ಐತ್ ಲಗಾ

ಮನೆ ಕಳ್ಳತನ ಮಾಡಿ ತನ್ನ ಮೊಬೈಲನ್ನೇ ಮರೆತು ಹೋದ ಕಳ್ಳ…!

ಹಹ್ಹಹ್ಹ… ಇಲ್ಲೊಬ್ಬ ಸಿಕ್ಕಾಪಟ್ಟೆ `ಟ್ಯಾಲೆಂಟೆಡ್’ ಕಳ್ಳನನ್ನ  ನಿಮಗೆ ಪರಿಚಯಿಸಲೇಬೇಕು..! ಇದು ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಘಟನೆ. ಮನೆಗೆ ನುಗ್ಗಿ ಕಳ್ಳತನ ಮಾಡಿ ವಾಪಾಸ್ ಹೋಗುವಾಗ ತನ್ನ ಮೊಬೈಲನ್ನೇ ಬಿಟ್ಟು ಹೋದ ಭೂಪ ಇವನು..!!


ನೆಲಮಂಗಲ ಸಮೀಪದ ಅರಿಶಿನಕುಂಟೆಯನೆಯೊಂದಕ್ಕೆ ಕನ್ನ ಹಾಕೋ ಪ್ಲ್ಯಾನ್ ಮಾಡಿದ್ದ ಈ ಕಳ್ಳ. ಮನೆಯ ಹತ್ತಿರ ಹೋಗಿ ಅಲ್ಲಿದ್ದ ನಾಯಿಗೆ ವಿಷಯುಕ್ತ ಆಹಾರ ತಿನ್ನಿಸಿದ್ದಾನೆ. ನಾಯಿ ಯಾವಾಗ ಪ್ರಜ್ಞೆತಪ್ಪಿತೋ, ಕಳ್ಳ ಮನೆಯ ಬಾಗಿಲು ಒಡೆದು ಮನೆಯೊಳಗೆ ಹೋಗಿದ್ದಾನೆ. 3 ಲಕ್ಷ ರೂಪಾಯಿ ನಗದು ಹಾಗೂ 400 ಗ್ರಾಂ ಚಿನ್ನ ಕದ್ದು ಅಲ್ಲಿಂದ ಪರಾರಿಯಾಗಿದ್ದಾನೆ..!


ಮಾರನೇ ದಿನ ಬೆಳಗ್ಗೆ ಮನೆಯವರು ಬಂದು ನೋಡಿದ್ರೆ ಮನೆಗೆ ಕಳ್ಳ ಕನ್ನ ಹಾಕಿರೋದು ಗೊತ್ತಾಗಿದೆ. ಆದರೆ ಮನೆಯಲ್ಲಿ ಒಂದು ಮೊಬೈಲ್ ಸಿಕ್ಕಿದೆ. ಅದು ಮನೆಯವರದ್ಯಾರದ್ದೂ ಆಗಿರಲಿಲ್ಲ..! ಆ ಕಿಲಾಡಿ ಕಳ್ಳ ಕದಿಯೋದೆಲ್ಲಾ ಕದ್ದು ವಾಪಸ್ ಹೋಗುವಾಗ ತನ್ನ ಮೊಬೈಲನ್ನು ಅಲ್ಲೇ ಮರೆತು ಹೋಗಿದ್ದಾನೆ..!


ಅಪರಾಧ ಮಾಡ್ದಾಗ ಏನಾದ್ರೂ ಒಂದು ಸಣ್ಣ ಸುಳಿವಾದ್ರೂ ಅಪರಾಧಿ ಬಿಟ್ಟು ಹೋಗಿರ್ತಾನೆ ಅಂತ ಕೇಳಿದ್ವಿ. ಆದ್ರೆ, ಕದಿಯೋದೆಲ್ಲಾ ಕದ್ದು ತನ್ನ ಮೊಬೈಲನ್ನೇ ಬಿಟ್ಟು ಹೋಗಿರೊ ಮೂರ್ಖ ಶಿಕಾಮಣಿ ಇವನೇ…! ಪೊಲೀಸರಿಗೆ ಕಳ್ಳನ ಎಲ್ಲ ಸುಳಿವೂ ಸಿಕ್ಕಿದೆ. ಎತ್ತಾಕ್ಕೊಂಡ್ ಬರೋದೊಂದೇ ಬಾಕಿ…

Show More

Related Articles

Leave a Reply

Your email address will not be published. Required fields are marked *

Close