ವೀಡಿಯೋ ಸುದ್ದಿ

ನಿಮಗೂ ಹೀಗೆ ಬದುಕಬೇಕು ಅನ್ಸಿದ್ರೆ ಸಾರ್ಥಕ…

ನೀವು ನೂರಾರು ಯೂಟ್ಯೂಬ್ ವೀಡಿಯೋಗಳನ್ನು ನೋಡಿದ್ದೀರಿ.. ಸಾಕಷ್ಟು ವೀಡಿಯೋಗಳು ನಿಮ್ಮ ಮನಮುಟ್ಟಿರುತ್ತೆ… ಹಾಗೆಯೇ ನೋಡಿದ ನಂತರ ಕಣ್ಣಂಚಲ್ಲಿ ನೀರು ತರಿಸೋ ಒಂದು ವೀಡಿಯೋ ಇದು. ಅದೆಷ್ಟು ಬಾರಿ‌ ನೋಡಿದ್ರೂ ಮನಸ್ಸಿಗೆ ಮುದ ನೀಡುತ್ತೆ‌… ನಿಜ ಅಲ್ವಾ ಅನ್ಸುತ್ತೆ..!


ಮನುಷ್ಯ ತಾನು ಬದುಕಿ, ಇತರರನ್ನು ಬದುಕಿಸೋ ನೂರಾರು ನಿದರ್ಶನಗಳಿವೆ. ತನಗೆ ಅದೆಷ್ಟೇ ನೋವುಗಳಿದ್ರೂ ಜಗತ್ತಿನಲ್ಲಿ ಕಷ್ಟದಲ್ಲಿದ್ದೋರಿಗೆ ಏನಾದ್ರೂ ಸಹಾಯ ಮಾಡಬೇಕು ಅಂತ ಅನ್ಕೊಳೋರು ತುಂಬಾ ಕಮ್ಮಿ… ಅಂತವರಿಗೆ ಅಂತಲೇ ಈ ವೀಡಿಯೋ ಇರೋದು… ಕೊರಿಯಾದ ಇನ್ಷೂರೆನ್ಸ್ ಕಂಪನಿಯೊಂದು ಈ ವೀಡಿಯೋ ಮಾಡಿದೆ. ಆದ್ರೆ ಅದನ್ನು ಬರಿಯ ಜಾಹೀರಾತು ಅನ್ನೋ ಹಾಗೆ ಮಾಡದೆ ಒಂದು ಮಾನವೀಯತೆ ಮೆರೆಯೋ ವೀಡಿಯೋ ರೀತಿ ಮಾಡಿದೆ… ಭಾವನೆಗಳಿರೋ ಪ್ರತಿ ಹೃದಯವೂ ಇದನ್ನು ನೋಡಿ ಕಣ್ಣೀರಾಗ್ತಾರೆ.. ಕನಿಷ್ಟ ಹತ್ತು ಪರ್ಸೆಂಟ್ ಜನ ಹೀಗಿರಬೇಕು ಅಂತ ಅನ್ಕೊಂಡ್ರೆ ಅವರು ಈ ವೀಡಿಯೋ ಮಾಡಿರೋದಕ್ಕೆ ಸಾರ್ಥಕ…

ನಾನು, ನನ್ನದು, ನಾನು ಮಾತ್ರ ಅಂತ ಬದುಕೋರ ನಡುವೆ ಸಮಾಜದ ಒಂದು ವರ್ಗದ ಜನರಿಗೆ ಸಣ್ಣ ಮಟ್ಟದಲ್ಲಿ ಆಸರೆಯಾಗೋದು ಅವರ ಬದುಕನ್ನೇ ಬದಲಿಸಬಲ್ಲದು… ನೀವು ಹೀರೋ ಆಗೋಕೆ ನೂರು ದಾರಿ ಇರಬಹುದು, ಆದ್ರೆ ಈ ರೀತಿ ಹೀರೋ ಆಗೋದ್ರಲ್ಲಿ ಸಾರ್ಥಕತೆಯಿದೆ… ನಿಮ್ಮಲ್ಲಿ ಸಾಕಷ್ಟು ಜನ ಈ ವೀಡಿಯೋ ಈ ಹಿಂದೆ ಖಂಡಿತ ನೋಡಿರ್ತೀರಿ. ಆದ್ರೂ ಮತ್ತೊಮ್ಮೆ ನೋಡಿ… ಖುಷಿ ಕೊಡುತ್ತೆ.. ಹೃದಯ ತುಂಬಿ ಬರುತ್ತೆ…

 

 

 

Show More

Leave a Reply

Your email address will not be published. Required fields are marked *

Close