ಏನ್ ಸುದ್ದಿ?

ದೇವರ ಮುಂದೆ ಸಿಗರೇಟ್ ಸೇದ್ಬೇಡಿ ಅಂದಿದ್ದಕ್ಕೆ ಕೊಂದೇಬಿಟ್ರು..!

ಅವರು ಹೇಳಿದ್ದಿಷ್ಟೇ..` ದೇವರ ಮೆರವಣಿಗೆ ನಡೀತಿದೆ, ಅದರ ಮುಂದೇನೇ ಸಿಗರೇಟ್ ಸೇದ್ತಾ ಇದ್ದೀರಲ್ಲ, ಮೊದಲು ಇಲ್ಲಿಂದ ಜಾಗ ಖಾಲಿ ಮಾಡಿ’..! ಅಷ್ಟೇ… ಅದಾಗಿ ಕೆಲವು ನಿಮಿಷಗಳಲ್ಲಿ ಅವನನ್ನು ಬರ್ಬರವಾಗಿ ಕೊಂದೇಬಿಟ್ರು..!

ಇದು ನಡೆದಿರೋದು ನಮ್ಮ ಬೆಂಗಳೂರಿನಲ್ಲಿ..! ಮೊನ್ನೆ ರಾತ್ರಿ ಬೆಂಗಳೂರಿನಲ್ಲಿ ಸಾಕಷ್ಟು ಕಡೆ ಊರ ದೇವಿಯ ಮೆರವಣಿಗೆ ನಡೆಯುತ್ತಿತ್ತು. ಹಾಗೆಯೇ ಅಶೋಕ ನಗರದ ಸಮೀಪದಲ್ಲಿ ಊರ ದೇವಿಯ ಮೆರವಣಿಗೆ ಸಾಗ್ತಾ ಇತ್ತು. ತಮಟೆ, ಪಟಾಕಿ ಸದ್ದು ಜೋರಾಗಿ ಕೇಳುತ್ತಿದ್ದಂತೆಯೇ ಮನೆಯಲ್ಲಿ ಗಾಢ ನಿದ್ರೆಯಲ್ಲಿದ್ದ ಹರೀಶ್ ಎಂಬ ಯುವಕನಿಗೆ ಎಚ್ಚರವಾಗಿದೆ. 32 ವರ್ಷ ವಯಸ್ಸಿನ ಹರೀಶ್ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದು, ಕೆಲಸ ಮುಗಿಸಿ ಬಂದು ನಿದ್ದೆಯಲ್ಲಿದ್ರು. ಮನೆಯ ಎದುರು ದೇವತೆಯ ಮೆರವಣಿಗೆ ಬರ್ತಿದ್ದ ಹಾಗೇ ಮನೆಯ ಬಾಲ್ಕನಿಗೆ ಬಂದು ಮೆರವಣಿಗೆ ನೋಡಿದ್ದಾರೆ. ಅದೇ ಸಂದರ್ಭದಲ್ಲಿ ಮೆರವಣಿಗೆಯ ಎದುರಲ್ಲೇ ನಾಲ್ಕು ಜನ ಗುಂಪೊಂದು ಸಿಗರೇಟ್ ಸೇದಿಕೊಂಡು ಗಲಾಟೆ ಮಾಡುತ್ತಿದ್ರು. ಇದನ್ನು ನೋಡಿದ ಹರೀಶ್ `ನಿಮಗೆ ಗೊತ್ತಾಗಲ್ವಾ..? ಸಿಗರೇಟ್ ಆರಿಸಿ ಇಲ್ಲಿಂದ ಹೊರಡಿ’ ಅಂತ ಹೇಳಿದ್ದಾರೆ. ಇಷ್ಟಕ್ಕೇ ಕುಪಿತಗೊಂಡ ಆ ನಾಲ್ಕು ಜನ ಹರೀಶ್ ಅವರ ಜೊತೆ ಜಗಳಕ್ಕೆ ನಿಂತಿದ್ದಾರೆ. ಜಗಳ ಜೋರಾದಾಗ ಹರೀಶ್ ಬಾಲ್ಕನಿಯಿಂದ ಕೆಳಗಿಳಿದು ಬಂದು ಮಾತಿಗೆ ಮಾತು ಬೆಳೆದಿದೆ. ಯಾವಾಗ ಜಗಳ ಜೋರಾಯ್ತೋ ಆ ನಾಲ್ಕು ಜನರ ಗುಂಪು ಹರಿತವಾದ ಆಯುಧಗಳಿಂದ ಹರೀಶ್ ಮೇಲೆ ಆಕ್ರಮಣ ಮಾಡಿದ್ದಾರೆ. ಮನೆಯ ಕೆಳಗಿದ್ದ ಸ್ವಿಮ್ಮಿಂಗ್ ಪೂಲ್ ಬಳಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಹರೀಶ್ ಅವರನ್ನು ಅವರ ತಾಯಿ ನೋಡಿ ಗಾಬರಿಗೊಂಡು ಹತ್ತಿರದ ಖಾಸಗಿ ಆಸ್ಪತ್ರೆಗೆ ಸೇರಿಸಿದ್ರೂ ಚಿಕಿತ್ಸೆ ಫಲಕಾರಿಯಾಗದೇ ಹರೀಶ್ ಸಾವನ್ನಪ್ಪಿದ್ದಾರೆ. ಪೊಲೀಸರು ಸದ್ಯ ಆ ನಾಲ್ಕು ಜನರ ಹುಡುಕಾಟದಲ್ಲಿದ್ದಾರೆ.

