ಐತ್ ಲಗಾ

ಬೆಂಗಳೂರಿನ ಈ ಹೋಟೆಲಿನಲ್ಲಿ ಭಾರತೀಯರಿಗೆ ‘ನೋ ಎಂಟ್ರಿ’ ಅಂತಿದ್ರು..

ಉನೋ-ಇನ್… ಬೆಂಗಳೂರಿನ ಲ್ಯಾಂಗ್‌ಫೋರ್ಡ್ ರಸ್ತೆಯಲ್ಲಿರುವ ಹೋಟೆಲ್… ಆದ್ರೆ ಈ ಹೋಟೆಲಲ್ಲಿ ಭಾರತೀಯರಿಗೇ ಪ್ರವೇಶ ಇರಲಿಲ್ಲ ಅಂದ್ರೆ ನೀವು ನಂಬಲೇ ಬೇಕು..!!!


ಹೌದು… ಈ ಹೋಟೆಲ್ ಒಂದು ಕಾಲಕ್ಕೆ ಮಟ್ಟದಲ್ಲಿ ಸುದ್ದಿಯಾಗಿತ್ತು. ಕಾರಣ ಇಲ್ಲಿ ಭಾರತೀಯರಿಗೆ ಪ್ರವೇಶವಿರಲಿಲ್ಲ..! ಜಪಾನ್ ಪ್ರಜೆಗಳಿಗೋಸ್ಕರ ಆರಂಭವಾದ ಈ ಹೋಟೆಲ್ ತನ್ನ ಜಪಾನಿ ಮೆನುವುನಿಂದ ಪ್ರಸಿದ್ಧಿ ಪಡೆದಿತ್ತು. ಆದ್ರೆ ಅದರ ರುಚಿ ನೋಡೋಣ ಅಂತ ಹೋಟೆಲಿಗೆ ಎಂಟ್ರಿ ಕೊಟ್ರೆ ಬಾಗಿಲಲ್ಲೇ ತಡೆದು, ‘ಭಾರತೀಯರಿಗೆ ಪ್ರವೇಶವಿಲ್ಲ’ ಅಂತ ವಾಪಾಸ್ ಕಳಿಸುತ್ತಿದ್ರು. ಭಾರತೀಯರು ಮಾತ್ರವಲ್ಲ, ಜಪಾನ್ ಹೊರತುಪಡಿಸಿ ಬೇರೆ ಯಾವ ದೇಶದ ಪ್ರಜೆಗಳಿಗೂ ಒಳಗೆ ಬಿಡ್ತಿರ್ಲಿಲ್ಲ..! ಜಪಾನಿಯರ ಜೊತೆ ಭಾರತೀಯರು ಹೋದ್ರೂ ಅವರನ್ನೂ ವಾಪಾಸ್ ಕಳಿಸ್ತಿದ್ರಂತೆ..!


ಯಾವಾಗ ಈ ಹೋಟೆಲ್ ಹಾವಳಿ ಜಾಸ್ತಿ ಆಯ್ತೋ, ವಿಷಯ ಬಿಬಿಎಂಪಿಗೆ ತಲುಪಿತು. ಬಿಬಿಎಂಪಿ ಅಧಿಕಾರಿಗಳು ಹೋಟೆಲ್‌ಗೆ ಹೋದಾಗ ಅವರ ಈ ಕರ್ಮಕಾಂಡ ಬಯಲಾಯ್ತು. ಭಾರತದ ನೆಲದಲ್ಲಿ ಹೋಟೆಲ್ ಮಾಡ್ಕೊಂಡು ಭಾರತೀಯರಿಗೇ ಪ್ರವೇಶವಿಲ್ಲ ಅಂತಂದ್ರೆ ಹೇಗಾಗಬೇಡ..?

2012ರಲ್ಲಿ ನಿಪ್ಪಾನ್ ಇನ್ಫ್ರಾಸ್ಟ್ರಕ್ಚರ್ ಕಂಪನಿ ಈ ಹೋಟೆಲನ್ನು ಆರಂಭಿಸಿತ್ತು. ಕೆಲಸದ ಮೇಲೆ ಜಪಾನಿನಿಂದ ಬರುವವರಿಗೆ ಮಾತ್ರ ಇಲ್ಲಿ ಬುಕ್ಕಿಂಗ್ ಹಾಗೂ ರೆಸ್ಟೋರೆಂಟ್ ಸೇವೆ ಒದಗಿಸಲಾಗುತ್ತಿತ್ತು. ಉಳಿದ ಯಾವುದೇ ದೇಶದ ಪ್ರಜೆಗಳಿಗೂ ಹೋಟೆಲಿನ ರೂಫ್ ಟಾಪಿಗೂ ಬಿಡುತ್ತಿರಲಿಲ್ಲ..! ಇದೆಲ್ಲಾ ವಿಷಯ ಬಿಬಿಎಂಪಿಗೆ ಗೊತ್ತಾಗಿ, ಆ ಹೋಟೆಲನ್ನು ಜನಾಂಗೀಯ ತಾರತಮ್ಯ ಮಾಡಿದ ಆರೋಪದ ಮೇಲೆ ಮುಚ್ಚಿಸಲಾಯ್ತು..!
ಆ ನಂತರ ಕೆಲ ವರ್ಷಗಳ ನಂತರ ಪುನರಾರಂಭಗೊಂಡು ಎಲ್ಲಾ ದೇಶದವರಿಗೂ ಸೇವೆ ಒದಗಿಸುತ್ತಿದೆ…

Show More

Related Articles

Leave a Reply

Your email address will not be published. Required fields are marked *

Close