ಏನ್ ಸುದ್ದಿ?

ಮಾಜಿ ಸಿಎಂ ಕುಮಾರಸ್ವಾಮಿ ಆಸ್ಪತ್ರೆಗೆ ದಾಖಲು…

ಮಾಜಿ ಕುಮಾರಸ್ವಾಮಿಯವರು ಆಸ್ಪತ್ರೆಗೆ ದಾಖಲಾಗಿದ್ದಾರೆ..! ಬನ್ನೇರುಘಟ್ಟ ರಸ್ತೆಯಲ್ಲಿರೋ ಅಪೋಲೋ ಆಸ್ಪತ್ರೆಯಲ್ಲಿದ್ದಾರೆ… ಕಾರಣ ಅವರಿಗಿರೋ ಹೃದಯ ಸಂಬಂಧಿ ಸಮಸ್ಯೆ‌. ಕಳೆದ ಹತ್ತು ವರ್ಷದ ಹಿಂದೆ ಕುಮಾರಸ್ವಾಮಿಯವರಿಗೆ ಹೃದಯ ಶಸ್ತ್ರ ಚಿಕಿತ್ಸೆ ನಡೆದಿತ್ತು. ಆ ಸಂದರ್ಭದಲ್ಲಿ ಅವರ ಹೃದಯಕ್ಕೆ ವಾಲ್ವ್ ಒಂದನ್ನು ಅಳವಡಿಸಲಾಗಿತ್ತು. ಅದು ಈಗ ಡ್ಯಾಮೇಜ್ ಆಗಿರೋದ್ರಿಂದ ಅದನ್ನು ಬದಲಿಸಬೇಕಾಗಿದೆ. ಹಾಗಾಗಿ ಕುಮಾರಸ್ವಾಮಿಯವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ರಾಜಕೀಯವಾಗಿ ತುಂಬಾ ಬಿಜಿಯಾಗಿದ್ದ ಮಾಜಿ‌ಮುಖ್ಯಮಂತ್ರಿಗಳು ಕೆಮ್ಮಿನಿಂದ ಬಳಲುತ್ತಿದ್ರು. ಅದು ವಿಪರೀತವಾಗಿ ಹೃದಯಕ್ಕೆ ಅಳವಡಿಸಲಾಗಿದ್ದ ವಾಲ್ವ್‌ ಡ್ಯಾಮೇಜ್ ಆಗಿದೆ. ಈ ಕಾರಣಕ್ಕಾಗಿ ಅದನ್ನು ಬದಲಿಸುವ ಶಸ್ತ್ರ ಚಿಕಿತ್ಸೆ ನಾಳೆ ಬೆಳಗ್ಗೆ 10.55ಕ್ಕೆ ನಡೆಯಲಿದೆ ಎಂದು ಖ್ಯಾತ ವೈದ್ಯರಾದ ಡಾ.ಮಂಜುನಾಥ್ ತಿಳಿಸಿದ್ದಾರೆ…


ಆರೋಗ್ಯ ಕೈ ಕೊಟ್ಟರೆ ಯಾರೇನು ಮಾಡಕ್ಕಾಗಲ್ಲ, ಆದ್ರೆ ರಾಜಕೀಯವಾಗಿ ಸಕ್ರಿಯವಾಗಿರಬೇಕಾದ ಸಮಯದಲ್ಲಿ ಕುಮಾರಸ್ವಾಮಿಯವರು ಆಸ್ಪತ್ರೆ ಸೇರಿರೋದು ಜೆಡಿಎಸ್ ವಲಯದಲ್ಲಿ ಸ್ವಲ್ಪ ಆತಂಕ ಮೂಡಿಸಿದೆಯಾದ್ರೂ ಶೀಘ್ರ ಚೇತರಿಸಿಕೊಳ್ಳುವ ಭರವಸೆಯೂ ಕಾರ್ಯಕರ್ತರಲ್ಲಿದೆ. ಕುಮಾರಸ್ವಾಮಿಯವರು ಬೇಗ ಗುಣಮುಖರಾಗಲಿ ಅನ್ನೋದು ಕಾರ್ನಾಟಕ.ಕಾಮ್ ಹಾರೈಕೆ…

Show More

Related Articles

Leave a Reply

Your email address will not be published. Required fields are marked *

Close