ಇಲ್ಲಿ ಹರೀಶ್ ಮಾಡಿದ್ದು ಸರಿ ಇರಬಹುದು. ಆದ್ರೆ ಕೆಲವರು ` ಅವರಿಗ್ಯಾಕೆ ಬೇಕಿತ್ತು’ ಅಂತಲೂ ಯೋಚಿಸಬಹುದು..! ಇಲ್ಲಿ ಗಮನಿಸಬೇಕಾದ ಅಂಶ ಎಂದರೆ, ಒಂದು ವಿಚಾರಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಕೊನೆಯಾಗಿರೋದು. ತನ್ನ ಮನರ್ಯ ಬಳಿ ಬಂದ ಮೆರವಣಿಗೆಯನ್ನು ನೋಡುವಾಗ ದೇವಿಯ ಎದುರಲ್ಲಿ ಯಾರೋ ಸಿಗರೇಟ್ ಸೇದುತ್ತಾ ನಿಂತಿದ್ರೆ ಯಾರಿಗಾದ್ರೂ ಕೋಪ ಅಥವಾ ಬೇಸರ ಆಗುತ್ತೆ..! ಅದನ್ನು ಅಹಜವಾಗಿಯೇ ಹರೀಶ್ ಪ್ರಶ್ನೆ ಮಾಡಿರಲೂಬಹುದು. ಅದಕ್ಕೆ ಸಿಕ್ಕ ಪ್ರತಿಫಲ ಕೊಲೆ ಅನ್ನೋದಾದ್ರೆ ಏನಾಗಿದೆ ಯುವಕರ ಮನಸ್ಥಿತಿಗೆ..? ಖಂಡಿತ ಆ ಕೊಲೆಗಡುಕರು ಪೊಲೀಸರ ಅತಿಥಿಗಳಾಗೇ ಆಗ್ತಾರೆ. ಆದ್ರೆ ಹೋದ ಹರೀಶ್ ಅವರ ಜೀವ ವಾಪಸ್ ಬರುತ್ತಾ.? ಇಂತಹ ಮನಸ್ಥಿತಿ ಬದಲಾಗದಿದ್ದರೆ, ಈ ವ್ಯಾಘ್ರ ಯುವಕರ ಗುಂಪು ಸಮಾಜಕ್ಕೆ ಮಾರಕವಾಗೋದ್ರಲ್ಲಿ ಅನುಮಾನವಿಲ್ಲ..! ಇಂತವರ ಹೆಡೆಮುರಿ ಕಟ್ಟುವ ಕೆಲಸ ಪೊಲೀಸರಿಂದ ಆಗಬೇಕಿದೆ..! ಹರೀಶ್ ಅವರ ಆತ್ಮಕ್ಕೆ ಶಾಂತಿ ಸಿಗಲಿ… ಅವರ ಕುಟುಂಬಕ್ಕೆ ಅವರ ಸಾವನ್ನು ಭರಿಸುವ ಶಕ್ತಿ ಆ `ಗ್ರಾಮ ದೇವತೆ’ ಕೊಡಲಿ…

News Source : The New Indian Express

Show More

Related Articles

Leave a Reply

Your email address will not be published. Required fields are marked *

Close