ಸಿನಿ ಸುದ್ದಿ

ತಾರಕ್ ಅಬ್ಬರ… ಸ್ಪೈಡರ್ ತತ್ತರ…

ಕನ್ನಡ ಸಿನಿಮಾಗಳ ಮುಂದೆ ಪರಭಾಷಾ ಸಿನಿಮಾಗಳು ನಿಲ್ಲಲ್ಲ ಅನ್ನೋದು ಅರ್ಥ ಆಗೋಕೆ ಇನ್ನೂ ಎಷ್ಟು ದಿನ ಬೇಕೋ ಗೊತ್ತಿಲ್ಲ ಈ ಚಿತ್ರಮಂದಿರ ಮಾಲೀಕರಿಗೆ. ಈ ತರ ಅದೆಷ್ಟೋ ಹೈಪ್ ಕ್ರಿಯೇಟ್ ಮಾಡಿರೋ ತಮಿಳು ತೆಲುಗು ಚಿತ್ರಗಳು ಮಕಾಡೆ ಮಲಗಿದ ಉದಾಹರಣೆ ಇದೆ. ಪ್ರಸ್ತುತ ಸರದಿ ‘ಸ್ಪೈಡರ್’ ಸಿನಿಮಾದ್ದು..


ಈ ವಾರ ಕನ್ನಡದ ತಾರಕ್ ಬಿಡುಗಡೆ ಆಯ್ತು. ಅದಕ್ಕೆ ಒಂದು ದಿನ ಮುಂಚೆಯೇ ತೆಲುಗಿನ ಮಹೇಶ್ ಬಾಬು ಅಭಿನಯದ ‘ಸ್ಪೈಡರ್’ ರಿಲೀಸ್ ಆಗಿತ್ತು. ರಾಜ್ಯದಲ್ಲೂ ‘ಸ್ಪೈಡರ್’ ಸಿನಿಮಾಗೆ ಸಿಕ್ಕಾಪಟ್ಟೆ ಸ್ಕ್ರೀನ್ ಸಿಕ್ಕಿತ್ತು. ‘ತಾರಕ್’ ಸಿನಿಮಾಗೆ ಟಕ್ಕರ್ ಕೊಡ್ತೀವಿ ಅನ್ನೋ ತರ ಬಿಲ್ಡಪ್ ಸಹ ಕೊಟ್ಟಿತ್ತು. ಆದ್ರೆ ಮೊದಲ ದಿನ ಮೊದಲ ಶೋ ನೋಡಿದ ಪಕ್ಕಾ ಮಹೇಶ್ ಬಾಬು ಅಭಿಮಾನಿಗಳು ಸಹ ‘ಚೆನ್ನಾಗಿಲ್ಲ’ ಅಂತ ತೀರ್ಪು ಕೊಟ್ರು. ಆದ್ರೆ ಮರುದಿನ ರಿಲೀಸ್ ಆದ ‘ತಾರಕ್’ ನೋಡಿ ಕನ್ನಡಿಗರು ‘ಸೂಪರ್’ ಅಂತಿದ್ದಾರೆ. ಅಲ್ಲಿಗೆ ಮತ್ತೊಮ್ಮೆ ಇತಿಹಾಸ ಮರುಕಳಿಸಿದೆ. ಕನ್ನಡ ಸಿನಿಮಾಗಳು ಎದುರು ಎಗರಿ ಬಂದ ಪರಭಾಷಾ ಸಿನಿಮಾಗಳು ಸುಸ್ತಾಗಿ ಸುಮ್ಮನಾಗೋದು ಪುನರಾವರ್ತನೆ ಆಗಿದೆ‌.


