ಏನ್ ಸುದ್ದಿ?

ಈ ಹುಡುಗಿ ಸಾವಿಗೆ ಕಾರಣ ಬೆಂಗಳೂರು ಗುಂಡಿ…!!?

.
ಅಣ್ಣಾವ್ರ ಹಾಡು ಗೊತ್ತಲ್ವಾ..? ಹೇರಿಕೊಂಡು ಹೋಗೋದಿಲ್ಲ ಸತ್ತಾಗ್ ಬಂಡಿ, ಇರೋದ್ರೊಳಗೆ ನೋಡು ಒಮ್ಮೆ ಜೋಗಾದ್ ಗುಂಡಿ… ಅದನ್ನೀಗ ಬದಲಿಸೋ ಸಮಯ ಬಂದಿದೆ… ‘ಹೇರಿಕೊಂಡು ಹೋಗೋದಿಲ್ಲ ಸತ್ತಾಗ್ ಬಂಡಿ, ತಾಕತ್ತಿದ್ರೆ ತಪ್ಪುಸ್ಕೊಳೋ ಬೆಂಗ್ಳೂರ್ ಗುಂಡಿ..’ ಅಂತ…!


ಬೆಂಗಳೂರಿನ ಗುಂಡಿಗಳು ರಾಕ್ಷಸ ರೂಪ ತಾಳ್ತಿವೆ. ಸಮುದ್ರದ ಸುಳಿಯಿಂದ ತಪ್ಪಿಸಕೊಳ್ಳಬಹುದು ಆದ್ರೆ ಬೆಂಗಳೂರಿನ‌ ರಸ್ತೆ ಗುಂಡಿಗಳಿಂದ ತಪ್ಪಿಸಿಕೊಳ್ಳೋದು ಅಸಾಧ್ಯ ಅನ್ನೋ ಹಾಗಾಗಿದೆ..! ಈಗ ಕೆಲವು ಗಂಟೆಗಳ ಮುಂಚೆ ವೀಣಾ ಎಂಬ 21 ವರ್ಷದ ಯುವತಿ ಗುಂಡಿಗೆ ಬಲಿಯಾಗಿದ್ದಾರೆ. ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಇಬ್ಬರಲ್ಲಿ ಹಿಂದೆ ಕೂತಿದ್ದ ವೀಣಾ ಅವರು ಬಿದ್ದ ತಕ್ಷಣ ಟ್ರಕ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದರೆ. ಕಣ್ಣೆದುರಿಗೆ ಕಂಡ ರಾಕ್ಷಸ ಗುಂಡಿ ತಪ್ಪಿಸಲು ಅವರ ಅಕ್ಕ ಲಕ್ಷ್ಮಿ ಪ್ರಯತ್ನಿಸಿದರಾದರೂ ಸಾಧ್ಯವಾಗದೇ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಅದಾಗಿ ಕೆಲವೇ ಕ್ಷಣದಲ್ಲಿ ವೀಣಾ ಅವರ ಪ್ರಾಣಪಕ್ಷಿ ಹಾರಿಹೋಗಿದೆ.

ಈಗ ಪ್ರಶ್ನೆ ಅದೇ.. ಹೀಗೆ ಸಾಲು ಸಾಲು ಜೀವಗಳು ಗುಂಡಿಗೆ ಬಲಿಯಾಗ್ತಿದ್ರೂ ಸಚಿವರು ಮಾತ್ರ ಅದಕ್ಕೆ ಗುಂಡಿ ಕಾರಣ ಅಲ್ಲವೇ ಅಲ್ಲ ಅಂತಿದ್ದಾರೆ… ಮಳೆ ಬಂತು, ಗುಂಡಿ ಆಯ್ತು ಅಂತ ಹೇಳೋದು ಸುಲಭ. ಆದ್ರೆ ಹೋಗ್ತಿರೋ ಜೀವಕ್ಕೆ ಬೆಲೆ ಇಲ್ವಾ.? ಸಾವಿರಾರು ಕೋಟಿ ಕೊಟ್ಟು ತಂದ ಗುಂಡಿ ಮುಚ್ಚೋ ಯಂತ್ರಗಳು ಏನ್ಮಾಡ್ತಿವೆ..? ಗುಂಡಿ ಮುಚ್ಚೋದೇ ಆದ್ಯ ಕರ್ತವ್ಯ ಅಂತ ಸಿಎಂ ಸಾಹೇಬ್ರು 2013ರಲ್ಲೇ ಹೇಳಿಕೆ ಕೊಟ್ರು. 2017ರಲ್ಲೂ ಇನ್ನೂ ಅದೇ ಕಥೆ ಹೇಳಿದ್ರೆ ಜನ ಹೇಗೆ ನಂಬ್ತಾರೆ..? ಸಿಲಿಕಾನ್ ಸಿಟಿ, ಪಾಟ್ ಹೋಲ್ ಸಿಟಿಯಾಗಿದೆ..!

Art : Badal Nanjundaswamy

ಬಿಬಿಎಂಪಿ ಮೂರೂ ಬಿಟ್ಟು ಎಷ್ಟು ಗುಂಡಿ ಇದೆ ಅಂತ ಲೆಕ್ಕ ಕೊಡ್ತಿದೆ. 15 ದಿನದಲ್ಲಿ ಮುಚ್ತೀವಿ ಮುಚ್ತೀವಿ ಅಂತ ಸತ್ತವರ ಶವದ ಮೇಲೆ ಮಣ್ಣು ಹಾಕಿ ಮುಚ್ತಿದೆ. ಗುಂಡಿ ರಾಜಕೀಯ ನಿಲ್ಲಿಸಿ ಮೊದಲು ಗುಂಡಿ ಮುಚ್ಚಿ… ಸರ್ಕಾರವೂ ನಿಮ್ಮದೇ, ಬಿಬಿಎಂಪಿಯೂ ನಿಮ್ಮದೇ… ಬೇಗ ಗುಂಡಿ ಮುಚ್ಚಿದ್ರೆ ಅದರ ಕ್ರೆಡಿಟ್ಟೂ ನಿಮಗೇ… ಗುಂಡಿ ಸಮಸ್ಯೇನೇ ಅಲ್ಲ ಅನ್ನೋದು ನಿಲ್ಲಿಸಿ, ಜನರ ಸಮಸ್ಯೆಗೆ ಸ್ಪಂದಿಸಿ… ಚುನಾವಣೆ ಹತ್ತಿರದಲ್ಲಿದೆ ಅನ್ನೋದನ್ನಾದ್ರೂ ಗಮನದಲ್ಲಿಟ್ಕೊಂಡು ಪಾಟ್ ಹೋಲ್ ಮುಕ್ತ ಬೆಂಗಳೂರನ್ನಾಗಿಸಿ…

Show More

Related Articles

Leave a Reply

Your email address will not be published. Required fields are marked *

Close