ಏನ್ ಸುದ್ದಿ?

ಟಿವಿ9ಗೇ ಶಾಕ್..!

ಟಿವಿ9… ಅದು ಬರಿಯ ಹೆಸರಲ್ಲ, ಅದೊಂದು ಬ್ರ್ಯಾಂಡ್, ಅದೊಂದು ಶಕ್ತಿ, ಅದೊಂದು ಕಿಚ್ಚು… ಅಂತಹ ಟಿವಿ9 ಸ್ವಲ್ಪ ಮಟ್ಟಿಗಾದ್ರೂ ವಿಚಲಿತವಾಗಿದೆ ಅಂದ್ರೆ ನೀವು ನಂಬಲೇಬೇಕು..! ಟಿವಿ9 ಸಮಾಜದ ಹುಳುಕುಗಳನ್ನ ಹುಡುಕಿ ಕಿತ್ತಿದೆ, ಕ್ರಿಮಿಗಳನ್ನ ಅಟ್ಟಾಡಿಸಿದೆ. ಉತ್ತಮ ಸಮಾಜಕ್ಕಾಗಿ ಸಾಕಷ್ಟು ಸೇವೆ ಸಲ್ಲಿಸಿದೆ. ಅಂತಹ ಟಿ9 ಈಗ ಒಂದು ಶಾಕ್‌ನಲ್ಲಿದೆ..! ಎಲ್ರಿಗೂ ಶಾಕ್ ಕೊಡೋ ಟಿವಿ೯ಗೆ ಏನಾಯ್ತು ಅಂದ್ರಾ..? ಅದಕ್ಕೆ ಉತ್ತರ ಅದು ತನ್ನ ಆಧಾರ ಸ್ಥಂಭಗಳೆರಡನ್ನ ಕಳೆದುಕೊಂಡಿದೆ. ಆ ಎರಡು ಸ್ಥಂಭಗಳ ಹೆಸರು ರವಿ ಕುಮಾರ್ ಮತ್ತು ಮಾರುತಿ…


ರವಿ ಕುಮಾರ್ ಮತ್ತು ಮಾರುತಿ ಅಂದ್ರೆ ಇಡೀ ಮಾಧ್ಯಮ ಒಮ್ಮೆ ತಿರುಗಿ ನೋಡುತ್ತೆ. ಪ್ರತೀ ವಾಹಿನಿಗೂ ಇಂಥವರು ನಮ್ಮ ಚಾನಲ್ಲಲ್ಲೂ ಇರಬೇಕು ಅಂತ ಯೋಚನೆ ಮಾಡುತ್ತೆ. ಇವತ್ತು ಟಿವಿ9 ಏನೇ ಆಗಿದ್ರೂ ಅದರಲ್ಲಿ ಬಹಳ ದೊಡ್ಡ ಪಾತ್ರ ಇವರಿಬ್ಬರದು. ನೀವು ಹತ್ತು ವರ್ಷಗಳ ಕಾಲ ನೋಡಿದ ಟಿವಿ9 ಏನೇ ಆಗಿದ್ರೂ ಅದರಲ್ಲಿ ಇವರಿಬ್ಬರ ಶ್ರಮ ತುಂಬಾ ತುಂಬಾ ದೊಡ್ಡದು. ಹತ್ತು ವರ್ಷದ ಹಿಂದೆ ಟಿವಿ9 ಆರಂಭವಾಗುವಾಗ ವಾಹಿನಿಯ ಜೊತೆಯಾದ ಇವರಿಬ್ಬರೂ ನಿನ್ನೆಯವರೆಗೂ ಅದರ ಯಶಸ್ಸಿಗೆ ಹಗಲಿರುಳು ಶ್ರಮ ಪಟ್ಟಿದ್ದಾರೆ. ತಮ್ಮ ಎಷ್ಟೋ ವೈಯಕ್ತಿಕ ಸಂತೋಷಗಳನ್ನು ಟಿವಿ9ಗೋಸ್ಕರ ತ್ಯಾಗ ಮಾಡಿದ್ದಾರೆ. ಇದನ್ನು ಟಿವಿ9ನ ರೂವಾರಿ ಮಿಶ್ರಾ ಸಹ ಯಾವ ಅನುಮಾನವಿಲ್ಲದೇ ಒಪ್ಪಿಕೊಳ್ಳುತ್ತಾರೆ. ಇಂತಹ ರವಿಕುಮಾರ್ ಹಾಗೂ ಮಾರುತಿ ಟಿವಿ9 ಬಿಟ್ಟು ಹೊರಬಂದಿದ್ದಾರೆ. ಇದು ಟಿವಿ9 ಪಾಲಿಗೆ ದೊಡ್ಡ ಹೊಡೆತ ಅಂತ ಟಿವಿ9 ಸಂಸ್ಥೆಗೂ ಗೊತ್ತಿದೆ…

