ಐತ್ ಲಗಾ

ಸಲ್ಮಾನ್ ಖಾನ್ ವಿರುದ್ದ ಎಫ್.ಐ.ಆರ್ ದಾಖಲಿಸಿದ ಬಿಗ್ ಬಾಸ್ ಸ್ಪರ್ಧಿ..!

ಹೌದು… ಸಲ್ಮಾನ್ ಖಾನ್ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ. ಮಹಾರಾಷ್ಟ್ರದ ಲೋನಾವಾಲದಲ್ಲಿ ಕೇಸ್ ದಾಖಲಾಗಿದೆ. ಅಷ್ಟಕ್ಕೂ ಕಂಪ್ಲೇಂಟ್ ಕೊಟ್ಟಿರೋದು ಯಾರು ಗೊತ್ತಾ..? ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿ ಜುಬೇರ್ ಖಾನ್..!

ಜುಬೇರ್ ಖಾನ್, ಈ ಸಲದ ಹಿಂದಿ ಬಿಗ್ ಬಾಸ್ ಸ್ಪರ್ಧಿಯಾಗಿದ್ರು. ಮನೆಗೆ ಬಂದಾಗಿನಿಂದ ಒಂದಿಲ್ಲೊಂದು ರೀತಿಯಲ್ಲಿ ಮನೆಯ ಉಳಿದ ಸ್ಪರ್ಧಿಗಳಿಗೆ ಟಾರ್ಚರ್ ಕೊಡ್ತಿದ್ರು. ಅತ್ಯಂತ ಅವಾಚ್ಯ ಶಬ್ದಗಳಿಂದ ಎಲ್ಲರನ್ನು ನಿಂದಿಸ್ತಾ ಇದ್ರು. ನಾನು ದಾವೂದ್ ಇಬ್ರಾಹಿಂ ಸಂಬಂಧಿ ಅಂತ ಸುಳ್ಳು ಹೇಳಿಕೊಂಡಿದ್ರು. ಇದನ್ನು ಗಮನಿಸಿದ ಸಲ್ಮಾನ್ ಖಾನ್ ಮೊದಲ ವಾರಾಂತ್ಯದಲ್ಲಿ ಜುಬೇರ್ ಖಾನ್ ಅವರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ರು. ಇದರಿಂದ ಸಿಕ್ಕಾಪಟ್ಟೆ ಫೀಲ್ ಆದ ಜುಬೇರ್ ಖಾನ್ ಇರೋ ಬರೋ ಮಾತ್ರೆ ಎಲ್ಲಾ ತಿಂದು ಆತ್ಮಹತ್ಯೆಗೆ ಪ್ರಯತ್ನಿಸಿದ್ರು. ಪರಿಣಾಮವಾಗಿ ಮನೆಯಿಂದ ಹೊರಹೋಗಲು ಹೆಚ್ಚು ಓಟು ಪಡೆದು ಜುಬೇರ್ ಮನೆಯಿಂದ ಹೊರಬಿದ್ರು. ಆದ್ರೆ ಸಲ್ಮಾನ್ ಖಾನ್ ಈ ಹೊತ್ತಿಗಾಗಲೇ ಪಿತ್ತ ನೆತ್ತಿಗೇರಿಸಿಕೊಂಡಿದ್ರು. `ನಿನ್ನ ನೀನು ಏನ್ ಅನ್ಕೊಂಡಿದಿಯ, ನಿನಗೆ ಒಂದು ಕಾಣಿಸ್ಲಿಲ್ಲ ಅಂದ್ರೆ  ನಾನು ಸಲ್ಮಾನ್ ಖಾನೇ ಅಲ್ಲ’ ಅಂತ ವಾರ್ನಿಂಗ್ ಕೊಟ್ಟಿದ್ರು.

ಮನೆಯಿಂದ ಹೊರಗೆ ಬಂದ ಜುಬೇರ್ ಸಲ್ಮಾನ್ ವಿರುದ್ಧ ಮಾಧ್ಯಮಗಳಲ್ಲಿ ಬಾಯಿಗೆ ಬಂದ ಹಾಗೆ ಮಾತಾಡಿದ್ದಾರೆ. ಅಲ್ಲದೇ, ಸಲ್ಮಾನ್ ಖಾನ್ ಜನ್ಮ ಜಾಲಾಡಿಸೋದಾಗಿ ಹೇಳಿಕೆ ಕೊಟ್ಟಿದ್ದಾರೆ. ನೀನು ಹೆದರಿಸಿದ ಕೂಡಲೇ ಹೆದರೋಕೆ ನಾನು ವಿವೇಕ್ ಒಬೆರಾಯ್ ಅಲ್ಲ ಅಂತ ಕಾಲೆಳೆದಿದ್ದಾರೆ. ಇದೆಲ್ಲಾ ಆದಮೇಲೆ ಪೊಲೀಸ್ ಠಾಣೆಗೆ ಹೋಗಿ `ಸಲ್ಮಾನ್ ನಂಗೆ ಜೀವ ಬೆದರಿಕೆ ಹಾಕಿದ್ದಾನೆ’ ಅಂತ ಎಫ್.ಐ.ಆರ್ ದಾಖಲಿಸಿದ್ದಾರೆ. ಇದೀಗ ಕಲರ್ಸ್ ಹಾಗೂ ಸಲ್ಮಾನ್ ಇಬ್ಬರಿಗೂ ತಲೆನೋವಾಗಿ ಪರಿಣಮಿಸಿರೋದಂತೂ ಸತ್ಯ…!

Show More

Related Articles

Leave a Reply

Your email address will not be published. Required fields are marked *

Close