ಐತ್ ಲಗಾ

ಈ ಮಗೂಗೆ ಹುಟ್ಟುವಾಗಲೇ 7 ಹಲ್ಲುಗಳಿತ್ತು..!

– ಶಾಂಘವಿ ಶಂಕರ್

ವೈದ್ಯಕೀಯ ಲೋಕದಲ್ಲಿ ಏನೇನೋ ನಡೀತಿರುತ್ತಪ್ಪ..! ಅದ್ರಲ್ಲೂ ಇದು ಕಲಿಯುಗ ಅಂತಾರಲ್ಲ, ಅದು ಒಂದೊಂದ್ ಸಲ ನಿಜ ಅನಿಸಿಬಿಡುತ್ತೆ..! ಇಲ್ಲವಾದ್ರೆ ಈಗ ತಾನೇ ಹುಟ್ಟಿದ ಮಗುವಿಗೆ 7 ಹಲ್ಲುಗಳು ಇದೆ ಅಂದ್ರೆ ನೀವು ನಂಬ್ತೀರಾ..? ನಂಬದೇ ಇದ್ರು ನೀವಿದನ್ನು ನಂಬಲೇಬೇಕು…!

ಹೌದು. ಇದೇ ಮೊದಲ ಬಾರಿಗೆ ವೈದ್ಯಲೋಕದಲ್ಲಿ ಇಂತಹದೊಂದು ಪ್ರಕರಣ ಬೆಳಕಿಗೆ ಬಂದಿದೆ. ಅಹಮದಾಬಾದಿನ ಶರ್ಮ ದಂಪತಿಯ ಮಗುವು 7 ಹಲ್ಲುಗಳ ಸಮೇತ ಜನನವಾಗಿದ್ದು, ಇದರಿಂದ ಒಂದು ತಿಂಗಳ ಮಗುವಿಗೆ ತಾಯಿ ಹಾಲುಣಿಸೋದು ತುಂಬಾ ಕಷ್ಟ ಆಗ್ತಿತ್ತಂತೆ. ಹೀಗಾಗಿ ವೈದ್ಯರನ್ನು ಭೇಟಿ ಮಾಡಿ ಏನು ಮಾಡೋದು ಅಂತ ಕೇಳಿದ್ದಕ್ಕೆ, ವೈದ್ಯರು ಹಲ್ಲುಗಳನ್ನ ತೆಗೆಸಿಬಿಡಿ, ಮತ್ತೆ ಬರೋ ಟೈಮಿಗೆ ಹಲ್ಲುಗಳು ಬರುತ್ತೆ ಅಂತ ಹೇಳಿದ್ರಂತೆ..!

ಡಾಕ್ಟರ್ ಹೇಳಿದ ತಕ್ಷಣ ಶಸ್ತ್ರಚಿಕಿತ್ಸೆ ಮಾಡಿ 7 ಹಲ್ಲುಗಳನ್ನು ಹೊರತೆಗೆದಿದ್ದಾರೆ. ಆದರೆ ಹಲ್ಲು ಕೀಳುವಾಗ ಅಪ್ಪಿ ತಪ್ಪಿ ಆ ಮಗು ಅಲುಗಾಡ್ತಿರೋ ಹಲ್ಲುಗಳನ್ನ ನುಂಗಿಬಿಟ್ರೆ ಏನ್ ಮಾಡೋದು ಅನ್ನೋ ಟೆನ್ಷನ್ ಸಹ ವೈದ್ಯರಿಗಿತ್ತಂತೆ…!

ವೈದ್ಯಕೀಯ ಇತಿಹಾಸದಲ್ಲೇ ಈ ರೀತಿಯ ಘಟನೆ ಇದೇ ಮೊದಲಂತೆ, ಅದರಲ್ಲೂ ಏಳು ಹಲ್ಲುಗಳ ಸಮೇತ ಮಗುವಿನ ಜನನವಾಗಿರುವುದು ಬಹುಶಃ ಜಗತ್ತಿನಲ್ಲೇ ಇದೇ ಮೊದಲು ಅಂತಾರೆ ವೈದ್ಯರು…!

 

Show More

Related Articles

Leave a Reply

Your email address will not be published. Required fields are marked *

Close