ಏನ್ ಸುದ್ದಿ?

ಅಮೆರಿಕ-ಉತ್ತರ ಕೊರಿಯಾ… ಯಾರೆಷ್ಟು ಬಲಿಷ್ಟರು..?

ಅಮೆರಿಕ ಮತ್ತು ಉತ್ತರ ಕೊರಿಯಾ ಯುದ್ದಕ್ಕೆ ಸಜ್ಜಾದಂತಿವೆ. ಇಷ್ಟು ದಿನ‌ಒಳಗೊಳಗೇ ಉರೀತಿದ್ದ ಬೆಂಕಿ ಈಗ ಹೊತ್ತಿಕೊಂಡು ಉರೀತಿದೆ. ಆ ಕಡೆ ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಹುಚ್ಚಾಟ, ಈ ಕಡೆ ಅಮೆರಿಕದ ಅಧ್ಯಕ್ಷ ಟ್ರಂಪ್ ಮೊಂಡಾಟ ವಿಶ್ವಕ್ಕೆ ತಲೆನೋವಾಗಿ ಪರಿಣಮಿಸಿದೆ.


ಅಮೆರಿಕದ ಯುದ್ದ ವಿಮಾನಗಳು ಉತ್ತರ ಕೊರಿಯಾದ ಕಡೆ ಹಾರೋಕೆ ರೆಡಿಯಾಗಿವೆ. ಕಿಮ್ ಅಮೆರಿಕಾನ ಕ್ಷಿಪಣಿ ಹಾರಿಸಿ ಉಡಾಯಿಸಿಬಿಡ್ತೀನಿ ಅಂತ ಬೊಬ್ಬರಿಯುತ್ತಿದ್ದಾನೆ. ಹೇಗೇ ಲೆಕ್ಕಾಚಾರ ಹಾಕಿದ್ರೂ ಉತ್ತರ ಕೊರಿಯಾಗಿಂತ ಅಮೆರಿಕ ನುರು ಪಟ್ಟು ಬಲಿಷ್ಟ ವಾಗಿದೆ..! ತಾಕತ್ತಿನ ವಿಷಯದಲ್ಲಿ ವಿಶ್ವದಲ್ಲೇ ನಂಬರ್ ವನ್ ಸ್ಥಾನದಲ್ಲಿ ಅಮೆರಿಕ ಇದ್ರೆ, ಉತ್ತರ ಕೊರಿಯಾ 23ನೇ ಸ್ಥಾನದಲ್ಲಿದೆ..! ಆದ್ರೂ ಕಾಲು ಕೆರೆದುಕೊಂಡು ಕಿರಿಕ್ ಮಾಡುತ್ತಲೇ ಇರುವ ಉ.ಕೊರಿಯಾಗೆ ಬುದ್ದಿ ಕಲಿಸಿಯೇ ಸಿದ್ದ ಅಂತ ಅಮೆರಿಕ ನಿರ್ಧಾರ ಮಾಡಿಬಿಟ್ಟಿದೆ.

ಹೀಗಿದ್ದಾಗ ಎರಡು ರಾಷ್ಟಗಳಲ್ಲಿ ಯಾರು ಎಷ್ಟು ಪವರ್‌ಪುಲ್ ಅನ್ನೋ ಪ್ರಶ್ನೆಗೆ ಉತ್ತರ ಈ ಲೇಖನ. Global Fire Power ಅನ್ನೋ ವೆಬ್‌ಸೈಟ್ ವಿಶ್ವದ ಎಲ್ಲಾ ರಾಷ್ಟ್ರಗಳ ಶಸ್ತ್ರಾಸ್ತ್ರ ಪರಿಚಯ ಮಾಡಿಕೊಡುತ್ತೆ. ಯಾವ ರಾಷ್ಟ್ರ ಯಾವ ರಾಷ್ಟ್ರಕ್ಕಿಂತ ಬಲಿಷ್ಟವಾಗಿದೆ. ಯಾರ ಬಲಿ ಎಷ್ಟು ಯುದ್ಧ ವಿಮಾನಗಲಿವೆ, ಟ್ಯಾಂಕರ್‌ಗಳಿವೆ, ಸಬ್‌ಮೆರೈನ್‌ಗಳಿವೆ, ಹೆಲಿಕಾಪ್ಟರ್‌ಗಳಿವೆ ಅನ್ನೋ ಇಂಚಿಂಚು ಮಾಹಿತಿ ನೀಡುತ್ತದೆ.

ಅದರ ಪ್ರಕಾರ ಅಮೆರಿಕದ ಬಳಿ 5,739 ಅಟ್ಯಾಕ್ ಏರ್‌ಕ್ರಾಫ್ಟ್‌ಗಳಿದ್ರೆ ಉ.ಕೊರಿಯಾದ ಬಳಿ ಕೇವಲ 572 ಮಾತ್ರ ಇದೆ. ಇನ್ನು ಅಮೆರಿಕದಲ್ಲಿ 947 ಆಕ್ರಮಣಕಾರಿ ಹೆಲಿಕಾಪ್ಟರ್‌ಗಳಿದ್ರೆ ಕೊರಿಯಾದಲ್ಲಿ ಕೇವಲ 20 ಇದೆ..! ಆದ್ರೆ ಅಮೆರಿಕದ ಸೇನೆಯಲ್ಲಿ 23,63,675 ಸೈನಿಕರಿದ್ರೆ, ಉ.ಕೊರಿಯಾದಲ್ಲಿ 64,45,000 ಸೈನಿಕರಿದ್ದಾರೆ..!

ಹೀಗೆ ಕೆಲವೊಂದರಲ್ಲಿ ಅಮೆರಿಕ ಬಲಿಷ್ಟ, ಮತ್ತೆ ಕೆಲವಲ್ಲಿ ಉತ್ತರ ಕೊರಿಯಾ ಬಲಿಷ್ಟ..! ಅದರ ಸಂಪೂರ್ಣ ಮಾಹಿತಿ ತಿಳೀಬೇಕು ಅಂದ್ರೆ ಈ ಲಿಂಕ್ ಕ್ಲಿಕ್ ಮಾಡಬೇಕು.. ನೋಡಿ ಯಾರ ಪವರ್ ಏನು ಅಂತ…

https://www.globalfirepower.com/countries-comparison-detail.asp?form=form&country1=united-states-of-america&country2=north-korea&Submit=COMPARE

Show More

Related Articles

Leave a Reply

Your email address will not be published. Required fields are marked *

Close