ಒಳ್ಳೆ ವಿಷ್ಯ

ನೀವು ಜೀವನದಲ್ಲಿ ಗೆಲ್ಲಬೇಕಾ..? ಹಾಗಾದ್ರೆ ನೀವು ಇದನ್ನು ಎದುರಿಸಲೇಬೇಕು..!

–ಕಿರಿಕ್ ಕೀರ್ತಿ
ಜೀವನದಲ್ಲಿ ಏನಾದ್ರೂ ಸಾಧಿಸಬೇಕು ಅನ್ನೋ ಹಠಕ್ಕೆ ಬಿದ್ದವನು ಈ ಮೂರು ಹಂತಗಳನ್ನು ದಾಟಲೇಬೇಕು..! ಅದೇ ಅನುಮಾನ, ಅವಮಾನ ಮತ್ತು ಸನ್ಮಾನ…


ಅವರನ್ನು ಶತ್ರುಗಳು ಅಂತ ಕರೀಬೇಕಾ? ನಮ್ಮ ಕಷ್ಟದ ದಿನಗಳನ್ನು ನೋಡದೇ ಮಾತಾಡುವವರು ಅನ್ಬೇಕಾ? ಇವನು ಉದ್ದಾರ ಆಗಬಾರದು ಅಂತ ಕಾಲೆಳೆಯೋಕೆ ನಿಂತವರು ಅನ್ಕೋಬೇಕಾ? ಇದಕ್ಕೆ ಉತ್ತರ ‘ಗೊತ್ತಿಲ್ಲ’..! ಆದ್ರೆ ಅಂಥವರಿಗೆ ಹೆದರಿ ಹಿಂದೆ ಸರಿದರೆ ನಾವು ಸೋತಹಾಗೆ. ಅವರಿಗೆ ಗುಟುರು ಹಾಕಿ ಉತ್ತರ ಕೊಟ್ಟರೆ ಮಾತ್ರ ನಾವು ಜೀವನದಲ್ಲಿ ಅನ್ಕೊಂಡಿದ್ದನ್ನು ಸಾಧಿಸಲು ಸಾಧ್ಯ. ಇಲ್ಲ ಅಂದ್ರೆ ನಾವು ಕಾಲೆಳೆಯುವವರ ಸಾಲಿನಲ್ಲಿ ಕಾಲ ಕೆಳಗೆ ಉಳಿಯಬೇಕಾಗುತ್ತೆ..


ಏನಿದು ಅನುಮಾನ, ಅವಮಾನ ಸನ್ಮಾನ ಅಂದ್ರಾ, ಹೇಳ್ತೀನಿ ಕೇಳಿ...
ನೀವು ಏನಾದ್ರೂ ಸಾಧಿಸಬೇಕು ಅಂತ ನಿರ್ಧಾರ ಮಾಡ್ತೀರಿ. ಕೆಲವು ಹಿತೈಷಿಗಳನ್ನು, ಗೆಳೆಯರನ್ನು ನಿಮ್ಮ ಯೋಚನೆ ಅಥವಾ ಯೋಜನೆ ಬಗ್ಗೆ ಹೇಳ್ತೀರಿ. ಕೆಲವರು ಸುಭಹಾರೈಸಬಹುದು. ಆದ್ರೆ ಸಾಕಷ್ಟು ಜನ ನಿಮ್ಮನ್ನು ‘ಅನುಮಾನ’ದಿಂದ ನೋಡ್ತಾರೆ..! ನೀನು ಇದನ್ನು ಮಾಡೋಕಾಗಲ್ಲ, ನಿನ್ನಿಂದ ಸಾಧ್ಯಾನಾ ಅಂತೆಲ್ಲಾ ಅನುಮಾನಿಸ್ತಾರೆ. ಆದ್ರೆ ಅವರಿಗೆಲ್ಲಾ ತಲೆ ಕೆಡಿಸಿಕೊಳ್ಳದೇ ನೀವು ನಿಮ್ಮ ಕೆಲಸ ಮುಂದುವರೆಸಿ. ನಿಮ್ಮ ಕೆಲಸದ ಬಗ್ಗೆ ನಿಮಗೆ ನಂಬಿಕೆ ಇರಲಿ..

