ವೀಡಿಯೋ ಸುದ್ದಿ

ರೆಹಮಾನ್ ನಿಮಗೊಂದು ಮೆಸೇಜ್ ಕೊಡ್ತಿದ್ದಾರೆ… ತಪ್ಪದೇ ನೋಡಿ…

ರೆಹಮಾನ್ ಹಾಸನ್… ಟಿವಿ9 ನೋಡಿದವರಿಗೆಲ್ಲಾ ಇವರ ಪರಿಚಯ ಇದೆ. ಟಿವಿ೯ನಲ್ಲಿ ನೋಡಿಲ್ಲ ಅಂದ್ರೂ ಬಿಗ್ ಬಾಸ್ ಮೂಲಕವಂತೂ ಇವರು ಮನೆಮಾತು. ತಮ್ಮ ಅದ್ಭುತ ಕನ್ನಡ ಉಚ್ಛಾರಣೆಯಿಂದಲೇ ಕನ್ನಡಿಗರಿಗೆ ಹತ್ತಿರವಾದವರು ರೆಹಮಾನ್. ಈಗ ರೆಹಮಾನ್ ಒಂದೊಳ್ಳೆ ವಿಷಯ ಇಟ್ಕೊಂಡು ನಿಮ್ಮ ಮುಂದೆ ಬಂದಿದ್ದಾರೆ. ಒಂದೊಳ್ಳೇ ಸಂದೇಶ ಕೊಟ್ಟಿದ್ದಾರೆ…

ಇವತ್ತು ದೇಶದ ಮೂಲೆಮೂಲೆಯ ಜನ `ಡೆಂಗ್ಯೂ’ ಎಂಬ ರೋಗದಿಂದಾಗಿ ತತ್ತರಿಸಿದ್ದಾರೆ. ಸಾವಿರಾರು ಜನ ಈ ಖಾಯಿಲೆಯಿಂದಾಗಿ ಪ್ರಾಣ ಬಿಟ್ಟಿದ್ದಾರೆ. ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಈ ರೋಗಕ್ಕೆ ಎಲ್ಲ ವರ್ಗದವರೂ ತುತ್ತಾಗಿದ್ದಾರೆ. ಆದ್ರೆ, ಇದು ಮಾರಣಾಂತಿಕವೇನಲ್ಲ, ಸರಿಯಾದ ಸಮಯಕ್ಕೆ ಸರಿಯಾದ ಚಿಕಿತ್ಸೆ ಪಡೆದರೆ ಡೆಂಗ್ಯೂ ವಿರುದ್ಧ ಗೆಲ್ಲಬಹುದು. ಆದ್ರೆ ಅದರ ಬಗ್ಗೆ ಸರಿಯಾಗಿ ಗಮನ ತೆಗೆದುಕೊಳ್ಳದೇ ಯಾಮಾರಿದ್ರೆ ಸಾವು ಕಟ್ಟಿಟ್ಟ ಬುತ್ತಿ… ಇದನ್ನೇ ವಿಷಯವಾಗಿಟ್ಟುಕೊಂಡು ರೆಹಮಾನ್ ಒಂದು ಅದ್ಭುತ ವೀಡಿಯೋ ಮಾಡಿದ್ದಾರೆ, ಕೊನೆಯಲ್ಲಿ ಅವರೂ ಒಂದು ಸಂದೇಶ ಕೊಟ್ಟಿದ್ದಾರೆ. ಸಮಾಜದ ಹಿತಕ್ಕಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ಮಾಡಿರೋ ಈ ವೀಡಿಯೋ ನೀವು ನೋಡಲೇಬೇಕು… ಒಂದಷ್ಟು ಜನಕ್ಕೆ ತಲುಪುಸಲೇಬೇಕು… ಇದು `ಲವ್ ಬೈಟ್’

ರೆಹಮಾನ್ ಅವರ ಈ ಸಮಾಜಮುಖಿ ಪ್ರಯತ್ನಕ್ಕೆ ತುಂಬುಹೃದಯದ ಧನ್ಯವಾದಗಳು…

 

 

Show More

Leave a Reply

Your email address will not be published. Required fields are marked *

Close