ಏನ್ ಸುದ್ದಿ?

ನಮ್ಮ ಬೆಂಗಳೂರು ಹಾಗೂ ಕಿತ್ತೋದ ರಸ್ತೆಗಳು-ಇನ್ನೂ ಎಷ್ಟು ದಿನ ಯಾಮಾರಿಸ್ತೀರಿ..?

ಮಳೆ ನಿಂತು ಹೋದ ಮೇಲೆ…! ಏನ್ ಕರ್ಮ ಗುರೂ, ಯಾವನಾದ್ರೂ ಬೆಂಗಳೂರಿನ ರಸ್ತೆಗಳಲ್ಲಿ ನೆಮ್ಮದಿಯಾಗಿ ಓಡಾಡೋಕೆ ಸಾಧ್ಯ ಇದಿಯಾ..? ರಸ್ತೇಲಿ ಗುಂಡಿ ಇದಿಯೋ, ಗುಂಡೀಲಿ ರಸ್ತೆ ಇದಿಯೋ ಅನ್ನೋದೇ ಗೊತ್ತಾಗ್ತಿಲ್ಲ..! ಬೈಕು ಕಾರಲ್ಲಿ ರಸ್ತೆ ಮೇಲೆ ಓಡಾಡೋದು ಸೈಡಿಗಿಡಿ, ರಸ್ತೆ ಮೇಲೆ ನಡ್ಕೊಂಡು ಹೋಗೋಕೆ ಹೇಳಿದ್ರೂ ಅದು ಕಷ್ಟ ಇದೆ..!

ಒಂದು ಮಹಾನಗರ ಅಂದಮೇಲೆ ಅಲ್ಲಿ ಕೆಲವು ಕನಿಷ್ಟಾತಿ ಕನಿಷ್ಟ ನಿರೀಕ್ಷೆಗಳಿರುತ್ತೆ. ನೀರು ನಲ್ಲೀಲಿ ಬರಲಿಲ್ಲ ಅಂದ್ರೆ 20 ಲೀಟರ್ ನೀರಿನ ಟ್ಯಾಂಕ್ ತರಿಸ್ಕೊಳೋಣ ಅನ್ಕೊಳಿ. ಕರೆಂಟ್ ಹೋದ್ರೆ ಯುಪಿಎಸ್ ಅಥವಾ ಮೇಣದ ಬತ್ತಿ ಹಚ್ಚಿಕೊಳ್ತೀವಿ ಅನ್ಕೊಳಿ. ಆದ್ರೆ ಈ ರಸ್ತೆ ಸರಿ ಇಲ್ಲ ಅಂದ್ರೆ ಹೆಲಿಕಾಪ್ಟರ್‌ನಲ್ಲಿ ಓಡಾಡೋಕಾಗುತ್ತಾ.? ಹಿಂದೆಂದೂ ಕಾಣದ ರೀತಿಯಲ್ಲಿ ಬೆಂಗಳೂರಿನ ರಸ್ತೆಗಳು ಕುಲಗೆಟ್ಟು ಹೋಗಿವೆ..! ರಸ್ತೆಯಲ್ಲಿ ಹೋಗ್ತಿದ್ರೆ ‘ರೋಲರ್ ಕೋಸ್ಟರ್’ ಅನುಭವ ಕೊಡೋಕೆ ನಮ್ಮ ರಸ್ತೆಗಳಿಗೆ ಮಾತ್ರ ಸಾಧ್ಯವೇನೋ..!


ಯಾಕೆ ಈಗ ಈ ವಿಷಯ ಅಂದ್ರೆ, ನಿನ್ನೆ ನಡೆದ ಅಪಘಾತವೊಂದರಲ್ಲಿ ವೃದ್ಧ ದಂಪತಿ. ರಸ್ತೆಯ ಮೇಲೆದ್ದ ಯಮಸ್ವರೂಪಿ ಗುಂಡಿ ತಪ್ಪಿಸಲು ಹೋಗಿ, ಕೆಳಗೆ ಬಿದ್ದು ಅವರ ಮೇಲೆ ಬಸ್ ಹತ್ತಿ ಇಬ್ಬರೂ ಸ್ಥಳದಲ್ಲೇ ಸಾವನ್ಬಪ್ಪಿದ್ದಾರೆ.‌ಈ ಘಟನೆ ನಡೆದಾದ ಮೇಲೆ ಮೇಯರ್ ಬಂದು ಗುಂಡಿ ಮುಚ್ಚಿಸಿದ್ದಾರೆ..! ಎಲ್ಲಾ ಗುಂಡಿ ಮುಚ್ಚೋಕೆ ಇನ್ನೂ ತುಂಬಾ ಜನ ಸಾಯ್ಬೇಕು ಅಲ್ವಾ ಮೇಯರ್ ಸಾರ್..?
ಹೊಸ ಮೇಯರ್ ಬರ್ತಿದ್ದ ಹಾಗೆ ಟ್ರಾಫಿಕ್ ಎಷ್ಟೇ ಇದ್ರೂ ರಸ್ತೆ ಮಧ್ಯದಲ್ಲೇ ಪಾಟ್ ಹೋಲ್ ಮುಚ್ಚೋ ಗಾಡಿ ನಿಲ್ಲುಸ್ಕೊಂಡು ತರಾತುರಿಯಲ್ಲಿ ಗುಂಡಿ ಮುಚ್ತಾ ಇದ್ದಾರೆ.