ಅದಾದ ನಂತರದ ಹಾದಿ ‘ಅವಮಾನ’ದ್ದು..! ಅನುಮಾನ ಪಟ್ಟವರೆಲ್ಲಾ ನಿಮ್ಮನ್ನು ಅವಮಾನಿಸೋಕೆ ಶುರು ಮಾಡ್ತಾರೆ. ‘ಅಯ್ಯೋ, ಏನೋ ದೊಡ್ಡ ಸಾಧನೆ ಮಾಡ್ದೋರಂಗೆ ಆಡ್ತಾನೆ’ ಅಂತಾರೆ. ಇದನ್ನ ಯಾವ ನಾಯಿ ಬೇಕಾದ್ರೂ ಮಾಡುತ್ತೆ ಅಂತಾರೆ. ಅದುನ್ ಮಾಡ್ದೋನು ಇದುನ್ನೂ ಮಾಡಪ್ಪ, ಯಾಕೆ ತಾಕತ್ತಿಲ್ವಾ ಅಂತ ಕಾಲೆಳೆಯುತ್ತೆ..! ನೀವು ನಿಮ್ಮ ಗುರಿಯ ಬಗ್ಗೆ ಸ್ಪಷ್ಟತೆ ಇಟ್ಕೊಳಿ. ಅವಮಾನಿಸೋರಿಗೆ ನಿಮ್ಮ ಏಳ್ಗೆ ಸಹಿಸಲಾಗ್ತಿಲ್ಲ ಅನ್ನೋದು ಮನದಟ್ಟು ಮಾಡ್ಕೊಳಿ. ಹೋರಾಟ ಮುಂದುವರೆಸಿ… ನಿಮ್ಮ ಶ್ರಮ, ಛಲ, ಹಠ ಅಚಲವಾಗಿದ್ರೆ ಮುಂದಿನ ಹಂತವೇ ‘ಸನ್ಮಾನ’..


ಈ ಹಂತಕ್ಕೆ ಬರುವವರೆಗೂ ನೂರಾರು ಅಡೆತಡೆಗಳಿರುತ್ತವೆ. ಅಡ್ಡಗಾಲು ಹಾಕೋರು ಪ್ರತಿ ಹಂತದಲ್ಲೂ ಸಿಗ್ತಾರೆ. ಅವರನ್ನು ಎದುರಿಸುವ ಏಕೈಕ ಅಸ್ತೃ ‘ನಗು’..! ಅನುಮಾನ ಪಟ್ಟಾಗ್ಲೂ ನಗ್ತಾ ಮುಂದೆ ಸಾಗಿ, ಅವಮಾನಿಸದಾಗ್ಲೂ ನಗು ನಿಲ್ಲಿಸಬೇಡಿ.. ಸನ್ಮಾನದ ಹಂತ ತಲುಪಿದಾಗ ಅವರೇ ನಿಮ್ಮನ್ನು ನೋಡಿ ‘ಸ್ಮೈಲ್’ ಕೊಡ್ತಾರೆ.. ನಿಮ್ಮ ಜೊತೆಗೊಂದು ಸೆಲ್ಫಿ ಕೇಳ್ತಾರೆ. ಅದೇ ನಗುವಿನ ಜೊತೆ ಸೆಲ್ಫಿಗೆ ಪೋಸ್ ಕೊಡಿ… ಸದಾ ಖುಷಿಖುಷಿಯಾಗಿರಿ…‌ ಜಗತ್ತನ್ನೇ ಗೆಲ್ಲಬಹುದು.‌.‌. ಸನ್ಮಾನದ ಹಂತ ತಲುಪಲು ಅನುಮಾನ ಮತ್ತು ಅವಮಾನ ಎರಡನ್ನೂ ಎದುರಿಸಲೇಬೇಕು ಅನ್ನೋದು ಗೊತ್ತಿರಲಿ… ಶುಭವಾಗಲಿ…

Show More

Related Articles

Leave a Reply

Your email address will not be published. Required fields are marked *

Close