್ಲಿ ಎಲ್ಲಕ್ಕೂ ಉತ್ತರ ಕೊಟ್ಟಿದ್ದಾರೆ. ತಮ್ಮ ಮುಂದಿನ ನಡೆ ಏನು ಎಂಬುದನ್ನೂ ಅವರು ಅದರಲ್ಲಿ ತಿಳಿಸಿದ್ದಾರೆ.

ಕೆಲವು ಕಡೆ ಚಂದನ್ ಈ ಸಲದ ಬಿಗ್ ಬಾಸ್ ಸ್ಪರ್ಧಿ ಎಂಬಂತೆ ಸ್ಟೇಟಸ್ ಹಾಕಿದ್ರು. ಆದ್ರೆ ಅದೆಲ್ಲಾ ಸುಳ್ಳು, ನಿಜವೇ ಬೇರೆ ಅಂತಿದ್ದಾರೆ ಚಂದನ್ ಶರ್ಮ… ಅವರ ಈಗಿನ ಫೇಸ್ಬುಕ್ ಸ್ಟೇಟಸ್ ಹೀಗಿದೆ..

”ನಮಸ್ಕಾರ.. ನಾನು ಮೌನ ಮುರಿಯಲೇಬೇಕಿದೆ. ಅಸಲಿಗೆ “ಬದಲಾವಣೆ” ಅಂದರೆ ಇಷ್ಟೇ. ನಾಲ್ಕು ವರ್ಷಗಳ ಕಾಲ ಮನೆ ಮಗನಂತೆ ಪ್ರೀತಿ ತೋರಿಸಿದ ಬಿಟಿವಿ ಬಿಟ್ಟಿದ್ದೇನೆ. ಬಿಟಿವಿ’ಗೆ ರಾಜೀನಾಮೆ ಕೊಡುವುದು ಅಷ್ಟು ಸುಲಭದ್ದಾಗಿರಲಿಲ್ಲ. ಈ ನಾಲ್ಕು ವರ್ಷಗಳಲ್ಲಿ ಬಿಟಿವಿ ನನ್ನ ಆತ್ಮದ ಒಂದು ಭಾಗವೇ ಆಗಿಹೋಗಿತ್ತು. ಅಕ್ಕರೆ ತೋರಿದ ಅಲ್ಲಿನ ಪ್ರತಿಯೊಬ್ಬರಿಗೂ.. ವಾತ್ಸಲ್ಯ ತುಂಬಿದ ಮ್ಯನೇಜ್ಮೆಂಟ್’ನವರಿಗೂ ಎಂದಿಗೂ ಆಭಾರಿ.

#ಮುಂದೇನು..?

ನನ್ನ ಮುಂದಿನ ನಿಲ್ದಾಣ #TV9!

ಅಪಪ್ರಚಾರಗಳ ಭರಾಟೆ..

ಅಪಪ್ರಚಾರ ಯಾರ ಬಗ್ಗೆ ಇಲ್ಲ ಹೇಳಿ.. ನಾನೆದಲ್ಲವನ್ನೂ ಸಮಚಿತ್ತನಾಗಿ ಸ್ವೀಕರಿಸಿದ್ದೇನೆ. ಒಂದಂತೂ ಸತ್ಯ.. ಚಂದನ್ ಯಾವತ್ತಿಗೂ ತನ್ನನ್ನು ಮಾರಿಕೊಳ್ಳಲಾರ.. ಪ್ರಾಮಾಣಿಕತೆಯ ಹಾದಿಯೊಂದನ್ನು ಬಿಟ್ಟು ಬೇರೊಂದು ಹೆಜ್ಜೆ ತುಳಿಯಲಾರ.

ಪ್ರೀತಿಯಿರಲಿ 

ಆರೋಪ-ಪ್ರತ್ಯಾರೋಪಗಳು ಸಹಜ. ಅದನ್ನು ಮೀರಿ ಚಂದನ್ ಬೆಳೆದಿದ್ದಾರೆ. ಇನ್ನೂ ಬೆಳೆಯಲಿ ಎಂಬುದು ಕರ್ನಾಟಕ.ಕಾಮ್ ಹಾರೈಕೆ. ಹೊಸ ಹುರುಪಿನೊಂದಿಗೆ ಹೊಸ ಕೆಲಸದಲ್ಲಿ ತೊಡಗಿಸಿಕೊಳ್ಳಲ್ಲಿ. ಯಶೋಗಾಥೆ ಮುಂದುವರೆಯಲಿ…

Show More

Related Articles

Leave a Reply

Your email address will not be published. Required fields are marked *

Close