ಏನ್ ಸುದ್ದಿ?

ಈಕೆ ಗಾಂಧೀಜಿ‌ ಮರಿ ಮೊಮ್ಮಗಳು..!

ಮಹಾತ್ಮ ಗಾಂಧೀಜಿ… ಭಾರತದ ರಾಷ್ಟ್ರಪಿತ. ಸ್ವಾತಂತ್ರ್ಯಕ್ಕೋಸ್ಕರ ಹೋರಾಡಿದವರ ಸಾಲಲ್ಲಿ ಮೊದಲ ಹೆಸರು ಕೇಳಿಬರೋದೇ ರಾಷ್ಟ್ರಪಿತ ಗಾಂಧೀಜಿಯವರದ್ದು… ಅವರ ಜೀವನಶೈಲಿ, ಸಿದ್ದಾಂತಗಳು ಅದೆಷ್ಟೋ ಜನರಿಗೆ ಆದರ್ಶ…! ಆದ್ರೆ ಅವರ ಈಗ ಇಂಟರ್ನೆಟ್ಟಲ್ಲಿ ಅವರ ಮರಿಮೊಮ್ಮಗಳು ಸುದ್ದಿಯಾಗ್ತಿರೋದು ಬೇರೆಯದೇ ಕಾರಣಗಳಿಂದ. ಗಾಂಧಿ ತತ್ವ, ಸಿದ್ದಾಂತ ಎಲ್ಲ ಬದಿಗಿಡಿ, ನಾನು ಭಾರತೀಯಳಾಗಿ ಡಿಜೆ ಆಗಿರೋ ಕಾರಣಕ್ಕೆ ನಾನು ಫೇಲ್ಯೂರ್ ಅಂತ ಇನ್ಸ್ಟಾಗ್ರಾಮಲ್ಲಿ ಹಾಕಿಕೊಂಡಿದ್ದಾರೆ ಗಾಂಧೀಜಿಯವರ ಮರಿಮೊಮ್ಮಗಳು ಮೇದಾ ಗಾಂಧಿ.

ಇರೋದು ಅಮೆರಿಕಾದಲ್ಲಿ. ಅವರ ಲೈಫ್ ಸ್ಟೈಲ್, ಅವರ ಬದುಕು ಎಲ್ಲಾ ಗಾಂಧೀಜಿಯವರ ಆಲೋಚನೆಗಿಂತ ಸಾವಿರಾರು ಮೈಲಿ ದೂರದಲ್ಲಿದೆ. ಅವತ್ತವರು ಹೇಳಿದ್ದನ್ನು ಇವರೆಲ್ಲಾ ಇವತ್ತು ಪಾಲಿಸಬೇಕು ಅಂತ ಕಾನೂನೇನು ಇಲ್ಲ. ಆದ್ರೆ ಹೆಸರಿನ ಜೊತೆಗಿರುವ ಗಾಂಧೀಜಿಯವರ ಹೆಸರಿಗಾದ್ರೂ ಒಂದು ಗೌರವ ಇರಬೇಕು ಅನ್ನೋದಷ್ಟೆ ನಮ್ಮ ಕಾಳಜಿ.

ಅವರ ಇನ್ಸ್ಟಾ ಪೋಸ್ಟುಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಅವರಿಗೆ ಸೆನ್ಸಾರ್ ಇಲ್ಲವೇ ಇಲ್ಲ..! ಗಾಂಧೀಜಿಯವರನ್ನೂ ಕಾಮಿಡಿ ಮಾಡಿದ ಕೆಲವು ಪೋಸ್ಟುಗಳೂ ಇವೆ. ಮೇಧಾ ಗಾಂಧಿ ಅವರ ಕೆಲವು ಪ್ರಸಿದ್ದ ಇನ್ಸ್‌ಟಾಗ್ರಾಮ್ ಪೋಸ್ಟುಗಳ ಒಂದಷ್ಟು ಸ್ಕ್ರೀನ್ ಶಾಟ್ ಇಲ್ಲಿವೆ..ನೋಡಿ…

Show More

Related Articles

Leave a Reply

Your email address will not be published. Required fields are marked *

Close