ರವಿ ಕುಮಾರ್

ರವಿಕುಮಾರ್ ಟಿವಿ9ಗೆ ಎಲ್ಲವೂ ಆಗಿದ್ದವರು. ಅವರೇ ಅದರ ಮುಖ್ಯಸ್ಥರು. ಯಾವತ್ತೂ ಪರದೆಯ ಮೇಲೆ ಕೂರಬೇಕು ಎಂಬ ಸಣ್ಣ ಆಸೆ ಪಟ್ಟವರಲ್ಲ. ಆದ್ರೆ ಅದೆಷ್ಟೋ ಸ್ಟಾರ್ ಆಂಕರ್‌ಗಳನ್ನ ಕರ್ನಾಟಕಕ್ಕೆ ಕೊಟ್ಟವರು. ಯಾವ ಸುದ್ದಿ ಹೋಗ್ಬೇಕು, ಹೇಗೆ ಹೋಗ್ಬೇಕು, ಅದರ ರೂಪುರೇಷ ಹೇಗಿರಬೇಕು ಅನ್ನೋದರಿಂದ ಹಿಡಿದು, ಪರದೆಯ ಮೇಲೆ ಒಬ್ನ ಆಂಕರ್ ಹೇಗೆ ಕಾಣಬೇಕು, ಯಾವ ಬಟ್ಟೆ ಹಾಕಬೇಕು ಅನ್ನೋದರ ಬಗ್ಗೆಯೂ ಕಾಳಜಿ ವಹಿಸುತ್ತಿದ್ದವರು ಇವರು. ಟಿವಿ9 ಒಂದು ಸಂಸ್ಥೆ ಅನ್ನೋದಕ್ಕಿಂತ ಅದೊಂದು ಕುಟುಂಬ. ಆ ಕುಟುಂಬದ ಜವಾಬ್ದಾರಿ ಹೊತ್ತಿದ್ದ ದೊಡ್ಡಣ್ಣ ಈ ರವಿಕುಮಾರ್. ಸುದ್ದಿ ವಾಹಿನಿಯಲ್ಲಿರುವ ಸಾಕಷ್ಟು ಜನರ ಕನಸು, ರವಿ ಕುಮಾರ್ ಅವರ ಜೊತೆಗೆ ಕನಿಷ್ಟ ಒಂದು ವರ್ಷವಾದ್ರೂ ಕೆಲಸ ಮಾಡಬೇಕು ಅನ್ನೋದು. ಅವರು ರೇಗಲ್ಲ, ಕೂಗಲ್ಲ, ಆದ್ರೂ ಎಲ್ಲವನ್ನೂ ಅಚ್ಚುಕಟ್ಟಾಗಿ ಪ್ರೀತಿಯಿಂದಲೇ ಮಾಡಿಸುತ್ತಿದ್ರು. ಅದಕ್ಕೇ ಅವರು ಅಂದ್ರೆ ಎಲ್ಲರಿಗೂ ಅಪಾರ ಪ್ರೀತಿ ಮತ್ತು ಗೌರವ. ಟಿವಿ9ಗೆ ಬರೋಕೆ ಮುಂಚೆ ಈಟಿವಿಯಲ್ಲಿ ಕೆಲಸ ಮಾಡಿದ್ದ ಅನುಭವವನ್ನು ಇಂಚಿಂಚೂ ಟಿವಿ9ಗೆ ಧಾರೆ ಎರೆದು ಅದನ್ನು ಸತತ10 ವರ್ಷಗಳ ಕಾಲ ಕರ್ನಾಟಕದ ನಂಬರ್ ವನ್ ನ್ಯೂಸ್ ಚಾನಲ್ ಮಾಡಿದ ಎಲ್ಲಾ ಕ್ರೆಡಿಟ್ಟು ಇವರಿಗೆ ಸಲ್ಲಲಬೇಕು. ಈ ಮಧ್ಯೆ ಲಕ್ಷಲಕ್ಷ ಸಂಬಳದ ಹತ್ತಾರು ಆಫರ್ ಬಂದರೂ ಎಲ್ಲವನ್ನು ತಿರಸ್ಕರಿಸಿ ಟಿವಿ9 ಅನ್ನೋ ಬ್ರ್ಯಾಂಡ್ ಕಟ್ಟಿದ ಶಕ್ತಿಯ ಹೆಸರೇ ರವಿಕುಮಾರ್…

