ಒಳ್ಳೆ ವಿಷ್ಯ

ಚಂದನ್ ಶೆಟ್ಟಿ… ನೋವಿನ ದಿನಗಳಿಂದ ಬಿಗ್ ಬಾಸ್ ತನಕ…

ಕಿರಿಕ್ ಕೀರ್ತಿ

ಮೂರೇ ಮೂರು ಪೆಗ್ಗಿಗೆ ಅಂತ ಇಡೀ ಕನ್ನಡ ಸಂಗೀತವನ್ನೇ ಒಂದು ಲೆವೆಲ್ ಮೇಲೆ ತೆಗೆದುಕೊಂಡು ಹೋದವನ ಹೆಸರು ‘ಚಂದನ್ ಶೆಟ್ಟಿ’…

ಚಂದನ್ ಶೆಟ್ಟಿ ಮೈಕ್ ಹಿಡಿದ್ರೆ ಚಪ್ಪಾಳೆ, ಸಿಳ್ಳೆಗೆ ಕೊರತೇನೇ ಇಲ್ಲ..! ಚಂದನ್ ಇವತ್ತು ಕರ್ನಾಟಕದ ‌ ರ‍್ಯಾಪ್ ಕಿಂಗ್. ಆದ್ರೆ ಆ ಸ್ಥಾನ ಸುಮ್ಮನೇ ಬಂದಿಲ್ಲ. ಅದರ ಹಿಂದೆ ಸಿಕ್ಕಾಪಟ್ಟೆ ಶ್ರಮವಿದೆ, ನೋವಿದೆ, ಕೆಟ್ಟ ದಿನಗಳಿವೆ. ಹೌದು, ಚಂದನ್ ಒಬ್ಬ ಶ್ರಮಜೀವಿ. ಸಂಗೀತ ಸರಸ್ವತಿ ಅವನಿಗೆ ಸುಮ್ಮನೆ ಒಲಿದಿಲ್ಲ. ಆ ಸರಸ್ವತಿಯನ್ನು ಒಲಿಸಿಕೊಳ್ಳೋಕೆ ಪಟ್ಟ ಶ್ರಮವೂ ಅಷ್ಟಿಷ್ಟಲ್ಲ… ಇವತ್ತು ಅವನ ಒಂದೊಂದು ಹಾಡುಗಳು ಮಿಲಿಯನ್‌ಗಟ್ಟಲೇ ಜನ ನೋಡಿ ಖುಷಿಪಡ್ತಾರೆ ಅಂದ್ರೆ ಅದರ ಹಿಂದೆ ಅದೆಷ್ಟೋ ನಿದ್ರೆ ಇರದ ರಾತ್ರಿಗಳಿವೆ. ಹಸಿವಿನ ದಿನಗಳಿವೆ..!

ಚಂದನ್ ಮೊದಲು ಅರ್ಜುನ್ ಜನ್ಯ ಅವರ ತಂಡದಲ್ಲಿದ್ದವರು. ಹೇಗೊ ಹೊಟ್ಟೆಪಾಡು ನಡೀತಿತ್ತು. ಅದ್ರೆ ಒಂದು ದಿನ ಅಲ್ಲಿಂದ ಹೊರಬಿದ್ದ ಮೇಲೆಬೆಲ್ಲಿರಬೆಕು, ಏನು ಮಾಡಬೇಕು ಅನ್ನೋದು ದೊಡ್ಡ ತಲೆನೋವಾಗಿ ಹೋಯ್ತು. ಇರೋಕೆ ಮನೆ ಇಲ್ಲ, ಹೊತ್ತು ಊಟಕ್ಕೂ ಯೋಚಿಸೋ ಹಾಗಾಯ್ತು. ಜೊತೆಗೆ ಇದ್ದ ಆಸ್ತಿ ಅಂದ್ರೆ ಕೆಲವು ಗೆಳೆಯರಷ್ಟೆ..! ಏನೇನೋ ಮಾಡೋಕೆ ಹೋಗಿ ಮತ್ತೇನೇನೋ ಯಡವಟ್ಟಾಗ್ತಿತ್ತು. ಆಗ ಬಂದ ಐಡಿಯಾ ‘ಹಾಳಾಗೋದೆ’.! ಅಲ್ಲೀ ತನಕ ಅಂತದ್ದೊಂದು ಪ್ರಯತ್ನ ಆಗಿರಲಿಲ್ಲ. ಜನ ನನ್ನ ಒಪ್ಕೋತಾರಾ, ಬಯ್ತಾರಾ ಅಂತ ಒಂದು ಅನುಮಾನದಲ್ಲಿದ್ದಾಗ ಜೊತೆಯಾದವರು ‘ದಿನಿ ಸಿನಿ ಕ್ರಿಯೇಶನ್ಸ್’ ದಿನೇಶ್.. ಅವರ ಸಹಾಯದಿಂದ ಅದ್ಭುತವಾಗಿ ‘ಹಾಳಾಗೋದೆ’ ರೆಡಿ ಆಯ್ತು.. ಒಂದು ದಿನ ಯೂಟ್ಯೂಬಲ್ಲಿ ಅಪ್‌ಲೋಡ್ ಸಹ ಆಯ್ತು.

