ಒಳ್ಳೆ ವಿಷ್ಯ

ಅಯ್ಯೋ ನಾನು ಸೋತುಬಿಟ್ಟೆ ಅನ್ಕೊಂಡ್ರಾ..? ಓದಿ ಇದನ್ನು…

-ಕಿರಿಕ್ ಕೀರ್ತಿ

ಒಂದೊಳ್ಳೆ ವಿಷ್ಯ ಹೇಳ್ತೀನಿ ಓದ್ಕೊಂಡ್ ಹೋಗಿ… ಒಂದು ಹಾಲ್‌ನಲ್ಲಿ ಒಂದು ಸೆಮಿನಾರ್ ನಡೀತಾ ಇತ್ತು. ಅಲ್ಲಿ ಒಬ್ಬ ವ್ಯಕ್ತಿ ಜೀವನ ಪಾಠದ ಬಗ್ಗೆ ಸಾಕಷ್ಟು ವಿಚಾರಗಳನ್ನು ಅದ್ಭುತವಾಗಿ ಹೇಳ್ತಾ ಇದ್ರು. ಇದ್ದಕ್ಕಿದ್ದ ಹಾಗೆ ಅವರ ಜೇಬಿನಿಂದ ಅವರೊಂದು ಎರಡು ಸಾವಿರ ರೂಪಾಯಿ ನೋಟು ತೆಗೆದ್ರು. ಅದನ್ನು ಕೈಲಿ ಹಿಡಿದು ಇನ್ನೂರು ಜನರಿದ್ದ ಹಾಲ್‌ನಲ್ಲಿ ‘ಇದನ್ನು ನಾನು ನಿಮಗೆ ಕೊಡ್ತೀನಿ ಯಾರಿಗೆ ಬೇಕು’ ಅಂತ ಕೇಳಿದ್ರು..! ಅಲ್ಲಿದ್ದ ಅಷ್ಟೂ ಜನ ‘ನಂಗೆ, ನಂಗೆ’ ಅಂತ ಕೈ ಎತ್ತಿದ್ರು..!

ಆಯ್ತು, ನಾನು ನಿಮ್ಮಲ್ಲೊಬ್ಬರಿಗೆ ಇದನ್ನು ಕೊಡ್ತೀನಿ..ಆದ್ರೆ… ಅಂತ ಹೇಳಿ ಅದನ್ನು ಕೈಯಲ್ಲಿ ಮುದ್ದೆ ಮಾಡಿ ‘ಈಗ್ಲೂ ಇದು ಯಾರಿಗಾದ್ರೂ ಬೇಕಾ’ ಅಂತ ಕೇಳಿದ್ರು..! ಅಲ್ಲಿದ್ದವರೆಲ್ಲ ಮತ್ತೆ ಕೈ ಎತ್ತಿದ್ರು..! ಇದನ್ನು ಹೀಗೆ ಮುದ್ದೆ ಮಾಡಿದ್ರು ಬೇಕು ಅಂತಿರಲ್ಲ ಅನ್ಕೊಂಡು, ಆ ನೋಟನ್ನು ನೆಲದ ಮೇಲೆ ಹಾಕಿ ಅದರ ಮೇಲೆ ಮಣ್ಣು ಸುರಿದ್ರು…!!! ಈಗ ಮತ್ತೆ ಕೇಳಿದ್ರು, ‘ ಈಗ ಇದು ಯಾರಿಗೆ ಬೇಕು ಹೇಳಿ ಅಂದ್ರು… ಮತ್ತೆ ಅಲ್ಲಿದ್ದವರೆಲ್ಲರೂ ‘ ನಂಗೆ ಬೇಕು’ ಅಂತ ಕೈ ಎತ್ತಿದ್ರು…! ಮಣ್ಣಾಗಿದ್ದ ನೋಟನ್ನು ಕಯಲಿ ಹಿಡಿದು, ಅದರ ಮೇಲಿದ್ದ ಧೂಳು ಕೊಡವಿ ಅವರು ಹೇಳಿದ್ರು..’ ನೋಡಿ, ಈ ನೋಟನ್ನು ಮುದ್ದೆ ಮಾಡಿದೆ, ಮಣ್ಣಲ್ಲಿ ಹಾಕ್ದೆ, ಆದ್ರೂ ಇದನ್ನು ನೀವು ಬೇಕು ಅಂತಿದ್ದೀರಿ. ಅದಕ್ಕೆ ಕಾರಣ ಅದಕ್ಕಿರುವ ಮೌಲ್ಯ..!