ಮಾರುತಿ

ಮಾರುತಿ ಅಂದ್ರೆ ಮಾರುತಿ… ಟಿವಿ9ಗೆ ಆಂಜನೇಯನ ಹಾಗೆ ಬಲ ಕೊಟ್ಟವರು ಇವರು. ಇನ್‌ಪುಟ್‌ನಲ್ಲಿ ಮಾರುತಿ ಇದ್ರೆ ಅಲ್ಲಿ ಸ್ಟೋರಿ ಮಿಸ್ ಆಗೋ ಸಾಧ್ಯತೆಯೇ ಇಲ್ಲ. ರವಿಕುಮಾರ್ ಅವರ ಬ್ರಹ್ಮಾಸ್ತ್ರ ಇವರೇ. ರಾಜ್ಯದ ಮೂಲೆಮುಲೆಯ ಸುದ್ದಿಗಳು ಟಿವಿ9 ಆಫೀಸಿಗೆ ಬಂದು ಬೀಳೋದೇ ಇವರ ಮೂಲಕ. ಡೆಸ್ಕಲ್ಲಿ ಮಾರುತಿ ಇದ್ರೆ ಅದರ ಗತ್ತು, ಗಮ್ಮತ್ತೇ ಬೇರೆ. ಮಾತು ಕಮ್ಮಿ, ಕೆಲಸ ಸಿಕ್ಕಾಪಟ್ಟೆ. ಇವರೂ ಹತ್ತು ವರ್ಷಗಳ ಕಾಲ ಟಿವಿ9 ಅನ್ನೋ ಬ್ರ್ಯಾಂಡ್ ಕಟ್ಟೋಕೆ ರವಿಕುಮಾರ್ ತಂಡದಲ್ಲಿ ರಾತ್ರಿ ಹಗಲು ಶ್ರಮಿಸಿದವರು. ಒಂಥರಾ ಅಜಾತ ಶತ್ರು. ರವಿಕುಮಾರ್ ದೊಡ್ಡಣ್ಣ ಆದ್ರೆ, ಇವರು ಸಣ್ಣಣ್ಣ. ಜವಾಬ್ದಾರಿ ತಗೊಂಡ್ರೆ ಅದು ಪಕ್ಕಾ ಪಾಸಿಟಿವ್ ರಿಸಲ್ಟ್… ಈಗ ಇವರೂ ಸಹ ರವಿಕುಮಾರ್ ಅವರ ಜೊತೆಯಲ್ಲೇ ಟಿವಿ9 ಮನೆಯಿಂದ ಕಾಲು ಹೊರಗಿಟ್ಟಿದ್ದಾರೆ..!

