ಒಳ್ಳೆ ವಿಷ್ಯ

ನೀವೂ ಕಾಫೀ ಕುಡೀತೀರಾ..? ಇಲ್ಲಿದೆ ಸಿಹಿಸುದ್ದಿ…!

ಕಾಫೀ ಕುಡಿಯೋರಿಗೆ ಇಲ್ಲಿದೆ ಸಿಹಿಸುದ್ದಿ. ಅದ್ರಲ್ಲೂ ದಿನಕ್ಕೆ ಕನಿಷ್ಟ 3-4 ಕಪ್ ಕಾಫೀ ಕುಡಿಯೋರು ನೀವಾಗಿದ್ರೆ ನಿಮಗಿದು ಡಬಲ್ ಖುಷಿ ಕೊಡೋ ವಿಚಾರ. ಯಾಕಪ್ಪಾ ಅಂದ್ರಾ..? ಇತ್ತೀಚಿನ ಸರ್ವೇ ಒಂದರ ಪ್ರಕಾರ ಕಾಫೀ ಕುಡಿಯೋರು ಬೇರೆಬೇರೆ ಸಮಸ್ಯೆಗಳಿಂದ ಬೇಗ ಪ್ರಾಣ ಕಳೆದುಕೊಳ್ಳೋದರಿಂದ ಪಾರಾಗಬಹುದಂತೆ..!

ಹೌದು, ಯೂರೋಪಿನ ಸಂಸ್ಥೆಯೊಂದು 20 ಸಾವಿರ ಜನರನ್ನು ಸಂಪರ್ಕಿಸಿ ಇಂತದ್ದೊಂದು ಸಮೀಕ್ಷೆ ಮಾಡಿದೆ. ಆ ಸರ್ವೇಯ ಪ್ರಕಾರ ದಿನಕ್ಕೆ ಕನಿಷ್ಟ 4 ಕಪ್ ಕಾಫೀ ಕುಡಿಯೋರು ಹೃದಯ ಸಂಬಂಧಿ ಖಾಯಿಲೆಗಳಿಂದ ಬೇಗನೇ ಸಾವಿಗೀಡಾಗುವದರಿಂದ ಪಾರಾಗ್ತಾರಂತೆ..! ಸಂಸ್ಥೆ ಹೇಳೋ ಪ್ರಕಾರ, ಕಾಫೀ ಚಟ ಇರೋರಲ್ಲಿ 64% ಈ ತರಹದ ಸಮಸ್ಯೆಯಿಂದ ಪಾರಾಗಬಹುದಂತೆ..!

ಇವತ್ತಿನ ದಿನ 30-35 ವರ್ಷಕ್ಕೆಲ್ಲಾ ಹೃದಯ ಸಂಬಂಧಿ ಖಾಯಿಲಿಗೆಳು ಬರ್ತವೆ. ಒಮ್ಮೆ ಆ ತರಹದ ಖಾಯಿಲಿಗಳಿಗೆ ಬಿದ್ದರೆ ಆಮೇಲೆ ಜೀವ ಯಾವಾಗ ಬೇಕಾದ್ರೂ ಹೋಗಬಹುದು..! ಹಾಗಾಗಿ, ಹೆಚ್ಚೆಚ್ಚು ಕಾಫೀ ಕುಡೀರಿ, ಹೆಚ್ಚು ರಿಸ್ಕ್ ಫ್ರೀ ಆಗಿ ಅನ್ನುತ್ತೆ ಯುರೋಪಿನ ಈ ಸಂಸ್ಥೆ..!

ಹಾ… ಮತ್ತೊಂದು ವಿಷಯ, ಮಧ್ಯ ವಯಸ್ಸಿನವರು ಅಂದ್ರೆ ಈ 32ರಿಂದ37 ವಯಸ್ಸಿನವರು ಆದಷ್ಟು ಜಾಸ್ತಿ ಕಾಫೀ ಕುಡೀಬೇಕಂತೆ..! ಯಾಕಂದ್ರೆ ಈ ವಯಸ್ಸಿನಲ್ಲೇ ಆರೋಗ್ಯದ ರಿಸ್ಕ್ ಜಾಸ್ತಿ ಅಂತೆ. ಈ ರಿಸರ್ಚ್ ಕುರಿತು ಸಿ.ಎನ್.ಎನ್, ಫೋರ್ಬ್ಸ್ ಸೇರಿದಂತೆ ದೊಡ್ಡ ದೊಡ್ಡ ನ್ಯೂಸ್ ವೆಬ್ ಸೈಟ್ ಗಳು ಸುದ್ದಿ ಮಾಡಿವೆ. ಅದಕ್ಕೇ ನಿಮಗೂ ಈ ಕಾಫೀ ಸೂತ್ರ ಗೊತ್ತಾಗ್ಲಿ ಅಂತ ಹೇಳ್ತಾ ಇದೀವಿ… ಕಾಫೀ ಕುಡೀರಿ, ಖುಷಿಯಾಗಿರಿ…

Show More

Related Articles

Leave a Reply

Your email address will not be published. Required fields are marked *

Close