ಐತ್ ಲಗಾ

ಇದನ್ನು ನೋಡಿದ ಮೇಲೆ ನೀವು ವಿಮಾನ ಹತ್ತೋದು ಸ್ವಲ್ಪ ಅನುಮಾನವೇ..!

ವಿಮಾನ ಅಂದ್ರೆ ಸಾಕಷ್ಟು ಜನರಿಗೆ ಒಂದು ರೀತಿಯ ಭಯ ಇದ್ದೇ ಇದೆ. ಬಸ್ಸು ಕಾರಲ್ಲಿ ಆಕ್ಸಿಡೆಂಟ್ ಆದ್ರೆ ಹಂಗೂ ಹಿಂಗೂ ಜೀವ ಉಳಿಯುತ್ತೆ, ವಿಮಾನ ಅಪಘಾತವಾದ್ರೆ ಒಂದು ಮೂಳೇನೂ ಸಿಗಲ್ಲ ಅಂತ..! ಹಾಗೆ 600 ಜನರಿಗೆ ಸಾವು ರಪ್ ಅಂತ ಪಾಸ್ ಆದ ಘಟನೆ ಇದು.


ಇದು ಜರ್ಮನಿಯಲ್ಲಿ ಅಕ್ಟೋಬರ್ 5ರಂದು ನಡೆದ ಘಟನೆ. ಎಮಿರೇಟ್ಸ್‌ನ ಏರ್‌ಬಸ್ A380 ವಿಮಾನ ಡಸ್ಸೆಲ್ಡಾರ್ಫ್‌ನಲ್ಲಿ ಲ್ಯಾಂಡ್ ಆಗಬೇಕಿತ್ತು. ಆದ್ರೆ ಇನ್ನೇನು ಕೆಳಗಿಳೀಬೇಕು ಅನ್ನೋ ಅಷ್ಟರಲ್ಲಿ ಸಿಕ್ಕಾಪಟ್ಟೆ ಗಾಳಿ ಬೀಸಿದೆ. ಮತ್ತೆ ವಿಮಾನವನ್ನು ಮೇಲೆತ್ತಲೂ ಸಾಧ್ಯವಾಗದ, ಕೆಳಗಿಳಿಸಲೂ ಸಾಧ್ಯವಾಗದ ಪರಿಸ್ಥಿತಿ. ಆ ಬಿರುಗಾಳಿ ಅಷ್ಟು ದೊಡ್ಡ ವಿಮಾನವನ್ನೇ ಅಲ್ಲಾಡಿಸಿಬಿಡ್ತು. ಹೇಗಾದರೂ ಕೆಳಗಿಳಿಯೇ ಸಿದ್ದ ಎಂಬ ನಿರ್ಧಾರ ಮಾಡಿದ ಪೈಲಟ್ ರನ್ ವೇ ಮೇಲೆ ವಿಮಾನವನ್ನು ಪೊಸಿಷನ್ ಮಾಡಿದ್ದಾರೆ. ಆದ್ರೆ ಗಾಳಿ ರಭಸ ಜಾಸ್ತಿಯೇ ಆಗಿದೆ. ಸಹಜವಾಗಿ ವೇಗವಾಗಿ ರನ್ ವೇಗೆ ಇಳಿಯುವ ವಿಮಾನ ಅಲ್ಲಾಡಿಕೊಂಡೇ ರನ್ ವೇ ಮುಟ್ಟಿದೆ. ಆದ್ರೆ ಒಳಗಿದ್ದವರಿಗೆ ಒಂದು ಕ್ಷಣ ಜೀವ ಹೋದಂತಾಗಿದೆ‌. ಯಾಕಂದ್ರೆ ಇಡೀ ವಿಮಾನ ನಿಯಂತ್ರಣ ತಪ್ಪಿ ಅಲ್ಲಾಡಲು ಶುರು ಮಾಡಿದೆ. ಮುಂದಿನ ಚಕ್ರ ಒಂದು ಕಡೆ, ಹಿಂದಿನ ಚಕ್ರಗಳು ಮತ್ತೊಂದು ಕಡೆ. ಬೆಂಗಳೂರಿನ ಗುಂಡಿಗಳ ಮಧ್ಯ ಬೈಕು ಕಾರುಗಳು ಸರ್ಕಸ್ ಮಾಡುವ ಹಾಗೆ ವಿಮಾನ ಒದ್ದಾಡಿದೆ. ಒಳಗಿದ್ದವರೆಲ್ಲಾ ಕಿರುಚಾಡಲು ಶುರುವಿಟ್ಟಿದ್ದಾರೆ. ಆದ್ರೆ ಪೈಲಟ್ ತನ್ನ ಅನುಭವದಿಂದಾಗಿ ವಿಮಾನದ ಮೇಲೆ ಹಿಡಿತ ಸಾಧಿಸಿದ್ದಾನೆ. ಅದೃಷ್ಟವಷಾತ್ ಎಲ್ಲರನ್ನೂ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.


ಈ ವೀಡಿಯೋ ನೋಡಿ… ಇದನ್ನು ನೋಡಿದ ಮೇಲೆ ನೀವು ವಿಮಾನ ಹತ್ತೋಕೆ ಸ್ವಲ್ಪ ಹಿಂದೆಮುಂದೆ ನೋಡಿದರೂ ಆಶ್ಚರ್ಯವಿಲ್ಲ..

Show More

Related Articles

Leave a Reply

Your email address will not be published. Required fields are marked *

Close