ಏನ್ ಸುದ್ದಿ?

ಈ ವಾರ ಯಾವ ನ್ಯೂಸ್ ಚಾನಲ್ಲಿಗೆ ಎಷ್ಟು ಟಿ.ಆರ್.ಪಿ..?

ಬಾರ್ಕ್‌ನ 38ನೇ ವಾರದ ಟಿವಿ ರೇಟಿಂಗ್ ಬಿಡುಗಡೆಯಾಗಿದೆ. ಈ ವಾರ ಯಾವ್ಯಾವ ನ್ಯೂಸ್ ವಾಹಿನಿಗಳು ಯಾವ ಯಾವ ಸ್ಥಾನದಲ್ಲಿದೆ ಅಂತ ತಿಳ್ಕೊಳೋ ಸಮಯ ಇದು…


ಎಂದಿನಂತೆ ಟಿವಿ9 ಈ ವಾರವೂ ನಂಬರ್ 1. ಈ ಬಾರಿ ಕರ್ನಾಟಕದಲ್ಲಿ 105 ಪಾಯಿಂಟ್ ಗಳಿಸಿರೋ ಟಿವಿ9 ಕಳೆದ ವಾರದ 123ಕ್ಕೆ ಹೋಲಿಸಿದ್ರೆ 18 ಪಾಯಿಂಟ್ ಕಳೆದುಕೊಂಡಿದೆ.


ಎರಡನೇ ಸ್ಥಾನದಲ್ಲಿ ಪಬ್ಲಿಕ್ ಟಿವಿ ಮತ್ತು ಮೂರನೇ ಸ್ಥಾನದಲ್ಲಿ ಸುವರ್ಣ ನ್ಯೂಸ್ ಈ ವಾರವೂ ಮುಂದುವರೆದಿದೆ. ಕಳೆದ ವಾರ ಪಬ್ಲಿಕ್ ಟಿವಿ 78 ಪಾಯಿಂಟ್ ಪಡೆದರೆ, ಈ ವಾರ 66 ಪಾಯಿಂಟ್ ಪಡೆದು 12 ಪಾಯಿಂಟ್ ಕಳೆದುಕೊಂಡಿದೆ. ಸುವರ್ಣ ನ್ಯೂಸ್ 37ನೇ ವಾರದಲ್ಲಿ 42 ಪಾಯಿಂಟ್ ಗಳಿಸಿತ್ತು. ಈ ವಾರ 44 ಪಾಯಿಂಟ್‌ನಿಂದಾಗಿ 2 ಪಾಯಿಂಟ್ ಹೆಚ್ಚಿಸಿಕೊಂಡಿದೆ.


ನಾಲ್ಕನೇ ಸ್ಥಾನದಲ್ಲಿ ಈ ವಾರ ಈಟಿವಿ ನ್ಯೂಸ್ 29 ಪಾಯಿಂಟ್‌ ಪಡೆದ್ರೆ, ಐದನೇ ಸ್ಥಾನದಲ್ಲಿ ಬಿಟಿವಿ 27 ಪಾಯಿಂಟ್ ಪಡೆದಿದೆ.


ಇನ್ನುಳಿದಂತೆ ಉದಯ ನ್ಯೂಸ್ 20, ದಿಗ್ವಿಜಯ 16, ಪ್ರಜಾ ಟಿವಿ 13, ಕಸ್ತೂರಿ‌ ನ್ಯೂಸ್ 12, ಸುದ್ಧಿ 8, ಸಮಯ ನ್ಯೂಸ್ ಹಾಗೂ ಜನಶ್ರೀ 6, ಹಾಗೂ ರಾಜ್ ನ್ಯೂಸ್ 5 ಪಾಯಿಂಟ್ ಪಡೆದಿವೆ..

ಇದು ಈ ವಾರದ ಕರ್ನಾಟಕದ ನ್ಯೂಸ್ ವಾಹಿನಿಗಳ ಟಿ.ಆರ್.ಪಿ ಮಾಹಿತಿ… ಸದ್ಯದಲ್ಲೇ ತನ್ನ ಪ್ರಸಾರ ನಿಲ್ಲಿಸಲಿರುವ ಉದಯ ನ್ಯೂಸ್ ತನ್ನ ಕೊನೆಯ ದಿನಗಳಲ್ಲಿ ಉತ್ತಮ ರೇಟಿಂಗ್ ಪಡೆಯುತ್ತಿರುವುದು ಆಶ್ಚರ್ಯಕರ… ಇನ್ನುಳಿದಂತೆ, ಈ ವಾರ ಅಂತಹ ಮಹತ್ವದ ಸುದ್ದಿ ಸ್ಪೋಟವಾಗದ ಕಾರಣ, ಕಳೆದ ವಾರಕ್ಕಿಂತ ಟಿ.ಆರ್.ಪಿಯಲ್ಲಿ ಸ್ವಲ್ಪ ಇಳಿತ ಕಂಡಿದೆ.

Source : BARC Ratings Week 38. 15+ all adults

Show More

Related Articles

Leave a Reply

Your email address will not be published. Required fields are marked *

Close