ಜೀವನದಲ್ಲೂ ಒಬ್ಬ ವ್ಯಕ್ತಿ ಹೀಗೆ ಸಾಕಷ್ಟು ಕಷ್ಟಗಳಿಗೆ ಸಿಲುಕಿದ್ರೂ, ತಪ್ಪು ನಿರ್ಧಾರ ಮಾಡಿ ಸಂಕಷ್ಟಕ್ಕೆ ಸಿಲುಕಿದ್ರೂ ತನ್ನ ಮೌಲ್ಯ ಕಳೆದುಕೊಳ್ಳಬಾರದು..! ಪ್ರತಿ ವ್ಯಕ್ತಿಗೂ ಅವನದ್ದೇ ಆದ ಮೌಲ್ಯ ಶಕ್ತಿ ಇರುತ್ತೆ, ಸಂಕಷ್ಟಗಳಲ್ಲಿ ಕುಗ್ಗಬಾರದು. ತನ್ನ ಮೌಲ್ಯ ಏನು ಎಂಬುದನ್ನು ಜಗತ್ತಿಗೆ ತೋರಿಸಲು ಈ ನೋಟಿನ ಹಾಗೆ ಮಣ್ಣಲ್ಲಿ ಬಿದ್ರೂ ಎದ್ದು ಬರಬೇಕು’ ಅಂದ್ರು..ಅಲ್ಲಿದ್ದವರೆಲ್ಲಾ ಎದ್ದು ನಿಂತು ಚಪ್ಪಾಳೆ ಹೊಡೆದ್ರು…

ನಿಮ್ಮ ತಾಕತ್ತು ನಿಮಗೆ ಮಾತ್ರ ಗೊತ್ತು… ಕುಗ್ಗಬೇಡ, ಸೋತಾಗ ನಿಲ್ಲಬೇಡಿ… ನುಗ್ಗಿ, ಮುನ್ನುಗ್ಗಿ… ಗೆಲುವು ನಿಮ್ಮದೇ…

ಗೆಳೆಯರೇ, ಬದುಕು ಹಾಗೆ… ನಾವು ಜೀವನದುದ್ದಕ್ಕೂ ನೂರಾರು ಬಾರಿ ಏನೇನೋ ಸಮಸ್ಯೆಗೆ ಸಿಲುಕಿಕೊಳ್ತೇವೆ. ನಲುಗಿ ಹೋಗ್ತೇವೆ.. ಕೆಲವು ಸಲ ನಮ್ಮವರಿಂದಲೇ ನಾವು ಸಂಕಷ್ಟಕ್ಕೆ ಸಿಲುಕ್ತೇವೆ.. ಆಗ ಕುಗ್ಗಿ ಹೋದ್ರೆ ನಮ್ಮ ಮೌಲ್ಯವೂ ಕುಗ್ಗಿಹೋಗುತ್ತೆ… ನೋಟು ಧೂಳು ಕೊಡವಿದಂತೆ ನೀವು ಮೈಕೊಡವಿ ಎದ್ದು ನಿಲ್ಲಿ..ನಿಮ್ಮ ಶಕ್ತಿ ಜಗತ್ತಿಗೆ ತೋರಿಸಿ.. ನಿಮ್ಮ ಶಕ್ತಿ ನಿಮಗೆ ಮಾತ್ರ ಗೊತ್ತಿರುತ್ತೆ… ಕಷ್ಟ ಮನುಷ್ಯನಿಗಲ್ಲದೇ ಇನ್ಯಾರಿಗೆ..? ಶುಭವಾಗಲಿ.. ನಗುತ್ತಾ ಜಗತ್ತು ಗೆಲ್ಲಿ…

Show More

Related Articles

1 thought on “ಅಯ್ಯೋ ನಾನು ಸೋತುಬಿಟ್ಟೆ ಅನ್ಕೊಂಡ್ರಾ..? ಓದಿ ಇದನ್ನು…”

Leave a Reply

Your email address will not be published. Required fields are marked *

Close