ವೀಡಿಯೋ ಸುದ್ದಿ

ಎಣ್ಣೆ ಹೊಡಿಮಗ… ಹೊಡ್ದು ಗಾಡಿ ಓಡ್ಸಿ ಸಾಯಿ ಮಗ…

-ಕಿರಿಕ್ ಕೀರ್ತಿ

ನಿನ್ನೆಯಿಂದ ಫೇಸ್‌ಬುಕ್‌ನಲ್ಲಿ ಒಂದು ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ‌. ಅದ್ರಲ್ಲಿ ಒಂದು ಯುವಕರ ಗುಂಪು ಕುಡಿದು ಇನ್ನೋವಾ ಕಾರ್ ಎದುರು ಡ್ಯಾನ್ಸ್ ಮಾಡಿ ನಂತರ ಅದೇ ಇನ್ನೋವಾದಲ್ಲಿ ಕುಡಿದ ಮತ್ತಲ್ಲಿ ಅತಿವೇಗವಾಗಿ ಮನಸೋ ಇಚ್ಛೆ ಕಾರು ಓಡಿಸಿ ನಂತರ ಅಪಘಾತಕ್ಕೀಡಾಗೋ ದೃಶ್ಯ ಇದೆ. ಅದರ ಜೊತೆಗೆ ಅದೇ ಕಾರು ಅಪಘಾತದದಲ್ಲಿ ನುಜ್ಜುಗುಜ್ಜಾಗಿರೋ ಫೋಟೋಗಳೂ ಇವೆ. ಅದು ತಮಿಳುನಾಡಿನಲ್ಲಿ ನಡೆದಿರೋ ಘಟನೆ. ಹಾಗು ಅದನ್ನು ರಮೇಶ್ ಮೂರ್ತಿ ಅನ್ನೋರು ಶೇರ್ ಮಾಡಿದ್ದಾರೆ.


ಈಗ ವಿಷಯ ಅದೇ. ಇಂದು ಬಹುತೇಕ ಯುವ ವರ್ಗ ಕುಡಿತದ ಚಟಕ್ಕೆ ಬಿದ್ದಿದೆ. ಅದು ಅವರ ವೈಯಕ್ತಿಕ..! ಆದ್ರೆ ಆ ಕುಡಿತ ಅವರ ಸಾವಿಗೆ ಶಾರ್ಟ್‌ಕಟ್ ಆಗಿರೋದು ನಿಜಕ್ಕೂ ಬೇಸರವಾಗೋ ವಿಷ್ಯ. ಈ ವೀಡಿಯೋದಲ್ಲಿರೋ ಹುಡುಗರು ಅದ್ಯಾರೋ ಗೊತ್ತಿಲ್ಲ. ಆ ಕಾರಿನಲ್ಲಿದ್ದ ಯಾವೊಬ್ಬನೂ ಜೀವಂತವಾಗಿರೋದಕ್ಕೆ ಸಾಧ್ಯವೂ ಇಲ್ಲ. ಆ ಮಟ್ಟಿಗೆ ಆ ಕಾರು ಜಖಂ ಆಗಿಹೋಗಿದೆ‌. ಆದ್ರೆ ಇವರ ಈ ಹುಚ್ಚಾಟಕ್ಕೆ ಪ್ರಾಣ ಹೋಗಿದ್ದು ಇವರದ್ದೇ ಆದ್ರೂ ಆ ನೋವಿನ ಶಾಪ ತಟ್ಟಿರೋದು ಅವರ ಕುಟುಂಬಗಳಿಗೆ. ಅವರೇನು ತಪ್ಪು ಮಾಡಿದ್ರು.? ಅವರಿಗ್ಯಾಕೆ ಈ ನೋವು..? ಕಷ್ಟಪಟ್ಟು ಓದಿಸಿ ಬೆಳೆಸಿದ ಮಕ್ಕಳು ಹೀಗೆ ಕುಡಿದು ಗಾಡಿ ಓಡಿಸಿ ರಸ್ತೆಯಲ್ಲಿ ಶವವಾಗಿ ಹೋದ್ರೆ ಅವರು ಈ ಸಮಾಜಕ್ಕೆ ಕೊಡುವ ಉತ್ತರವಾದ್ರೂ ಏನು..? ಅವರ ಕುಟುಂಬಸ್ಥರ ಎದುರು ತಲೆಎತ್ತಿ ನಿಲ್ಲೋದು ಹೇಗೆ..? ಸಾಕಿ ಸಲುಹಿದ ತಪ್ಪಿಗೆ ಸಾಯೋ ತನಕ ಆ ಹಿರಿಯ ಜೀವಗಳು ನೋವಲ್ಲೇ ಕೊರಗಬೇಕಾ, ಅಥವಾ ಇಂತಹ ಮಕ್ಕಳು ಇದ್ರೇನು ಸತ್ರೇನು ಅಂತ ತಲೆ ತೊಳೆದುಕೊಂಡು ಬಿಡ್ಬೇಕಾ.?


