ರಾಜಕೀಯ

ನರೇಂದ್ರ ಮೋದಿ ಇಷ್ಟಾನಾ.? ಕಷ್ಟಾನಾ..?

‘ನರೇಂದ್ರ ಮೋದಿ’… ಅದು ಬರಿಯ ಹೆಸರಲ್ಲ, ಜಾಗತಿಕವಾಗಿ ಅವರ ಹೆಸರು ಒಂದು ಶಕ್ತಿಯಾಗಿದೆ. ಭಾರತೀಯ ಜನತಾ ಪಕ್ಷದ ಅತ್ಯಂದ ದೊಡ್ಡ ಅಸ್ತ್ರವೂ ಅವರೇ…! ಆದ್ರೆ ಒಂದು ದೇಶದ ಪ್ರಧಾನಿಯಾದಾಗ ಅವರು ಒಂದು ಪಕ್ಷಕ್ಕೆ ಸೀಮಿತವಾಗದೇ ದೇಶದ ಧ್ವನಿಯಾಗಿದ್ದಾರೆ. ಆದ್ರೆ ಮೋದಿಯವರ ವಿಚಾರದಲ್ಲಿ ಅಭಿಪ್ರಾಯಗಳು ತುಂಬಾ ವಿಭಿನ್ನವಾಗಿವೆ. ಕೆಲವರಿಗೆ ಅವರೆಂದರೆ ಹುಚ್ಚು ಅಭಿಮಾನ. ನಮ್ಮ ದೇಶವನ್ನು ಇಡೀ ವಿಶ್ವ ತಿರುಗಿ ನೋಡೋ ಹಾಗೆ ಮಾಡಿದ್ದು ನರೇಂದ್ರ ಮೋದಿಯವರು ಅಂತಲೂ ಹೇಳಬಹುದು.

ಆದ್ರೆ ಕೆಲವರಿಗೆ ಅವರ ಬಗೆಗಿನ ಅಭಿಪ್ರಾಯ ಬೇರೆಯೇ ಇದೆ. ಅವರನ್ನು ಕೋಮುವಾದಿ ಅಂತ ಹೇಳುವವರ ಸಂಖ್ಯೆಯೂ ದೊಡ್ಡದಿದೆ. ಆದ್ರೆ ನಿಜಕ್ಕೂ ಮೋದಿಯವರ ಬಗ್ಗೆ ಕರ್ನಾಟಕದ ಜನರ ಅಭಿಪ್ರಾಯ ಏನಿದೆ ಎಂದು ತಿಳಿಯುವ ಸಲುವಾಗಿ ‘ಕರ್ನಾಟಕ.ಕಾಮ್’ ಇಂದು ಒಂದು ಫೇಸ್‌ಬುಕ್ ಸಮೀಕ್ಷೆ ನಡೆಸ್ತು. ಅದರ ಪ್ರಕಾರ, ಮೋದಿಯವರ ಈವರೆಗಿನ ಆಡಳಿತ ನಿಮಗೆ ಮೆಚ್ಚುಗೆಯಾಗಿದಿಯಾ ಅಥವಾ ಬೇಸರ ತಂದಿದಿಯಾ ಅನ್ನೋ ಪ್ರಶ್ನೆ ಇಟ್ಕೊಂಡು ಈ ಸಮೀಕ್ಷೆ ನಡೆಸಿತು. ಎರಡು ಗಂಟೆಗಳ ಕಾಲ ನಡೆದ ಸಮೀಕ್ಷೆಯಲ್ಲಿ 5300 ಕ್ಕೂ ಹೆಚ್ಚು ಜನ ಮತ ಹಾಕಿದ್ರು. 3734 ಮಂದಿಗೆ ಮೋದಿಯವರ ಆಡಳಿತ ಮೆಚ್ಚುಗೆಯಾಗಿದ್ರೆ, 555 ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉಳಿದವರು ನಿಡಲಾಗಿದ್ದ ಎಮೋಟಿಕಾ ಬಿಟ್ಟು ಬೇರೆ ಎಮೋಟಿಕಾ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.


ಒಟ್ಟಾರೆ, ಇದನ್ನು ಗಮನಿಸಿದಾಗ ಮೋದಿಯವರ ಪರ ಒಲವು ಹೆಚ್ಚಿನವರಲ್ಲಿದೆ. ಇತ್ತೀಚಿನ ನೋಟ್ ಬ್ಯಾನ್ ನಂತರ ಮೋದಿಯವರ ವಿಚಾರದಲ್ಲಿ ಸಾಕಷ್ಟು ದ್ವಂದ್ವ ನಿಲುವುಗಳಿವೆ. ಹಾಗೆಯೆ ಭಾರತ ಆರ್ಥಿಕತೆಗೆ ಮೋದಿ ದೊಡ್ಡ ಪೆಟ್ಟು ಕೊಟ್ಟರು ಎಂಬ ಮಾತುಗಳೂ ಕೇಳಿ ಬಂದಿವೆ. ಅದರಾಚೆಗೆ ಮೋದಿಯವರು ಜಾಗತಿಕ ಮಟ್ಟದಲ್ಲಿ ಭಾರತದ ಹೆಸರನ್ನು ಎತ್ತಿಹಿಡಿಯೊ ಕೆಲಸ ಮಾಡುವುದರ ಜೊತೆಗೆ ನೆರೆಯ ಪಾಕಿಸ್ತಾನ ಹಾಗೂ ಚೀನಾಗೂ ಎಚ್ಚರಿಕೆ ಕೊಟ್ಟದ್ದಾರೆ ಎಂಬಂತಹ ಸಾಕಷ್ಟು ಲೆಖನಗಳೂ ಪ್ರಕಟವಾಗಿವೆ. ವಿಧಾನಸಭಾ ಚುನಾವಣೆಗೆ ದಿನಗಳು ಹತ್ತಿರವಾಗ್ತಿದ್ದ ಹಾಗೆ ಎಲ್ಲ ಪಕ್ಷಗಳೂ ಬೇರೆಬೇರೆ ಅಸ್ತ್ರ ಪ್ರಯೋಗುತ್ತಿವೆ. ಹೀಗಿರುವಾಗ ಮೋದಿ ಅಸ್ತ್ರ ಕರ್ನಾಟದಲ್ಲಿ ಎಷ್ಟು ಪರಿಣಾಮ ಬೀರುತ್ತೆ ಕಾದು ನೋಡ್ಬೇಕು…

https://www.facebook.com/kirikkeerthi/videos/1805703942790396/

Tags
Show More

Leave a Reply

Your email address will not be published. Required fields are marked *

Close