ರಾತ್ರಿ ಕಳೆದು ಬೆಳಗಾಗುವುದರೊಳಗೆ ವೀಡಿಯೋ ವೈರಲ್ ಆಗಿತ್ತು. ಎಲ್ಲರ ಮೊಬೈಲಲ್ಲೂ ‘ನನ್ ಪಾಡಿಗ್ ನಾನಿದ್ದೆ’ ಹಾಡು ಮೊಳಗಿತ್ತು… ಚಂದನ್ ಶೆಟ್ಟಿ ಗೆದ್ದುಬಿಟ್ಟ…ಕನ್ನಡದ ಹೊಸ ಟ್ರೆಂಡ್ ಸೆಟ್ಟರ್ ಅನ್ನಿಸ್ಕೊಂಡ… ಅದು ಹಿಟ್ ಆಗ್ತಿದ್ದ ಹಾಗೇ ಸಿನಿಮಾದಲ್ಲಿ ಸಾಹಿತ್ಯ ಬರೆಯೋಕೆ, ಹಾಡು ಹಾಡೋಕೆ ಅವಕಾಶಗಳು ಬರೋಕೆ ಶುರುವಾಯ್ತು… ಚಂದನ್ ಬದುಕು ನಿಧಾನವಾಗಿ ಚೇತರಿಸಿಕೊಳ್ತು. ಕಾಲೆಜು ಕಾರ್ಯಕ್ರಮಗಳಲ್ಲಿ ಚಂದನ್ ಹಾಡು ಘರ್ಜಿಸೋಕೆ ಶುರು ಆಯ್ತು. ಅದಾಗಿ ವರ್ಷದೊಳಗೆ ಬಂತು ‘ಮೂರೇ ಮೂರು ಪೆಗ್ಗಿಗೆ’..! ಅಷ್ಟೇ.. ಅಲ್ಲಿಂದ ಚಂದನ್ ತಿರುಗಿ ನೋಡೋ ಮಾತೇ ಇಲ್ಲ. ಹಾಡು ನೋಡ ನೊಡ್ತಿದ್ದ ಹಾಗೆ ಯೂಟ್ಯೂಬಲ್ಲಿ ಸೆನ್ಸೇಶನ್ ಆಗಿಹೋಯ್ತು. ನೋಡಿದವರೆಲ್ಲಾ ಭೇಷ್ ಅಂದ್ರು. ಯಾವತ್ತೂ ಕನ್ನಡ ಹಾಡುಗಳನ್ನು ಹಾಕದ ಪಬ್‌ಗಳಲ್ಲೂ ಮೂರೇಮೂರು ಪೆಗ್ಗಿಗೆ ಕೇಳೋಕೆ ಶುರುವಾಯ್ತು. ಕನ್ನಡದ ಹಾಡುಗಳು ಮೊಳಗೋಕೆ ಶುರುವಾಯ್ತು…