ಯುವಕರೇ… ನಿಮ್ಮ ಹುಚ್ಚಾಟಗಳು ನಿಮ್ಮಿಷ್ಟ..! ಕುಡಿಯೋದು ಬಿಡೋದು ನಿಮ್ಮ ಇಷ್ಟ. ಕುಡೀಬೇಡಿ ಅಂತ ಹೇಳಿದ ತಕ್ಷಣ ಗ್ಲಾಸಲ್ಲಿರೋ ನೈಂಟಿ ಎಣ್ಣೇನ ಚೆಲ್ಲಿಬಿಡಲ್ಲ..! ಆದ್ರೆ ಕುಡಿದು ಗಾಡಿ ಓಡಿಸೋ ದುಸ್ಸಾಹಸಕ್ಕೆ ದಯಮಾಡಿ ಕೈಹಾಕಬೇಡಿ… ನಿಮಗೆ ಅಮಲು, ಆದ್ರೆ ನಿಮ್ಮನ್ನು ನೆಚ್ಚಿಕೊಂಡ ಕುಟುಂಬಗಳಿಗೆ ಅದು ಶಾಶ್ವತ ಶಾಪ..! ಯುವ ಶಕ್ತಿ ದೇಶ ಕಟ್ಟೋ ಕೆಲಸ ಮಾಡಬೇಕಿದೆ. ಅದನ್ನು ಬಿಟ್ಟು ಕುಡಿದ ಮತ್ತಲ್ಲಿ ಟೇಬಲ್ ಕುಟ್ಟೋ ಕೆಲಸ ಮಾಡ್ತಿದ್ದಾರೆ..! ಸ್ಟೇರಿಂಗೆಗೆ ಕೈ ಇಡೋ ಮುಂಚೆ ನೂರು ಸಲ ಯೋಚನೆ ಮಾಡಿ. ಕುಡೀಲೇಬೇಕು ಅಂತಿದ್ರೆ ಕುಡಿದು ಟ್ಯಾಕ್ಸಿಯಲ್ಲಿ ಮನೆ ಸೇರ್ಕೊಳಿ. ಕನಿಷ್ಟ ಮಗ ಜೀವಂತವಾಗಿ ಮನೆಗೆ ಬಂದ ಅಂತ ಅಪ್ಪ ಅಮ್ಮನಿಗೆ ಸಮಾಧಾನ ಆಗ್ಲಿ… ಈ ವೀಡಿಯೋ ಮತ್ತೊಮ್ಮೆ ನೋಡಿ, ಕಣ್ಮುಚ್ಚಿ ನಿಮ್ಮ ಕುಟುಂಬದ ಸದಸ್ಯರನ್ನು ನೆನಪು ಮಾಡ್ಕೊಳಿ. ಅದರ ಮೇಲೂ ನಿಮಗೆ ಏನೂ ಅನಿಸದಿದ್ರೆ…’ಕುಡಿ ಮಗಾ..ಕುಡ್ದು ಗಾಡಿ ಓಡ್ಸಿ ಸಾಯಿ ಮಗಾ…

Photo & Video :Ramesh Murthy

Show More

2 thoughts on “ಎಣ್ಣೆ ಹೊಡಿಮಗ… ಹೊಡ್ದು ಗಾಡಿ ಓಡ್ಸಿ ಸಾಯಿ ಮಗ…”

Leave a Reply

Your email address will not be published. Required fields are marked *

Close