ಏನ್ ಸುದ್ದಿ?

ಭಾರತ ಈಗ ನಂಬರ್. 1

ಆಸ್ಟ್ರೇಲಿಯಾ ವಿರುದ್ಧ ಮೂರು ಏಕದಿನ ಪಂದ್ಯಗಳಲ್ಲಿ ಜಯಭೇರಿ ಬಾರಿಸ್ತಿದ್ದ ಹಾಗೆಯೇ ಭಾರತ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ನಂಬರ್ ವನ್ ಸ್ಥಾನಕ್ಕೇರಿದೆ. ಈಗಾಗ್ಲೇ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿದ್ದ ಭಾರತಕ್ಕೆ ಮತ್ತೊಂದು ನಂಬರ್ ವನ್ ಸ್ಥಾನ ಏಕದಿನದ ಪಟ್ಟಿಯಲ್ಲಿ ಸಿಕ್ಕಿದೆ…

ODI Ranking

ದಕ್ಚಿಣ ಆಫ್ರಿಕಾ ಬಹಳಾ ತಿಂಗಳುಗಳಿಂದ ಏಕದಿನ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಭದ್ರವಾಗಿ ನಂಬರ್ ವನ್ ಆಗಿ ಮೆರೀತಿತ್ತು. 119 ರೇಟಿಂಗ್ ದಾಟೋಕೆ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ಎಷ್ಟೇ ಪ್ರಯತ್ನ ಪಟ್ರೂ ಆಗೇ ಇರಲಿಲ್ಲ. ಆದ್ರೆ ಯಾವಾಗ ಎರಡನೇ ಸ್ಥಾನದಲ್ಲಿದ್ದ ಭಾರತ ಹಾಗೂ ಮೂರನೇ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾ ನಡುವೆ ಏಕದಿನ ಸರಣಿ ಶುರು ಆಯ್ತೋ, ಆಗಲೇ ಭಾರತ ತಂಡ ಡಿಸೈಡ್ ಮಾಡಿದ ಹಾಗಿತ್ತು. ಈ ಸಲ ಇವರನ್ನು ಬಡಿದು ಬಾರಿಸಿದರೆ ನಂಬರ್ ವನ್ ಸ್ಥಾನ ಫಿಕ್ಸ್ ಅಂತ. ಅದೇ ಕಾರಣಕ್ಕೆ ರೊಚ್ಚಿಗೆದ್ದು ಮೈದಾನಕ್ಕಿಳಿದ ಭಾರತ ತಂಡ ಮೂರೂ ಪಂದ್ಯಗಳನ್ನೂ ಜಯಗಳಿಸಿ ತನ್ನ ರೇಟಿಂಗ್ ಪಾಯಿಂಟ್ 120ಕ್ಕೆ ಏರಿಸಿಕೊಂಡು, ದಕ್ಷಿಣಾ ಆಫ್ರಿಕಾ ತಂಡವನ್ನು ಎರಡನೇ ಸ್ಥಾನಕ್ಕೆ ಎಳೆದು ಮೇಲೇರಿದೆ. ಹಾಗಾಗಿ ಈಗ ಮತ್ತೆ ಭಾರತ ನಂಬರ್ ವನ್..!

test ranking

ಇನ್ನು ಮೂರನೇ ಸ್ಥಾನದಲ್ಲಿರೋ ಆಸ್ಟ್ರೇಲಿಯಾ 114 ಪಾಯಿಂಟ್ ಪಡೆದಿದೆ. ನಾಲ್ಕನೇ ಸ್ಥಾನದಲ್ಲಿ ಇಂಗ್ಲೆಂಡ್ 113, ನ್ಯೂಜಿಲೆಂಡ್ 111 ಪಾಯಿಂಟ್ ಪಡೆದಿವೆ.. ನಿಮ್ಮ ಕುತೂಹಲಕ್ಕೆ ಹೇಳೋದಾದ್ರೆ ಪಾಕಿಸ್ತಾನ 95 ಪಾಯಿಂಟ್ ಪಡೆದು ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ..!

ಒಟ್ಟಾರೆ, ಭಾರತ ಈಗ ಭರ್ಜರಿ ಫಾರ್ಮಲ್ಲಿದೆ. ಒಂಥರಾ ಮುಟ್ಟಿದ್ದೆಲ್ಲಾ ಚಿನ್ನ ಅಂತಾರಲ್ಲ ಹಾಗೆ. ಕೊಹ್ಲಿಗೆ ಅದೃಷ್ಟ ಒದ್ಕೊಂಡು ಬಂದಿದೆ. ಮತ್ತೊಂದು ಕಡೆ ಹೊಸ ಹುಡುಗರು ಮೈದಾನದಲ್ಲಿ ಬ್ಯಾಟ್-ಬಾಲ್ ಜೊತೆ ಮ್ಯಾಜಿಕ್ ಮಾಡ್ತಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ಜೊತೆಗೆ ಅದೃಷ್ಟವೂ ಜೊತೆಯಾಗಿದೆ. ಸದ್ಯಕ್ಕೆ ಭಾರತ ಕ್ರಿಕೆಟ್ ತಂಡಕ್ಕೆ ನಮ್ಮೆಲ್ಲರ ಪರವಾಗಿ ಅಭಿನಂದನೆಗಳು…

Photo Gallery:

Tags
Show More

Related Articles

Leave a Reply

Your email address will not be published. Required fields are marked *

Close