ಏನ್ ಸುದ್ದಿ?

ಸೆಲ್ಫಿ ಮತ್ತು ಸಾವು..!

ಸೆಲ್ಫಿ… ಅದೊಂಥರಾ ಜೀವನದ ಭಾಗ. ಸ್ಮಾರ್ಟ್ ಫೋನ್ ಬಳಸೋ ಪ್ರತಿಯೊಬ್ಬರೂ ಕನಿಷ್ಟ ಒಮ್ಮೆಯಾದ್ರೂ ಜೀವನದಲ್ಲಿ ಸೆಲ್ಫಿ ತೆಗೆದುಕೊಂಡಿರ್ತಾರೆ. ಹೊಸಬರು ಸಿಕ್ಕಾಗ, ಗೆಳೆಯರ ಜೊತೆಯಲ್ಲಿದ್ದಾಗ, ಫ್ಯಾಮಿಲಿ ಕಾರ್ಯಕ್ರಮದಲ್ಲಿ, ಸೆಲೆಬ್ರಿಟಿ ಸಿಕ್ಕಾಗ, ಹೀಗೆ ಎಲ್ಲೆಲ್ಲೂ ಸೆಲ್ಫಿ.. ಇವೆಲ್ಲಾ ಓಕೆ ಆದ್ರೆ ಕೆಲವು ಸಾವಿನ ಸೆಲ್ಫಿಗಳಿವೆ.. ಅದರ ಬಗ್ಗೆಯೇ ಈಗ ಚರ್ಚೆ ನಡೀತಿರೋದು…


ನಿನ್ನೆ ಬೆಂಗಳೂರಿನಲ್ಲಿ ನಡೆದ ಘಟನೆಯೊಂದು ನಿಮ್ಮ ಗಮನಕ್ಕೆ ಬಂದಿರಬೇಕು. ಪಿಯು ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಹೋಗುತ್ತಿರುವುದು ಸೆಲ್ಫಿಯಲ್ಲಿ ಕಾಣಿಸಿತ್ತು. ಸೆಲ್ಫಿ ತೆಗೆಯುವ ಸಂಭ್ರಮದಲ್ಲಿ ತಮ್ಮ ಗೆಳೆಯ ಮುಳುಗಿ ಸಾವಿಗಿಡಾಗ್ತಿರೋದೂ ಅವರ ಗಮನಕ್ಕೆ ಬರಲೇ ಇಲ್ಲ…! ಆಮೇಲೆ ಫೋಟೋ ನೋಡಿದಾಗ ಆ ಗೆಳೆಯ‌ ಮುಳುಗಿ ಹೋಗುತ್ತಿರುವುದು ಸೆಲ್ಫಿಯಲ್ಲಿ ಕಂಡು ಗಾಬರಿಯಾಗಿದ್ದಾರೆ. ಅಷ್ಟು ಹೊತ್ತಿಗಾಗಲೇ ಅವನ ಪ್ರಾಣಪಕ್ಷಿ ಹಾರಿಹೋಗಿತ್ತು..! ಇದು ಅಕ್ಷರಶಃ ಸೆಲ್ಫಿ ಸಾವು…!


ಇದೊಂದೇ ಸಂದರ್ಭ ಅಲ್ಲ, ಹೀಗೆ ಸೆಲ್ಫಿಯಿಂದಾಗಿ ಸಾವಿಗೀಡಾದ ಸಾವಿರಾರು ಘಟನೆಗಳು ವಿಶ್ವದ ಮೂಲೆಮೂಲೆಯಲ್ಲಿ ನಡೆದಿವೆ. ಅಪಾಯಕಾರಿ ಸ್ಥಳಗಳಲ್ಲಿ ತೆಗೆಯಲು ಹೋಗಿ ಮನೆಯಲ್ಲಿ ಫೋಟೋ ಫ್ರೇಂ ಹಾಕಿಸಿಕೊಂಡವರು ಅದೆಷ್ಟೋ… 2015ರ ಸಮೀಕ್ಷೆಯೊಂದರ ಪ್ರಕಾರ ವರ್ಷದಲ್ಲಿ 3-4% ಜನರ ಸಾವು ಈ ಸೆಲ್ಫಿ ಸಹವಾಸದಿಂದ ಆಗ್ತಿದೆಯಂತೆ..!

ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಸೆಲ್ಫಿ ತೆಗೆಯೋಕೆ ಹೋಗಿ ಅಪಘಾತಕ್ಕೀಡಾಗಿ ಸಾವನ್ನಪ್ಪೋದು, ರಸ್ತೆ ದಾಟುವಾಗ, ಯಾವುದಾದ್ರೂ ಅಪಾಯ ಎದುರಾದಾಗ ಅದರೆದುರು ಸೆಲ್ಫಿ ತೆಗೆಯಲು ಹೋಗಿ ಸಾವಿಗೀಡಾದವರು ಅದೆಷ್ಟೋ ಜನ..!
ಬೇಡ ಈ ತರಹದ ಸೆಲ್ಫಿ ಹುಚ್ಚು ಒಳ್ಳೇದಲ್ಲ. ಒಂದು ಫೋಟೋ ತೆಗೆಯೋಕೆ ಹೋಗಿ ನಿಮ್ಮ ಮನೆಯ ಫೋಟೋ ಫ್ರೇಂ ಆಗಬೇಡಿ. ವಾಹನ ಚಲಾಯಿಸುವಾಗ ಫೋಟೋ ತೆಗೆದುಕೊಳ್ಳೋದು,ವಿಡಿಯೋ ಕಾಲ್ ಮಾಡೋದು, ಇದೆಲ್ಲಾ ಪ್ರಯತ್ನಿಸಬೇಡಿ.. ಜಲಪಾತಗಳು, ಪ್ರಪಾತಗಳು, ಬೆಟ್ಟದಲ್ಲಿ, ರಸ್ತೆಗಳಲ್ಲಿ ಯಾವ ಕಾರಣಕ್ಕೂ ಸೆಲ್ಫಿ ಅಂತ ನಗ್ತಾ ಮುಂದಿನ ಕ್ಯಾಮರಾ ಆನ್ ಮಾಡಬೇಡಿ. ಆ ಕ್ಯಾಮರಾ ನಿಮ್ಮ ಸಾವನ್ನೂ ಸೆರೆಹಿಡಿಯಬಹುದು..!


ಸೆಲ್ಫಿ ನಿಮ್ಮ ಸಾವಿನ ಅಲಾರಂ ಆಗದಿರಲಿ.. ಸೆಲ್ಫಿ ಸಂತೋಷವನ್ನು ಸೆರೆಹಿಡಿಯುವ ಕ್ಯಾಮರಾ ಮಾತ್ರ ಆಗಿರಲಿ…

Show More

Related Articles

2 thoughts on “ಸೆಲ್ಫಿ ಮತ್ತು ಸಾವು..!”

  1. ಸೆಲ್ಫಿ ಕ್ಯಾಮೆರಾ ಬ್ಯಾನ್ ಮಾಡ್ಬೇಕು….ಅಲ್ವಾ

Leave a Reply

Your email address will not be published. Required fields are marked *

Close