ಈ ತೇಪೆ ಹಾಕೋ ಕೆಲಸ ಎಲೆಕ್ಷನ್ ಹತ್ತಿರ ಬರ್ತಿದ್ದ ಹಾಗೆ ಶುರು ಮಾಡ್ತೀರಿ. ಅದು ರಿಸಲ್ಟ್ ಬರೋದ್ರೊಳಗೆ ಕಿತ್ತು ಹೋಗಿರುತ್ತೆ..! ಕಾಮಗಾರಿ ಕೊಟ್ಟವರನ್ನು ಕರೆದು ಕ್ಯಾಕರಿಸೋಕೆ ಏನು ಸಮಸ್ಯೆ..? ನೀವುವಾವರಿಂದ ತಾವ ಕಮಿಷನ್ ಸಹ ಹೊಡೆದಿಲ್ಲ ಅಂತಾದ್ರೆ ಭಯ ಯಾಕೆ.? ಕರೆದು ಕೇಳಿ, ‘ಯಾಕಪ್ಪಾ ರಸ್ತೆ ಕಿತ್ತೋಗಿದೆ’ ಅಂತ..!


ಸಾಕು.. ಸಹಿಸಿಕೊಂಡಿದ್ದು…! ತೆರಿಗೆ ಕಟ್ಟಿಸಿಕೊಳ್ಳೋಕೆ ಮಾತ್ರ ಬೆನ್ನು ಬೀಳೋ ನೀವುಗಳು, ರಸ್ತೆ ರಿಪೇರಿಗೂ ಅಷ್ಟೇ ಆಸಕ್ತಿ ತೋರಿಸಿ..! ಬೆಂಗಳೂರಿನ ಮರ್ಯಾದೆ ಮೂರು ಕಾಸಿಗೆ ಹರಾಜು ಹಾಕಬೇಡಿ. ಗುಂಡಿ ಮುಚ್ಚೋಕೆ ದುಡ್ಡು ಅಲ್ಲಿಂದ ಬರಬೇಕು, ಇಲ್ಲಿಂದ ಬರಬೇಕು ಅನ್ನೋ ‘ಕಿತ್ತೋದ ಡೈಲಾಗ್ ನಿಲ್ಲಿಸಿ’… ರಸ್ತೆಗಳಲ್ಲಿ ಗಾಡಿಗಳು ಕೆಟ್ಟು ನಿಲ್ತಿವೆ. ವೀಲ್ ಅಲೈನ್‌ಮೆಂಟಿನವರಿಗೆ ಬಿಸ್ನೆಸ್ ಜೋರಾಗಿದೆ, ಗರ್ಭಿಣಿ ಸ್ತ್ರೀಯರು, ವೃದ್ಧರು ಬೆಂಗಳೂರಿನ ರಸ್ತೆಯಲ್ಲಿ ಓಡಾಡೋಕೆ ಯೋಚಿಸ್ತಿದ್ದಾರೆ…! ಮೊದಲು ರಸ್ತೆ ಗುಂಡಿ ಮುಚ್ಚಿ… ಬಿಬಿಎಂಪಿ ಪ್ರಣಾಳಿಕೆಯಲ್ಲಿ ಹೇಳಿದ್ದೆಲ್ಲಾ ಮಾಡಿದೀವಿ ಅಂತ ಪತ್ರಿಕೆಗಳಲ್ಲಿ ಜಾಹೀರಾತು ಕೊಡ್ತೀರಲ್ಲ, ಅದನ್ನು ಬೆಂಗಳೂರಿನ ಜನ ನೋಡಿ ಮನಸಲ್ಲೇ ಮಕ್ಕುಗೀತಾರೆ ಅನ್ಸಲ್ವಾ..? ಯಾಮಾರಿಸಿದ್ದು ಸಾಕು, ಗುಂಡಿ ಮುಚ್ಚಿ… ಆಮೇಲೆ ಅದರ ಪಕ್ಕದಲ್ಲೇ ನಿಮ್ಮ ಕಟೌಟ್ ಹಾಕಿಸ್ಕೊಳಿ, ಯಾರ್ ಬೇಡ ಅಂದ್ರು..?

Show More

Related Articles

Leave a Reply

Your email address will not be published. Required fields are marked *

Close