ಏನ್ ಸುದ್ದಿ?

ಯಾವ್ ಚಾನಲ್ಲಿಗೆ ಎಷ್ಟ್ ಟಿ.ಆರ್.ಪಿ ಬರುತ್ತೆ..?

ಕರ್ನಾಟಕದಲ್ಲಿ 13 ಸ್ಯಾಟಲೈಟ್ ನ್ಯೂಸ್ ವಾಹಿನಿಗಳಿವೆ..! ಅದ್ರಲ್ಲಿ ಯಾವ್ ಚಾನಲ್ಲಿಗೆ ಎಷ್ಟ್ ಟಿ.ಆರ್.ಪಿ ಬರುತ್ತೆ ಅಂತ ನಿಮಿಗ್ ಗೊತ್ತಾ..? ಇಲ್ಲಿದೆ ನೋಡಿ ಅದರ ಡೀಟೇಲ್ಸ್…
ಇರೋ 13 ವಾಹಿನಿಗಳಲ್ಲಿ BARC ಪ್ರಕಾರ ಟಿವಿ9 ಎಲ್ಲಾ ಚಾನಲ್‌ಗಳಿಗಿಂತ ಮುಂದಿದೆ. ಎರಡನೇ ಸ್ಥಾನ ಪಬ್ಲಿಕ್ ಟಿವಿಗೆ, ಮೂರು, ನಾಲ್ಕು ಮತ್ತು ಐದನೇ ಸ್ಥಾನ ಕ್ರಮವಾಗಿ ಸುವರ್ಣ ನ್ಯೂಸ್, ಈ ಟಿವಿ ನ್ಯೂಸ್ ಹಾಗೂ ಬಿಟಿವಿಗೆ.

ಪ್ರತಿ ಗುರುವಾರ ಬಾರ್ಕ್ ಸಂಸ್ಥೆ ಈ ರಿಪೊರ್ಟ್ ಕೊಡುತ್ತೆ. ಹಾಗೆಯೇ ಇವತ್ತು 37ನೇ ವಾರದ ವರದಿ ಬಂದಿದೆ. ಒಟ್ಟಾರೆ ಐದು ಬೇರೆಬೇರೆ ಕೆಟಗರಿಗಳಿರುತ್ತೆ. ಒಟ್ಟಾರೆ ಕರ್ನಾಟಕ, ಗ್ರಾಮೀಣ, ಪಟ್ಟಣ, ಬೆಂಗಳೂರು ಮತ್ತು ಹತ್ತು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಪಟ್ಟಣಗಳು…
ಕರ್ನಾಟಕ ಬಿಟ್ಟು ಉಳಿದ ನಾಲ್ಕು ಕೆಟಗರಿಗಳ ಒಟ್ಟಾರೆ ಕ್ರೂಡೀಕರಣವೇ ಕರ್ನಾಟಕದ ಒಟ್ಟಾರೆ ರೇಟಿಂಗ್.

 

ಈ ವಾರ ಕರ್ನಾಟಕದಲ್ಲಿ ಟಿವಿ9 108 ರೇಟಿಂಗ್ ಪಡೆದರೆ, ಪಬ್ಲಿಕ್ ಟಿವಿ 65, ಸುವರ್ಣ ನ್ಯೂಸ್ 42, ಈ ಟಿವಿ 28, ಬಿಟಿವಿ 27, ಉದಯ ನ್ಯೂಸ್ 17, ದಿಗ್ವಿಜಯ 15, ಪ್ರಜಾ ಟಿವಿ 12, ಕಸ್ತೂರಿ ನ್ಯೂಸ್ 10, ಸುದ್ದಿ ಟಿವಿ 9, ಸಮಯ ನ್ಯೂಸ್ 7, ರಾಜ್ ನ್ಯೂಸ್ 5 ಹಾಗೂ ಜನಶ್ರೀ 4 ರೇಟಿಂಗ್ ಪಡೆದಿವೆ.

ಪ್ರತೀ ವಾರ ಈ ನಂಬರ್‌ಗಳು ಬದಲಾಗುತ್ತವಾದ್ರೂ ಸ್ಥಾನಗಳಲ್ಲಿ ಅಂತಹ ಮಹತ್ವದ ಬದಲಾವಣೆ ಆಗೋದಿಲ್ಲ. ಟಿವಿ9 ಸತತವಾಗಿ ಹತ್ತು ವರ್ಷಗಳಿಂದ ಮೊದಲ ಸ್ಥಾನವನ್ನು ಕಾಯ್ದುಕೊಂಡು ಬಂದಿದೆ. ಹಾಗೂ ಪಬ್ಲಿಕ್ ಟಿವಿ ಇತ್ತೀಚಿನ ವಾರಗಳಲ್ಲಿ ಸುವರ್ಣ ನ್ಯೂಸ್ ಮೀರಿಸಿ ಎರಡನೇ ಸ್ಥಾನದಲ್ಲಿ ಭದ್ರವಾಗಿದೆ. ಇನ್ನು ಈ ಟಿವಿ ಹಾಗೂ ಬಿಟಿವಿ ನಡುವೆ ಆಗಾಗ ನೆಕ್ ಟು ನೆಕ್ ಫೈಟ್ ನಡೀತಿರುತ್ತೆ…

Rating Source : BARC india, Week 37, AA15+ YRS

Show More

Related Articles

1 thought on “ಯಾವ್ ಚಾನಲ್ಲಿಗೆ ಎಷ್ಟ್ ಟಿ.ಆರ್.ಪಿ ಬರುತ್ತೆ..?”

Leave a Reply

Your email address will not be published. Required fields are marked *

Close