ಸಿನಿ ಸುದ್ದಿ

ಚಾಲೆಂಜಿಂಗ್ ‘ತಾರಕ್’ ಟ್ರೇಲರ್ ಹವಾ…

ಚಾಲೆಂಜಿಂಗ್ ಸ್ಟಾರ್ ದರ್ಶನ್ ಫ್ಯಾನ್ಸ್‌ಗೆ ಮತ್ತೊಂದು ಹೂರಣ… ಬಹುನಿರೀಕ್ಷಿತ ತಾರಕ್ ಸಿನಿಮಾದ ಟ್ರೇಲರ್ ಈಗ ತಾನೇ ರಿಲೀಸ್ ಆಗಿದೆ‌. ಲವ್, ಆಕ್ಷನ್ ಜೊತೆ ರಗ್ಬಿಯ ಖದರ್ ಸಿನಿಮಾದಲ್ಲಿದೆ. ದರ್ಶನ್ ಪಕ್ಕಾ ಆಕ್ಷನ್ ಸ್ಟಾರ್ ಆಗಿ ತಾರಕ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ… ಮಿಲನ ಪ್ರಕಾಶ್ ನಿರ್ದೇಶನ ಮಾಡಿರೋ ‘ತಾರಕ್’ ಫೇಸ್ಬುಕ್, ಯೂಟ್ಯೂಬಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ… ಕೆಲವು ವಾರದ ಹಿಂದೆ ರಿಲೀಸ್ ಆಗಿದ್ದ ‘ತಾರಕ್’ ಟೀಸರ್‌ನ ಬರೋಬ್ಬರಿ ಮಿಲಿಯನ್ ಜನ ನೋಡಿದ್ರು… ಹಾಗಾಗಿ ಟ್ರೇಲರ್‌ಗೆ ಸಿಕ್ಕಾಪಟ್ಟೆ ನಿರೀಕ್ಷೆ ಇತ್ತು… ಟ್ರೇಲರ್ ನೋಡಿದ್ಮೇಲೆ ದರ್ಶನ್ ಫ್ಯಾನ್ಸ್ ಖುಷಿಯಾಗಿರೋದಂತೂ ನಿಜ. ಡಿ ಬಾಸ್ ಹವಾ ಮತ್ತೆ ‘ತಾರಕ್’ ರೂಪದಲ್ಲಿ ಬೀಸ್ತಿದೆ. ದರ್ಶನ್ ಅವರಿಗೆ ನಾಯಕಿಯರಾಗಿ ಶೃತಿ ಹರಿಹರನ್ ಹಾಗೂ ಸಾನ್ವಿ ಶ್ರೀವತ್ಸವ್ ಜೊತೆಯಾಗಿದ್ದಾರೆ.. ಅರ್ಜುನ್ ಜನ್ಯ ಅದ್ಭುತ ಹಾಡುಗಳನ್ನು ಕಟ್ಟಿಕೊಟ್ಟಿದ್ದಾರೆ… ಬಾಕ್ಸಾಫೀಸಲ್ಲಿ ತಾರಕ್ ಹವಾ ಹೇಗಿರುತ್ತೋ ಕಾದು ನೋಡೋಣ… ಸದ್ಯಕ್ಕೆ ಟ್ರೇಲರ್ ಎಂಜಾಯ್ ಮಾಡಿ…

Show More

Related Articles

Leave a Reply

Your email address will not be published. Required fields are marked *

Close