ಸಿನಿ ಸುದ್ದಿ

ಪ್ರಥಮ್-ಕೀರ್ತಿ ಹೊಸ ಹಾಡು ನೋಡಿದ್ರಾ…?

ಬಿಗ್ ಬಾಸ್ ವಿನ್ನರ್ ಹಾಗೂ ರನ್ನರ್ ಅಪ್ ಇಬ್ರೂ ಸಿನಿಮಾವೊಂದರ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಜೊತೆಗೆ ನಿರ್ದೇಶಕ ಓಂ ಪ್ರಕಾಶ್ ರಾವ್, ಇಂದ್ರಜಿತ್ ಲಂಕೇಶ್ ಸಹ ಇದೇ ಹಾಡಿನಲ್ಲಿದ್ದಾರೆ. ಅಂದಹಾಗೆ ಈ ಹಾಡು `ರಾಜು ಕನ್ನಡ ಮೀಡಿಯಂ’ ಸಿನಿಮಾದ್ದು.

ಗುರುನಂದನ್ ಅಭಿನಯಿಸಿ, ನರೇಶ್ ನಿರ್ದೇಶನ ಮಾಡ್ತಿರೋ `ರಾಜು ಕನ್ನಡ ಮೀಡಿಯಂ’ ಹಲವು ಕಾರಣಗಳಿಂದ ಸುದ್ದಿ ಮಾಡ್ತಿದೆ. ಇತ್ತೀಚೆಗೆ ಅಭಿನಯ ಚ್ಕ್ರವರ್ತಿ ಸುದೀಪ್ ಅವರು ಸಹ ಈ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡ್ತಿರೋ ಸುದ್ದಿ ಸೌಂಡು ಮಾಡಿತ್ತು. ಒಂದಾದ ಮೇಲೊಂದು ಹೊಸಹೊಸ ವಿಚಾರ ಹೊರಗೆ ಹಾಕ್ತಿರೋ ಸಿನಿಮಾ ತಂಡ, ಈಗ ಸಿನಿಮಾದ ಹಾಡೊಂದರ ವೀಡಿಯೋ ಸಾಂಗೊಂದನ್ನು ಯೂಟ್ಯೂಬಲ್ಲಿ ರಿಲೀಸ್ ಮಾಡಿದೆ.

ಆ ಹಾಡಿನಲ್ಲಿ ಬಿಗ್ ಪಾಸ್ ವಿನ್ನರ್ ಪ್ರಥಮ್, ಕಿರಿಕ್ ಕೀರ್ತಿ, ಓಂ ಪ್ರಕಾಶ್ ರಾವ್, ಇಂದ್ರಜಿತ್ ಲಂಕೇಶ್ ,ಸುಗುಣ ಸೇರಿದಂತೆ ಹಲವರು ವಿಭಿನ್ನ ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದಾರೆ. `ಸೀದಾಸಾದ ಇದ್ದ ಹಳ್ಳೀ ಹೈದ ಬಂದಾ ಬೆಂಗಳೂರಿಗೆ’ ಅನ್ನೋ ಹಾಡು ಸಖತ್ತಾಗಿದೆ.. ನೀವೂ ನೋಡಿ…

Show More

Related Articles

Leave a Reply

Your email address will not be published. Required fields are marked *

Close