ಈ ಹಿಂದೆ ಬಾಹುಬಲಿ ಸಿನಿಮಾ ಬಂದಾಗ ಕನ್ನಡದ ರಂಗಿತರಂಗ ಸಿನಿಮಾ ಚೆನ್ನಾಗಿ ಓಡ್ತಾ ಇದ್ರೂ ಸಹ ಥಿಯೇಟರ್ ಮಾಲೀಕರು ‘ರಂಗಿತರಂಗ’ನ ಕಿತ್ತು ಬಿಸಾಡಿದ್ರು. ಆದ್ರೆ ಬಾಹುಬಲಿ ಆರಂಭ ಶೂರತ್ವ ಮುಗೀತಿದ್ದ ಹಾಗೇ ಮತ್ತೆ ಬೇಕಾಗಿದ್ದುವಾದೇ ‘ರಂಗಿತರಂಗ’.! ಕನ್ನಡ ಸಿನಿಮಾ ಸುರ್ ಅಂತ ಹಚ್ಚಿ ಢಂ ಅಂತ ಸಿಡಿಯೋ ಆಟಂ ಬಾಂಬ್ ಅಲ್ಲ, ಲಕ್ಷ ಪಟಾಕಿಗಳ ಸರ ಪಟಾಕಿ ಅನ್ನೋದು ‘ರಂಗಿತರಂಗ’ದಿಂದ ಪ್ರೂವ್ ಆಯ್ತು. ಅದಾದ ಮೇಲೆ ಸಹ ಶ್ರೀಮಂತುಡು, ಕೊಚಾಡಿಯನ್, ಪುಲಿ, ಟ್ಯೂಬ್ ಲೈಟ್ ಸೇರಿದಂತೆ ಅದೆಷ್ಟೋ ಪರಭಾಷಾ ಸಿನಿಮಾಗಳು ‘ಭಯಂಕರ ಹಿಟ್ ಆಗ್ತೀವಿ’ ಅಂತ ಬಂದು ಹೇಳ ಹೆಸರಿಲ್ಲದೇ ವಾರಕ್ಕೇ ಜಾಗ ಖಾಲಿ ಮಾಡಿದ್ವು..!


ಈಗ ಅದೇ ಸರದಿ ಸ್ಪೈಡರ್ ಸಿನಿಮಾದ್ದು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತಾರಕ್ ಎದುರು ‘ಸ್ಪೈಡರ್’ ಜೇಡರ ಬಲೆಯಲ್ಲಿ ಸಿಕ್ಕಾಕ್ಕೊಂಡ ಜೇಡದ ಹಾಗಾಗಿದೆ. ‘ತಾರಕ್’ ನಿರೀಕ್ಷೆ ಹುಸಿ ಮಾಡದೇ ಮನರಂಜನೆ ಕೊಡ್ತಿದೆ.


ಪರಭಾಷಾ ಸಿನಿಮಾಗಳು ಕೊಡೋ ಪುಕ್ಷಟ್ಟೆ ಬಿಲ್ಡಪ್‌ಗಳಿಗೆ ಚಿತ್ರಮಂದಿರ ಮಾಲೀಕರು ಯಾಮಾರದೇ ಕಮ್ಮಿ ಶೋ ಕೊಡಬೇಕು. ಇಲ್ಲ ಅಂದ್ರೆ ಅವರ ರಾಜ್ಯಗಳಲ್ಲಿ ಆ ಸಿನಿಮಾಗಳಬಹಣೆಬರಹ ನೋಡ್ಕೊಂಡು ಆಮೇಲೆ ಇಲ್ಲಿ ರಿಲೀಸ್ ಮಾಡ್ಬೇಕು. ಕೋಟಿಕೋಟಿ ಕೊಟ್ಟು ತಗೊಂಡು ಬರೋ ಹಂಚಿಕೆದಾರರು ಕೈಸುಟ್ಕೊಂಡು ಒದ್ದಾಡೋದಕ್ಕಿಂತ ಕಾದು ನೋಡೋ ತಂತ್ರ ಒಳ್ಳೇದಲ್ವಾ..? ಯೋಚ್ನೆ ಮಾಡಿ.. ನಮ್ ಸಿನಿಮಾಗಳೇ ಅದ್ಭುತವಾಗಿರುವಾಗ, ಜನರಿಂದ ರಿಜೆಕ್ಟ್ ಆಗ್ತಿರೊ ಪರಭಾಷಾ ಸಿನಿಮಾಗಳು ಬೇಕಾ.?

Show More

Related Articles

Leave a Reply

Your email address will not be published. Required fields are marked *

Close