ದಿನಕ್ಕೆ ಲಕ್ಷಗಟ್ಟಲೆ ಜನ 3 ಪೆಗ್ ನೋಡ್ತಿದ್ರು..! ಚಂದನ್ ಶೆಟ್ಟಿ ನೋಡ ನೋಡ್ತಿದ್ದ ಹಾಗೆಯೇ ಸೂಪರ್ ಸ್ಟಾರ್ ಆಗಿ ಹೋದ…! ಈ ಗ್ಯಾಪಲ್ಲಿ ಸಾಕಷ್ಟು ಸಿನಿಮಾ ಹಾಡುಗಳಿಗೂ ಚಂದನ್ ದ್ವನಿಯಾದ್ರು. ದೊಡ್ಡ ಸ್ಟಾರ್‌ಗಳ ಸಿನಿಮಾಗಳಲ್ಲಿ ಚಂದನ್ ಹಾಡು ಇರಲೇಬೇಕು ಅನ್ನೊ ಹಾಗಾಯ್ತು…! ಜೊತೆಗೆ ಸಿನಿಮಾಗಳಲ್ಲಿ ಅಭಿನಯಿಸೋಕೂ ಅವಕಾಶವೂ ಬರೋಕೆ ಶುರುವಾಯ್ತು. ಚಂದನ್ ಚಂದನವನಕ್ಕೂ ಎಂಟ್ರಿ ಕೊಟ್ಟು ನಾಯಕನಾಗಿ ಬಣ್ಣ ಹಚ್ಚಿದ್ದಾಯ್ತು. ಕೆಲವು ತಿಂಗಳಲ್ಲಿ ಸಿನಿಮಾ ರಿಲೀಸ್ ಸಹ ಆಗಲಿದೆ… ಅಷ್ಟರಲ್ಲಿ ಬಂದ ಚಾಕಲೇಟ್ ಗರ್ಲ್ ಮತ್ತೊಂದು  ಹವಾ ಸೃಷ್ಟಿ ಮಾಡ್ತು. ಕಾರುಗಳಲ್ಲಿ ಅದರ ಎಫೆಕ್ಟ್ ಯದ್ವಾತದ್ವ ಗುಮ್ಮುತ್ತಿತ್ತು… ಅದೂ ಮಿಲಿಯನ್‌ಗಟ್ಟಲೇ ಜನರನ್ನ ತಲುಪಿ ಟ್ರೆಂಡಿಂಗ್ ಆಗೋಯ್ತು. ಸಾಕಷ್ಟು ಸಿನಿಮಾಗಳಲ್ಲಿ ಸಂಗೀತ ನಿರ್ದೇಶಕನಾಗುವ ಅವಕಾಶವೂ ಸಿಕ್ತು..ಒಟ್ಟಾರೆ, ಚಂದನ್ ಏನು ಮಾಡಿದ್ರೂ ಸೂಪರ್ ಹಿಟ್ ಅನ್ನೋ ಹಾಗಾಯ್ತು…

ಇದೆಲ್ಲಾ ಆಗೋದ್ರೊಳಗೆ ಬಿಗ್ ಬಸ್ ಮನೆಯಿಂದ ಚಂದನ್ ಶೆಟ್ಟಿಗೆ ಕರೆಬಂತು… ಅಳೆದೂ ತೂಗಿ ಯೋಚಿಸಿ ಹೋಗೋ ನಿರ್ಧಾರ ಮಾಡಿದ್ದು ತಪ್ಪಾಗಲಿಲ್ಲ. ಚಂದನ್ ಜನಪ್ರಿಯತೆ ಮತ್ತಷ್ಟು ಎತ್ತರಕ್ಕೇರಿತು… ಬಿಗ್ ಬಾಸ್ ಅಂದ್ರೆ ಬರಿಯ ಕಾಂಟ್ರವರ್ಸಿ ಅಲ್ಲ, ಅದು ಪ್ರತಿಭೆ ಹೊರಹಾಕಲು ಸಿಕ್ಕ ಅದ್ಭುತ ವೇದಿಕೆ ಅನ್ನೋದನ್ನು ಮರೆಯದೇ, ಪ್ರತಿದಿನ ಹೊಸಹೊಸ ಹಾಡುಗಳನ್ನು ಸೃಷ್ಟಿಸಿ ಜನರಿಗೆ ಹತ್ತಿರವಾಗಿ ಹೋದ. ಈಗ ಅದರ ಫೈನಲಿಸ್ಟ್ ಆಗಿ ಗೆಲ್ಲುವ ಹಂತಕ್ಕೆ ಬಂದು ತಲುಪಿದ್ದಾನೆ. ಇದರ ಮಧ್ಯದಲ್ಲಿ ಟಕೀಲ ಹಾಡು ಪಡೇ ಹುಡುಗರ ಎದೆಯಲ್ಲಿ ಕಿಚ್ಚು ಹಚ್ಚಿದ್ದಾನೆ.

ಇದು ಚಂದನ್ ಶೆಟ್ಟಿ ಜರ್ನಿ…  ಕನ್ನಡ ಮ್ಯೂಸಿಕ್ ಪ್ರಪಂಚವನ್ನ ಪ್ರಪಂಚದ ಮೂಲೆಮೂಲೆಗೆ ತಲುಪಿಸಿದ,  ಲಕ್ಷಾಂತರ ಅಭಿಮಾನಗಳನ್ನು ಪಡೆದಿರುವ ಗೆಳೆಯನಿಗೆ ಧನ್ಯವಾದದ ಜೊತೆಗೆ ಅಭಿನಂದನೆಗಳು…

Tags
Show More

Related Articles

Leave a Reply

Your email address will not be published. Required fields are marked *

Close