ಐತ್ ಲಗಾ

ಕ್ರಿಕೆಟ್ ನಿಯಮಗಳಲ್ಲಿ ಭಾರೀ ಬದಲಾವಣೆ..!!!

ಹೌದು, ಕ್ರಿಕೆಟ್ ನಿಯಮಗಳಲ್ಲಿ ಭಾರೀ ಬದಲಾವಣೆಗಳನ್ನು ಮಾಡಲಾಗಿದೆ. ಬದಲಾದ ನಿಯಮಗಳು ಮುಂದಿನ ದಕ್ಷಿಣ ಆಫ್ರಿಕಾ-ಬಾಂಗ್ಲಾದೇಶ ಹಾಗೂ ಪಾಕಿಸ್ತಾನ-ಶ್ರೀಲಂಕಾ ಸರಣಿಗಳಿಂದ ಜಾರಿಗೆ ಬರಲಿವೆ..! ಭಾರತ-ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಸರಣಿಯೇ ಹಳೆಯ ನಿಯಮಗಳ ಕೊನೆಯ ಸರಣಿಯಾಗಲಿದೆ‌…! ಏನಪ್ಪಾ ಅಂತಾ ಬದಲಾವಣೆ ಅಂದ್ರಾ..? ಓದಿ ನಿಮಗೇ ಗೊತ್ತಾಗುತ್ತೆ..‌

ಆಟಗಾರನಿಗೆ ಗೇಟ್ ಪಾಸ್…

ಮೈದಾನದಲ್ಲಿ ಅಂಪೈರ್ ಜೊತೆ ಕೆಟ್ಟದಾಗಿ ನಡೆದುಕೊಂಡ್ರೆ, ಅಸಭ್ಯವಾಗಿ ವರ್ತಿಸಿದ್ರೆ, ದೈಹಿಕವಾಗಿ ಹಲ್ಲೆ ಮಾಡಲು ಪ್ರಯತ್ನಿಸಿದ್ರೆ ಅಂತವರನ್ನು ಅಂಪೈರ್ ಮೈದಾನದಿಂದ ಹೊರಹಾಕುವ ನಿಯಮ ಜಾರಿಗೆ ಬರಲಿದೆ. ಹಾಗೆಯೇ ಯಾವುದೇ ಆಟಗಾರನ ಜೊತೆ ಎದುರಾಳಿ ತಂಡದ ಆಟಗಾರ ದೈಹಿಕ ದಾಳಿ ಮಾಡೋದು ಅಥವಾ ಅಪಾಯಕಾರಿಯಾಗಿ ವರ್ತಿಸೋದು ಮಾಡಿದ್ರೂ ಅಂತಹ ಆಟಗಾರ ಪೆವಿಲಿಯನ್‌ಗೆ ಹೋಗಬೇಕಾಗುತ್ತದೆ. ನಾಲ್ಕು ಹಂತದ ತಪ್ಪುಗಳಿದ್ದು, ಮೊದಲ ಮೂರು ಹಂತಕ್ಕೆ ವಾರ್ನ್ ಮಾಡಲಾಗುತ್ತೆ. ನಾಲ್ಕನೇಯ ಅಥವಾ ಅಪಾಯಕಾರಿ ವರ್ತನೆಗೆ ನೇರವಾಗಿ ಆಟಗಾರನನ್ನು ಹೊರಹಾಕಲಾಗುತ್ತದೆ..!

ಡಿಆರ್‌ಎಸ್ ನಿಯಮ ಬದಲಾವಣೆ…


ಡಿಆರ್‌ಎಸ್ ಇನ್ನು ಮುಂದೆಯೂ ಇರುತ್ರಾದ್ರೂ, ರಿವ್ಯೂ ತೆಗೆದುಕೊಂಡಾಗ ಅಂಪೈರ್ ತೀರ್ಪು ಸರಿ ಇತ್ತು ಅಂತಾದ್ರೆ ಅಂತಹ ತಂಡ ಮತ್ತೊಂದು ರಿವ್ಯು ಪಡೆಯಲು ವಂಚಿತವಾಗಲಿದೆ. ಹಾಗೂ ಇನ್ನು ಮುಂದೆ T20ಯಲ್ಲೂ ಡಿಆರ್‌ಎಸ್ ಚಾಲನೆಗೆ ಬರಲಿದೆ…

ರನ್ ಔಟ್ ನಿಯಮ…


ರನ್ ಔಟ್ ಆಗುವಾಗ ಆಟಗಾರನ ಬ್ಯಾಟ್ ಸ್ಕ್ರೀಸ್ ಒಳಗಿದ್ದು ಬ್ಯಾಟ್ ನೆಲಕ್ಕೆ ತಾಗದಿದ್ದರೂ ಅದನ್ನು ನಾಟೌಟ್ ಎಂದು ಪರಿಗಣಿಸಲಾಗುತ್ತೆ. ಇದು ಸ್ಟಂಪ್ ಔಟ್‌ಗೂ ಅನ್ವಯವಾಗುತ್ತದೆ..

ಬೌಂಡರಿ ಕ್ಯಾಚ್…


ಬೌಂಡರಿಯಿಂದ ಹೊರಹೋಗಿ ಸಿಕ್ಸ್ ಹೋಗುವಂತಹ ಕ್ಯಾಚ್‌ಗಳನ್ನು ಹಾರಿ ಹಿಡಿದಾಗ ಇಲ್ಲಿಯ ತನಕ ಅದನ್ನು ಔಟ್ ಎಂದು ಪರಿಗಣಿಸಲಾಗುತ್ತಿತ್ತು. ಇನ್ನು ಮುಂದೆ ಅದು ಸಿಕ್ಸರ್…

ಬ್ಯಾಟ್ ಹೇಗಿರಬೇಕು..?


ಬ್ಯಾಟಿನ ಉದ್ದ, ಅಗಲದಲ್ಲಿ ಯಾವುದೇ ಬದಲಾವಣೆ ಇಲ್ಲ. ಆದ್ರೆ ಬ್ಯಾಟಿನ ದಪ್ಪ 67mm ದಾಟುವಂತಿಲ್ಲ, ಹಾಗೆಯೇ ಬ್ಯಾಟಿನ ತುದಿ ಭಾಗ 40mm ಗಿಂತ ಹೆಚ್ಚು ದಪ್ಪ ಇರುವಂತಿಲ್ಲ..!

ಇದಿಷ್ಟು ಹೊಸ ನಿಯಮಗಳು… ಈ ಸಂಬಂಧ ಐಸಿಸಿ ಈಗಾಗಲೇ ಅಂಪೈರ್‌ಗಳಿಗೆ ಸೆಮಿನಾರ್ ನೀಡಿದೆ… ಮುಂಬರುವ ಸರಣಿಗಳಿಂದ ಈ ನಿಯಮ ಜಾರಿಗೆ ಬರಲಿದೆ… ಇನ್ನೇನು, ನೀವೂ ನಿಮ್ಮ ಕ್ರಿಕೆಟ್ ಆಟದ ನಿಯಮ ಬದಲಾಯಿಸಿಕೊಳ್ಳಿ…

Show More

Related Articles

Leave a Reply

Your email address will not be published. Required fields are marked *

Close