ಐತ್ ಲಗಾ

ಎಷ್ಟು ಜನ ಹುಟ್ಟಿದ್ರು..? ಎಷ್ಟು ಜನ ಸಾವನ್ನಪ್ಪಿದ್ರು..?

ವಿಶ್ವದ ಜನಸಂಖ್ಯೆ ಪ್ರತಿ ಕ್ಷಣ ಜಾಸ್ತಿ ಆಗ್ತಾನೇ ಇರುತ್ತೆ. ಆದ್ರೆ ಎಷ್ಟು ಜಾಸ್ತಿ ಆಗುತ್ತೆ, ಎಷ್ಟು ಜನ ಮರಣ ಹೊಂದಿದ್ರು..? ಯಾವ ದೇಶದಲ್ಲಿ ಎಷ್ಟು ಜನಸಂಖ್ಯೆ ಜಾಸ್ತಿ ಆಗ್ತಿದೆ ಅಂತ ತಿಳ್ಕೊಳೋ ಕುತೂಹಲ ಪ್ರತಿಯಬ್ಬರಿಗೂ ಇರುತ್ತೆ.. ಆ ಕುತೂಹಲಕ್ಕೆ ಉತ್ತರ ಇಲ್ಲಿದೆ.‌

Worldometers.info ಅನ್ನೊ ವೆಬ್‌ಸೈಟ್ ಈ ಮಾಹಿತಿ ಕಲೆ ಹಾಕುತ್ತೆ. ಪ್ರತಿ ಕ್ಷಣ ದ ಜನಸಂಖ್ಯಾ ಮಾಹಿತಿ ಇಲ್ಲಿ ಸಿಗುತ್ತೆ. ಈ ದಿನ ಎಷ್ಟು ಜನ ಜನಿಸಿದ್ರು, ಸಾವನ್ನಪ್ಪಿದ್ರು, ನಿನ್ನೆಗಿಂತ ಇವತ್ತು ಎಷ್ಟು ಜನಸಂಖ್ಯೆ ಜಾಸ್ತಿ ಆಯ್ತು ಅನ್ನೋದ್ರಿಂದ ಹಿಡಿದು, ಈ ವರ್ಷದ ಮಾಹಿತಿಯೂ ಇಲ್ಲಿ ಲಭ್ಯ…!

ಭಾರತಕ್ಕಿಂತ ಚೀನಾದ ಜನಸಂಖ್ಯೆ ಎಷ್ಟು ಜಾಸ್ತಿ ಇದೆ. ಬೇರೆಬೇರೆ ದೇಶಗಳ ಈ ಕ್ಷಣದ ಮಾಹಿತಿಯೂ ಸಿಗುತ್ತೆ.. ಹಾಗೆಯೇ ಯಾವ ವರ್ಷ ವಿಶ್ವದ ಜನಸಂಖ್ಯೆ ಎಷ್ಟಾಯ್ತು, ಮುಂದೆ ಎಷ್ಟಾಗುತ್ತೆ ಅನ್ನೋದೂ ತಿಳ್ಕೋಬೋದು.. ಇನ್ನೂ ಸಿಕ್ಕಾಪಟ್ಟೆ ಇದೆ. ನೀವೆ ಒಮ್ಮೆ ವೆಬ್‌ಸೈಟಿಗೆ ಭೇಟಿ ಕೊಟ್ರೆ ಇನ್ನಷ್ಟು ಮಾಹಿತಿ ಸಿಗುತ್ತೆ…

ಇದಷ್ಟೇ ಅಲ್ಲ, ಎಷ್ಟು ಕಾರುಗಳು, ಮೊಬೈಲ್, ಟಿವಿ ಮಾರಾಟವಾಗಿವೆ ಅನ್ನೋದರ ಮಾಹಿತಿಯ ಜೊತೆಗೆ ಎಷ್ಟು ಜನ ಇಂಟರ್ನೆಟ್ ಉಪಯೋಗಿಸ್ತಾರೆ ಅನ್ನೋದರ ಮಾಹಿತಿಯೂ ಇಲ್ಲಿದೆ..

http://www.worldometers.info

Show More

Related Articles

Leave a Reply

Your email address will not be published. Required fields are marked *

Close