ಮುಂದೇನು..?
ಮತ್ಯಾವುದೊ ಚಾನಲ್ಲಿಗೆ ಹೋಗಬಹುದಾ..? ಹೊಸ ವಾಹಿನಿ ಕಟ್ಟಬಹುದಾ..? ಮಾಧ್ಯಮ ಬಿಟ್ಟು ಹೊಸ ಬಿಸ್ನೆಸ್ ಶುರು ಮಾಡಬಹುದಾ..? ಹೀಗೆ ಹತ್ತಾರು ಪ್ರಶ್ನೆಗಳು ಹುಟ್ಟುಕೊಂಡಿವೆ. ಆದ್ರೆ ಉತ್ತರ ಅವರಿಬ್ಬರಿಗೇ ಗೊತ್ತು… ಅವರೇನೇ ಮಾಡಿದ್ರೂ ಅದರಲ್ಲಿ ಗೆಲ್ತಾರೆ ಅಂತ, ಅವರಿಗಿಂತ ಚೆನ್ನಾಗಿ ಅವರನ್ನು ಬಲ್ಲವರಿಗೆ ಗೊತ್ತು… ಟಿವಿ9 ಸಿಬ್ಬಂಧಿ ಮಾತ್ರವಲ್ಲದೇ, ಟಿವಿ9 ವೀಕ್ಷಕರೂ ಇನ್ನು ಮುಂದೆ ಅವರನ್ನು ಮಿಸ್ ಮಾಡಿಕೊಳ್ತಾರೆ ಅನ್ನೋದಂತೂ ಸತ್ಯ…!ಇವರ ಅನುಪಸ್ಥಿತಿ ಟಿವಿ9ಗೆ ಕಾಡುತ್ತೆ ಅನ್ನೋದು ನಿಜವಾದ್ರೂ, ಟಿವಿ9 ತನ್ನ ಯಶಸ್ಸಿನ ಪಯಣ ಮುಂದುರಿಸಲಿ ಹಾಗೂ  ಇಬ್ಬರಿಗೂ ಶುಭವಾಗಲಿ ಅನ್ನೋದು ಕರ್ನಾಟಕ.ಕಾಮ್ ಹಾರೈಕೆ..

-ಕಿರಿಕ್ ಕೀರ್ತಿ

Tags
Show More

Related Articles

1 thought on “ಟಿವಿ9ಗೇ ಶಾಕ್..!”

  1. ಇಂತಹ ವಿಷಯಗಳನ್ನು ಓದಿದ ನಂತರ ನನಗೆ ಗರುಡ ಪುರಾಣದ ಒಂದು ನಿಜೋಕ್ತಿ ಜ್ಞಾಪಕಕ್ಕೆ ಬರತ್ತೆ. ಅದು ಹೀಗಿದೆ “ಈ ಲೋಕದಲ್ಲಿ ಯಾರು ಯಾರಿಗೂ ನಿಕಟ ಸಂಬಂಧವಿರುವುದು ಸಾಧ್ಯವೇ ಇಲ್ಲ. ಈ ನಮ್ಮ ದೇಹವೆ ಅನಿತ್ಯವೆಂದ ಮೇಲೆ ಅನ್ಯರೊಡನೆ ನಿಕಟ ಸಂಬಂಧವೆಂತಹುದು”. ಯಾರಿಂದ ಯಾರೂ ಬದುಕುವುದಿಲ್ಲ, ಯಾರಿಂಗ ಯಾರೂ ಕೆಡುವುದೂ ಇಲ್ಲ. ಜೀವನ ಮುಂದುವರೆಯುತ್ತಲೇ ಇರುತ್ತದೆ. ಈ ಪ್ರಪಂಚದಲ್ಲಿ ಯಾರೂ ಪೆದ್ದರಿಲ್ಲ. ಒಬ್ಬರನ್ನೊಬ್ಬರು ಮೀರಿಸುವಂತಹವರು ಇದ್ದೇ ಇರುತ್ತಾರೆ. ನಮ್ಮಿಂದಲೇ ಈ ಪ್ರಪಂಚ ಎನ್ನುವವರು ಯಾರೂ ಬುದ್ಧಿವಂತರೇ ಅಲ್ಲ. ಒಬ್ಬರು ಹೋದರೆ ಅವರ ಜಾಗದಲ್ಲಿ ನೂರಾರು ಜನ ಹುಟ್ಟುತ್ತಾರೆ.

Leave a Reply

Your email address will not be published. Required fields are marked *

Close